More

    ಸಾರ್ವಜನಿಕರಿಗೆ ಮೂಲ ಸೌಲರ್ಕ ಒದಗಿಸುವಂತೆ ಜೆಡಿಎಸ್ ಅಧ್ಯಕ್ಷ ಎನ್.ಸೋಮಪ್ಪ ಮನವಿ

    ಸಂಡೂರು: ಸಂಡೂರಿನ ತಹಸಿಲ್, ತಾಪಂ, ಪುರಸಭೆ ಕಚೇರಿ, ತಾಲೂಕಿನ ತೋರಣಗಲ್ ನಾಡ ಕಚೇರಿ ಸೇರಿದಂತೆ ಅನೇಕ ಕಚೇರಿಗಳಲ್ಲಿ ಮಹಿಳೆಯರಿಗೆ ಶೌಚಗೃಹಗಳಿಲ್ಲ ಎಂದು ಜೆಡಿಎಸ್ ಅಧ್ಯಕ್ಷ ಎನ್.ಸೋಮಪ್ಪ ಹೇಳಿದರು.

    ಸ್ಥಳೀಯ ತಾಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಮಾತನಾಡಿದರು. ಪಟ್ಟಣದ ತಾಲೂಕು ಕಚೇರಿ ತಾಲೂಕಿನ ಹೋಬಳಿ ಮಟ್ಟದ ಚೋರನೂರು, ತೋರಣಗಲ್ ನಾಡ ಕಚೇರಿಗಳಲ್ಲಿ ಸರಿಯಾದ ಶೌಚಗೃಹ ವ್ಯವಸ್ಥೆ, ಶುದ ್ಧಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹಳ್ಳಿಯಿಂದ ಬರುವ ಜನರಿಗೆ ಕನಿಷ್ಠ ಕುಡಿವ ನೀರು ಹಾಗೂ ಶೌಚಗೃಹ ವ್ಯವಸ್ಥೆ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು. ತಾಪಂ ಹಾಗೂ ಜಿಪಂ ಚುನಾವಣೆಗೆ ಸಂಬಂಧಿಸಿದ ಕ್ಷೇತ್ರ ವಿಂಗಡಣೆ ವರದಿ ನ್ಯಾಯ ಸಮ್ಮತವಾಗಿದ್ದು ತಹಸೀಲ್ದಾರ್ ನೀಡಿರುವ ವರದಿಯನ್ನೇ ಅಂತಿಮ ಪಟ್ಟಿನ್ನಾಗಿ ಚುನಾವಣಾ ಆಯೋಗ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

    ಒಂದು ಕಡೆ ಕಾಂಗ್ರೆಸ್ ಮತ್ತೊಂದೆಡೆ ಬಿಜೆಪಿ ತಮಗಿಷ್ಟ ಬಂದಂತೆ ಬದಲಿಸಲು ಹವಣಿಸುತ್ತಿವೆ. ಇದಾವುದಕ್ಕೂ ಮಣಿಯದೆ ಯಥಾ ಸ್ಥಿತಿಯನ್ನೇ ಮುಂದುವರಿಸಬೇಕೆಂದು ಸೋಮಪ್ಪ ಒತ್ತಾಯಿಸಿದರು.

    ಬಳಿಕ ತೋರಣಗಲ್ ನಾಡ ಕಚೇರಿ ಉಪ ತಹಸೀಲ್ದಾರ್ ಸುಬ್ಬರಾವ್ ದೇಸಾಯಿಗೆ ಮನವಿ ಸಲ್ಲಿಸಲಾಯಿತು. ಕಮ್ಮತ್ತೂರು ಮಲ್ಲೇಶ್, ದೊಡ್ಡಮನೆ ಹುಸೇನ್ ಪೀರಾ, ಜನನಿ ಜನ್ಮ ಭೂಮಿ ಜಿಲ್ಲಾಧ್ಯಕ್ಷ ರಾಜುಖಾನ್, ಖಾದರ್ ಬಾಷಾ, ಎಸ್.ಕುಮಾರಸ್ವಾಮಿ, ಶಫಿ, ನರಸಿಂಹ, ಆಸೀಫ್, ಎನ್.ಚಿನ್ನಾಪುರಿ, ಬಂಡ್ರಿ ಮೂಕಪ್ಪ, ಕಾರೆ ದೇವೇಂದ್ರಪ್ಪ, ನಂದ್ಯಾನಾಯ್ಕ, ಮಾರೆಪ್ಪ ಹಾಗೂ ಇತರರಿದ್ದರು.

    ಕಮಿಷನ್‌ಗಾಗಿ ವಿಳಂಬ ಸಹಿಸುವಿಕೆ
    ಸಂಡೂರು: ಶಾಸಕರಿಗೆ ಕಮಿಷನ್ ಬರುವುದರಿಂದ ಕಾಮಗಾರಿಯ ವಿಳಂಬ ಸಹಿಸುತ್ತಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಸೋಮಪ್ಪ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, . ತಾಲೂಕಾದ್ಯಂತ ಸಾರಿಗೆ ವ್ಯವಸ್ಥೆ ಹದಗೆಟ್ಟು ಹೋಗಿದೆ. ವಿಠಲಾಪುರ, ಅಂತಾಪುರ, ಬಸಾಪುರ ಸೇರಿ ಅನೇಕ ಕಡೆ ಸಾರಿಗೆ ವ್ಯವಸ್ಥೆ ಸರ್ಮಪಕವಾಗಿಲ್ಲ . ತಾಲೂಕಿಗೆ ಎಷ್ಟು ಹೈಟೆಕ್ ಬಸ್‌ಗಳು ಬಂದಿವೆ ಎಂಬುದನ್ನು ತಿಳಿಸಬೇಕು ಎಂದು ಸವಾಲು ಎಸೆದರು. ಶಾಸಕರು ತಾಲೂಕಿನ ಅನೇಕ ಕಡೆಗಳಲ್ಲಿ ಗುದ್ದಲಿ ಪೂಜೆ ಮಾಡುತ್ತಾರೆ, ಬರುತ್ತಾರೆ ಆದರಲ್ಲಿ ರಸ್ತೆಗಳೇ ಆಗಿರುವುದಿಲ್ಲ. ಇದಕ್ಕೆ ಕಮ್ಮತ್ತೂರು ಗ್ರಾಮ ಒಂದು ನಿದರ್ಶನ ಎಂದರು. ಪುರಸಭೆ ಆಗಿ ಇಷ್ಟು ವರ್ಷವಾದರೂ ಯುಜಿಡಿ ಕೆಲಸ ಈಗ ಹಮ್ಮಿಕೊಂಡಿದ್ದಾರೆ. ಶ್ರೀಮಂತರ ಮನೆಯ ಮುಂದಿನ ರಸ್ತೆಗಳನ್ನು ಬೇಗ ನಿರ್ಮಾಣ ಮಾಡುತ್ತಾರೆ. ಯುಜಿಡಿ ನಡೆದ ಬಡವರ ಮನೆಗಳ ಮುಂದಿನ ಗುಂಡಿಗಳು ಹಾಗೇ ಉಳಿಸಲಾಗಿದೆ. ಕುರೆಕುಪ್ಪದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಐದು ವರ್ಷ ತೆಗೆದುಕೊಳ್ಳಲಾಗಿದೆ. ಸ್ಥಳೀಯ ಆಸ್ಪತ್ರೆಗೆ ಹೋದರೆ ನಮಗೇ ಕಾಯಿಲೆ ಬರುವಂತಿದೆ. ವೈದ್ಯರು ಔಷಧವನ್ನು ಹೊರಗೆ ಖರೀದಿಸಲು ಚೀಟಿ ಬರೆದು ಕೊಡುತ್ತಾರೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts