More

    ಬ್ಯಾಂಕ್‌ಗಳಿಂದ ರೈತರಿಗೆ ನೋಟಿಸ್


    ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಆಕ್ರೋಶ

    ಸಂಡೂರು: ರಾಜ್ಯದ 190 ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿವೆ. ಅನ್ನ ನೀಡುವ ರೈತರ ಪರಿಸ್ಥಿತಿಗೆ ಬೆಂಬಲವಾಗಿ ನಿಲ್ಲದೆ ಕೇಂದ್ರ ಸರ್ಕಾರ ಪರಿಹಾರದಿಂದ ನುಣುಚಿಕೊಳ್ಳುತ್ತಿದೆ. ರಾಜ್ಯ ಸರಕಾರ ಕೇವಲ ರೂ.2000 ನೀಡಲು ಮುಂದಾಗಿದೆ. ಬರಗಾಲವನ್ನು ರಾಜ್ಯ-ಕೇಂದ್ರ ಸರ್ಕಾರ ತಮ್ಮ ಆಟಕ್ಕೆ ಬಳಸಿಕೊಳ್ಳುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದ ಯಶವಂತ ವಿಹಾರ ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸೋಮವಾರ ಮಾತನಾಡಿದರು. ಬರಗಾಲದಲ್ಲೂ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ನೀಡುತ್ತಿವೆ. ಕುಡಿಯುವ ನೀರಿಗೆ, ದುಡಿಯುವ ಕೂಲಿಗೆ ಪರದಾಟ ಉಂಟಾಗಿದೆ. ಕೇಂದ್ರದ ಪರಿಣಿತರ ತಂಡವೂ ಕೂಡಾ ಸಮೀಕ್ಷೆ ಮಾಡಿದೆ. ಆದರೂ ಪರಿಹಾರದ ಬಗೆಗೆ ಕೇಂದ್ರ ಮೌನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತುಂಗಭದ್ರಾ ಹೂಳು ಹೆಚ್ಚಳದ ಬಗ್ಗೆ ಅಂದು ಧ್ವನಿ ಎತ್ತಿದ್ದ ಶ್ರೀರಾಮುಲು ಅವರು ಡಬಲ್ ಇಂಜಿನ್ ಸರ್ಕಾರ ಆಡಳಿತ ನಡೆಸಿದಾಗಲೂ ಚಕಾರ ಎತ್ತಲಿಲ್ಲ. ಜಿಲ್ಲಾ ಖನಿಜ ನಿಧಿಯನ್ನು ರಸ್ತೆ, ಸೇತುವೆ, ಕಟ್ಟಡ ನಿರ್ಮಾಣಕ್ಕೆ ಸೀಮಿತಗೊಳಿಸಬಾರದು. ರೈತರಿಗೆ ಕುರಿ, ಕೋಳಿ, ಹೈನುಗಾರಿಕೆ ಪ್ರೋತ್ಸಾಹಕ್ಕೆ ಬಳಸಬೇಕೆಂದು ಒತ್ತಾಯಿಸಿದರು.

    ಬ್ಯಾಂಕ್‌ಗಳಿಂದ ರೈತರಿಗೆ ನೋಟಿಸ್
    ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ ರೈತರು.

    ಸ್ವಾಮಿನಾಥನ್ ಅವರಿಗೆ ಭಾರತರತ್ನ ನೀಡುತ್ತಾರೆ. ಆದರೆ ರೈತರ ಬಗೆಗಿನ ಅವರ ಸಲಹೆಗೆ ಬೆಲೆ ಕೊಡಲಿಲ್ಲ. ಮಾರ್ಚ್ 14ರಂದು ದೆಹಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲು 10 ಲಕ್ಷ ಜನರು ಸೇರುವ ಉದ್ದೇಶ ಹೊಂದಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಹಸಿರು ಟವೆಲ್‌ಗೂ ಗಣಿಧೂಳು ಹತ್ತಿ ಭ್ರಷ್ಟಾಚಾರದ ಸೋಂಕು ತಾಕಿದೆ. ಸಂಡೂರು ಭಾಗದಲ್ಲಿ ಬಿ.ಕರಾಬು ಎಂದು ತಿದ್ದುಪಡಿ ಮಾಡಿ ಕಾರ್ಖಾನೆಗಳಿಗೆ ಮಾರಾಟ ಮಾಡುವ ಹುನ್ನಾರ ನಡೆದಿದ್ದು, ರೈತರು ಈ ಬಗ್ಗೆ ಜಾಗೃತರಾಗಿರಿ ಎಂದು ಎಚ್ಚರಿಸಿದರು.ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಕೆ.ನಾಯ್ಡು, ಕಾರ್ಯಾಧ್ಯಕ್ಷ ವೀರಸಂಗಯ್ಯ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳ ಅಕ್ಕಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕಿರಣ ಪೂಣಚ್ಚ ಮಾತನಾಡಿದರು.

    ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮೇಟಿ, ವಿಭಾಗೀಯ ಕಾರ್ಯದರ್ಶಿ ಗೋಣಿಬಸಪ್ಪ, ಸಿದ್ದನಗೌಡ ಪಾಟೀಲ್, ವಿಜಯ ನಗರ ಜಿಲ್ಲಾ ಘಟಕದಾಧ್ಯಕ್ಷ ಸಿದ್ದನಗೌಡ, ಪ್ರಮುಖ ಮೌನೇಶ್, ದೇವೇಂದ್ರಪ್ಪ, ನೀಲಕಂಠ, ವೀರೇಶ್, ಸುಭಾನ್ ತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts