More

    ಮಧ್ಯಮಾವಧಿ ಶೇ.3 ಬಡ್ಡಿ ದರದಲ್ಲಿ ಸಾಲ

    
    

    ಸಂಡೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಧ್ಯಮಾವಧಿ ಶೇ.3 ಬಡ್ಡಿ ದರದಲ್ಲಿ ಸಾಲ ವಿತರಿಸುತ್ತಿದ್ದು, ಸಂಘದ ಸದಸ್ಯರು ಸದುಪಯೋಗ ಪಡೆದುಕೊಳ್ಳಬೇಕು ಅಧ್ಯಕ್ಷ ಜೆ.ಎಂ.ಶಿವಪ್ರಸಾದ್ ಹೇಳಿದರು.

    ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಈ ಮೊದಲು ಅಲ್ಪಾವಧಿ ಸಾಲ ಬೀಜ-ಗೊಬ್ಬರಕ್ಕೆ ವಿತರಿಸಲಾಗುತ್ತಿತ್ತು. ಈದೀಗ ಮಧ್ಯಮಾವಧಿ ಶೇ.3 ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

    ತೋಟಗಾರಿಕೆ ಬೆಳೆಗಳಲ್ಲಿ ಕೆಲಸ ಮಾಡಲು ಮಿನಿ ಟ್ರಾೃಕ್ಟರ್‌ಗೆ ಶೇ.85 ಸಾಲ, ಫಲಾನುಭವಿಯ ಶೇ.15 ವಂತಿಕೆಯ ಮೇಲೆ ಒಟ್ಟು 20.51ಲಕ್ಷ ರೂ.ಗಳಲ್ಲಿ 4 ಟ್ರಾೃಕ್ಟರ್ ನೀಡಲಾಗಿದೆ. ದೊಡ್ಡ ಟ್ರಾೃಕ್ಟರ್‌ಗೆ ಬೇಡಿಕೆ ಬಂದಿದ್ದು 6 ಎಕರೆ ನೀರಾವರಿ ಹೊಂದಿರಬೇಕು ಆಥವಾ 8 ಎಕರೆ ಒಣಭೂಮಿ ಹೊಂದಿರಬೇಕು ಎಂದರು.

    ಸಂಘದ ಸಿಇಒ ಕೆ.ಶಿವಲಿಂಗಪ್ಪ ಮಾತನಾಡಿ, ಕೊಳವೆಬಾವಿ, ಪೈಪ್‌ಲೈನ್, ಭೂ ಅಭಿವೃದ್ಧಿ, ಮುಳ್ಳು ತಂತಿ, ಕೃಷಿಹೊಂಡ ನಿರ್ಮಿಸಿಕೊಳ್ಳಲು ಒಂದು ಸಾವಿರ ರೈತರಿಗೆ 3ಲಕ್ಷ ರೂ.ವರೆಗೆ ಬಡ್ಡಿ ರಹಿತವಾಗಿ 7ಕೋಟಿ ರೂ. ಸಾಲ ನೀಡಲಾಗಿದೆ. ಮೂರು ಸ್ವಸಹಾಯ ಸಂಘ ಹಾಗೂ ಇಬ್ಬರು ರೈತರಿಂದ ಹೈನುಗಾರಿಕೆಗೆ ಅರ್ಜಿ ಸಲ್ಲಿಕೆಯಾಗಿದೆ. ಮುಂದಿನ ಮುಂಗಾರಿಗೆ ರಸಗೊಬ್ಬರ ಜತೆಗೆ ಬಿತ್ತನೆ ಬೀಜ, ಔಷಧ ವಿತರಣೆಗೆ ಸಂಘ ನಿರ್ಧರಿಸಿದೆ. ಮಾ.27ಕ್ಕೆ 91.26ಲಕ್ಷ ರೂ. ಸಾಲ ಬಾಕಿಯಿದೆ ಎಂದು ತಿಳಿಸಿದರು.
    ಲಕ್ಷ್ಮೀಪುರದ ಉಪ್ಪಾರಳ್ಳಿ ವಿಶಾಲಾಕ್ಷಿ, ತಾರಾನಗರ ಶಾಂತಮ್ಮ, ಯಶವಂತನಗರದ ಆಕಾಶ್‌ಕುಮಾರ್, ಶಿವಳ್ಳಿ ನಿಂಗವ್ವಗೆ ಸಂಘದಿಂದ ಮಿನಿಟ್ರಾೃಕ್ಟರ್ ಕೀಗಳನ್ನು ವಿತರಿಸಲಾಯಿತು.

    ಸಂಘದ ನಿರ್ದೇಶಕರಾದ ರಾಮಾನಾಯ್ಕ, ಉಪ್ಪಾರಳ್ಳಿ ಶಿವಮೂರ್ತಿ, ಗಾಣಿಗರ ವೀರೇಶ್, ರೊಡ್ಡಯ್ಯನವರ ತಿಪ್ಪಯ್ಯ, ಜೆ.ಶರಣಪ್ಪ, ಇಸ್ಮಾಯಿಲ್, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಟಿ.ಹನುಮಂತನಾಯ್ಕ, ಕ್ಷೇತ್ರಾಧಿಕಾರಿ ಗಂಡಿ ಮಲಿಯಪ್ಪ, ಪುರಸಭೆ ಸದಸ್ಯ ಎಲ್.ಎಚ್. ಶಿವಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts