More

    10 ವಿದ್ಯಾರ್ಥಿಗಳು ಅನುತ್ತೀರ್ಣರಾದ ಪ್ರಕರಣ, ಸಂಡೂರು ಡಿಗ್ರಿ ಕಾಲೇಜಿಗೆ ವಿಎಸ್‌ಕೆ ವಿವಿ ಸಮಿತಿ ಭೇಟಿ

    ಸಂಡೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಎಸ್‌ಸಿ, ಪಿಎಂಸಿಎಸ್ (ಫಿಸಿಕ್ಸ್-ಮ್ಯಾಥ್ಸ್-ಕಂಪ್ಯೂಟರ್ ಸೈನ್ಸ್) ಪರೀಕ್ಷೆ ಬರೆದ 10 ವಿದ್ಯಾರ್ಥಿಗಳು ಅನುತ್ತೀರ್ಣರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಎಸ್‌ಕೆ ವಿವಿಯ ವಿಚಾರಣಾ ಸಮಿತಿ ಗುರುವಾರ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

    ಫೆ.19ರಂದು ವಿಜಯವಾಣಿ ‘ಪರೀಕ್ಷೆಗೆ ಹಾಜರಾದರೂ ಫೇಲ್ !’ ಶೀರ್ಷಿಕೆಯಡಿ ಪ್ರಕಟಿಸಿದ ವರದಿಯಿಂದ ಎಚ್ಚೆತ್ತ ವಿವಿ ಘಟನೆ ಕುರಿತು ಸಮಿತಿ ರಚನೆ ಪರಿಶೀಲನೆಗೆ ಕಳಿಸಿದೆ. ಕಾಲೇಜಿನ ಪ್ರಾಚಾರ್ಯ ಡಾ.ಹುಚ್ಚೂಸಾಬ್, ಬಿಎಸ್‌ಸಿ, ಪಿಎಂಸಿಎಸ್ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಿತಿ ಸದಸ್ಯರು ಪ್ರತ್ಯೇಕವಾಗಿ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿದರು. ಪರೀಕ್ಷೆ ಬರೆಯಲು ಅವಕಾಶ ನೀಡದೆ ಅನುತ್ತೀರ್ಣಗೊಳಿಸಿದ ಬಗ್ಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮರ್ಚೇಡ್, ಸದಸ್ಯೆ ಡಾ.ಪದ್ಮಾ ವಿಠಲ್, ವಿಎಸ್‌ಕೆ ವಿವಿ ಮೌಲ್ಯ ಮಾಪನಾ ವಿಭಾಗದ ಉಪ ಕುಲಸಚಿವ ಮಹದೇವ ಕಣದಾಳ್ ಇತರರಿದ್ದರು.

    ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಬಿಎಸ್‌ಸಿ ವಿಭಾಗಕ್ಕೆ ಮುಖ್ಯಸ್ಥರಾಗಿದ್ದಾರೆ. ಹಾಲ್ ಟಿಕೆಟ್‌ನಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ ವಿಷಯದಲ್ಲಿ ಡಮ್ಮಿ ಎಂದು ಬಂದಾಗ ವಿವಿಯೊಂದಿಗೆ ಮಾಹಿತಿ ಪಡೆಯಬಹುದಿತ್ತು. ಆದರೆ, ಮಕ್ಕಳ ಮುಂದಿನ ಭವಿಷ್ಯಕ್ಕೆ ಮಾರಕವಾಗದಂತೆ ಕ್ರಮಕೈಗೊಳ್ಳಲು ಮನವಿ ಮಾಡಲಾಗುವುದು.
    | ಡಾ.ಪದ್ಮ ವಿಠಲ್ ಸಿಂಡಿಕೇಟ್ ಸದಸ್ಯೆ ವಿಎಸ್‌ಕೆ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts