More

    ಸರ್ಕಾರದ ಕಠಿಣ ಕ್ರಮಕ್ಕೆ ವಿರೋಧ – ನಾಡಕಚೇರಿ ಮುಂದೆ ಪ್ರತಿಭಟನೆ

    ಸಂಡೂರು: ಪಾನ್‌ಕಾರ್ಡ್, ಆಧಾರ ಕಾರ್ಡ್ ಲಿಂಕ್‌ಮಾಡಲು ಸರ್ಕಾರ ಮಾ.31ವರೆಗೆ 1000ರೂ. ದಂಡವನ್ನು ವಿಧಿಸಿರುವುದು ತರವಲ್ಲ ಎಂದು ಡಿವೈಎಫ್‌ಐ ತಾಲೂಕು ಅಧ್ಯಕ್ಷ ಶಿವು ಹೇಳಿದರು. ತಾಲೂಕಿನ ತೋರಣಗಲ್‌ನ ನಾಡಕಚೇರಿ ಮುಂದೆ ಆಯೋಜಸಿದ್ದ ಪ್ರತಿಭಟನೆ ಉದ್ದೇಶಿಸಿ ಬುಧವಾರ ಮಾತನಾಡಿದರು.

    ಬಡಜನರಿಂದ ಲೂಟಿ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಜನ ಸಾಮಾನ್ಯರು ತೀವ್ರ ವಿರೋಧದಿಂದಾಗಿ ಗಡುವನ್ನು ಜೂನ್ 30 ರವರೆಗೆ ಮಾತ್ರ ವಿಸ್ತರಿಸಿದೆ ವಿನಃ ದಂಡದ ಹೆಸರಲ್ಲಿ ಸುಲಿಗೆಗೆ ಮುಂದಾಗಿರುವುದನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ. ದಂಡದ ರೂಪದಲ್ಲಿ ಜನರ ಹಣವನ್ನು ದೋಚಿ, ಲಾಭ ಮಾಡಿಕೊಳ್ಳಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ. ಆಧಾರ ಲಿಂಕ್ ಆಗಿಲ್ಲವೆಂದು ಯಾವುದೇ ಸೇವೆಯನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದಾಗ್ಯೂ ದಂಡ ಕಟ್ಟಿ ಲಿಂಕ್ ಮಾಡಲು ಕಠಿಣ ಕ್ರಮ ಕೈಗೊಂಡಿರುವ ಕೇಂದ್ರ ಸರಕಾರದ ಕ್ರಮ ಸರಿಯಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts