More

    ಕ್ಷೇತದಲ್ಲಿ ಪ್ರತಿಯೊಬ್ಬರೂ ಶಾಸಕರಿದ್ದಂತೆ- ಶಾಸಕ ಈ.ತುಕಾರಾಮ್ ಹೇಳಿಕೆ

    ಸಂಡೂರು: ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಡಿಜಿಟಲ್ ಲೈಬ್ರರಿ, ಸಮುದಾಯ ಭವನ, ಆರ್‌ಒ ಪ್ಲಾಂಟ್ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಈ.ತುಕಾರಾಮ್ ಭರವಸೆ ನೀಡಿದರು.

    ಪಟ್ಟಣದ ದೌಲತ್‌ಪುರ ರಸ್ತೆಯಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಭವನವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು.

    ಅಂಬೇಡ್ಕರ್ ಭವನದ ಮೇಲೊಂದು ಕೊಠಡಿ ನಿರ್ಮಿಸಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ನೀಡಲಾಗುವುದು. ಇದರಿಂದ ಉದ್ಯೋಗ ಪಡೆದುಕೊಳ್ಳಲು ಸಹಾಯವಾಗಲಿದೆ. ಬುದ್ಧ, ಬಸವ ಅಂಬೇಡ್ಕರ್ ಹಾದಿಯಲ್ಲಿ ಸಮ ಸಮಾಜವನ್ನು ಕಟ್ಟುವ ಕೆಲಸ ಆಗಬೇಕಿದೆ. ದಲಿತ ಸಮುದಾಯವು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕಾಗಿದೆ. ಸಂಡೂರಿನಲ್ಲಿ ನಾನು ಮಾತ್ರ ಶಾಸಕನಲ್ಲ ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಶಾಸಕರಿದ್ದಂತೆ. ಇದನ್ನು ಕಂಡು ಕ್ಷೇತ್ರಕ್ಕೆ ಸ್ಪರ್ಧೆಗೆ ಬಂದವರು ಹೆದರಿಕೊಂಡು ಹೋದರು ಎಂದು ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಶ್ರೀರಾಮುಲುಗೆ ಕುಟುಕಿದರು.

    ಬಳ್ಳಾರಿ ಜಿಲ್ಲಾ ಗ್ರಾಮೀಣ ಪ್ರಚಾರ ಸಮಿತಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಮಾತನಾಡಿ, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಿ ಬೊಮ್ಮಾಯಿ ಸರ್ಕಾರ ಗೊಂದಲ ಸೃಷ್ಟಿಸಿದೆ. ಎಸ್ಸಿಯಲ್ಲಿನ ಎಡಗೈ ಸಮುದಾಯಕ್ಕೆ ಶೇ.6, ಬಲಗೈ ಸಮಾಜಕ್ಕೆ ಶೇ.5.5, ಸ್ಪರ್ಶ ಜಾತಿಗಳಿಗೆ ಶೇ. 4.5 ಹಾಗೂ ಇತರರಿಗೆ ಶೇ.1 ಒಳಮೀಸಲಾತಿ ಒದಗಿಸಿದೆ. ಎಸ್ಸಿಗಳಿಗೆ ಶೇ.17 ಮೀಸಲಾತಿಗೆ ಈಚೆಗೆ ನೀಡಿದ್ದ ಒಪ್ಪಿಗೆ ಊರ್ಜಿತವಾಗಿಲ್ಲ. ಅಂದಿನ ಮೀಸಲಾತಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿಲ್ಲ. ಈಗ ಒಳಮೀಸಲಾತಿ ಒದಗಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ಯಪಡಿಸಿದರು.

    ಬಿಜೆಪಿ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದೆ. ಹಾಗಾಗಿ ಇದೀಗ ಸಮುದಾಯದ 2ಬಿ ಮೀಸಲಾತಿಯನ್ನು ಕಸಿದುಕೊಂಡಿದೆ. ಮುಂದಿನ ಬಾರಿ ಬಿಜೆಪಿ ದಲಿತರನ್ನು ಟಾರ್ಗೆಟ್ ಮಾಡಲಿದೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಮುಖಂಡ ವಿಶ್ವಾಸ್ ಲಾಡ್, ಡಿಎಸ್‌ಎಸ್ ಬಳ್ಳಾರಿ ಜಿಲ್ಲಾ ಗೌರವ ಅಧ್ಯಕ್ಷ ಮಾನಯ್ಯ, ತಾಲೂಕು ಸಂಚಾಲಕ ರಾಮಕೃಷ್ಣ ಹೆಗಡೆ, ಹಂಪಿ ಮಾತಂಗ ಮಠದ ಪೂರ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.

    ಐಹೊಳೆ ನಿಂಗಪ್ಪ ಅಧ್ಯಕ್ಷತೆ ವಹಸಿದ್ದರು. ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ್, ಉಪಾಧ್ಯಕ್ಷ ಈರೇಶ್ ಸಿಂದೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಕಿ ಸತೀಶ್, ಮಾಜಿ ವಾಡಾ ಅಧ್ಯಕ್ಷರಾದ ಮಹಾಬಲೇಶ್ ಚಿತ್ರಿಕಿ, ರೋಷನ್ ಜಮೀರ್, ಕುರುಬರ ಸತ್ಯಪ್ಪ, ಜಯರಾಮ್, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಜಯಣ್ಣ, ಜೆಬಿಟಿ ಬಸವರಾಜ್, ಆಶಾಲತಾ ಸೋಮಪ್ಪ, ಈರಮ್ಮ, ಬಿಜಿಸಿದ್ದೇಶ್, ಎಲ್.ಹೆಚ್.ಶಿವಕುಮಾರ್, ವಿಎಸ್‌ಎಲ್.ಮರಿಸ್ವಾಮಿ, ವಣಿಕೇರಿ ಸುರೇಶ್, ಛಲವಾದಿ ಅಶೋಕ್, ಟಿ.ಎಂ.ಶಿವಕುಮಾರ್, ಎಂ.ಶಿವಲಿಂಗಪ್ಪ, ಹನುಮೇಶ್, ದೇವದಾಸ್, ಕೆ.ಆರ್.ಕುಮಾರಸ್ವಾಮಿ, ಶ್ರೀಪಾದಸ್ವಾಮಿ, ಧರ್ಮಾನಾಯ್ಕ, ಹೆಚ್.ಬಿ.ತಿಪ್ಪೇಸ್ವಾಮಿ, ಕಮತೂರು ಮಲ್ಲೇಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts