More

    ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಡಿಸಿ ಎಚ್ಚರಿಕೆ

    ಕೈಗಾರಿಕೆ ಪ್ರದೇಶದಲ್ಲಿ ಹೊರರಾಜ್ಯದಿಂದ ಕಾರ್ಮಿಕರನ್ನು ಕರೆತರುವಂತಿಲ್ಲ

    ಸಂಡೂರು: ಕರೊನಾ ಹಿನ್ನೆಲೆಯಲ್ಲಿ ತಾಲೂಕಿನ ತೋರಣಗಲ್ ಕೈಗಾರಿಕೆ ಪ್ರದೇಶದಲ್ಲಿ ಹೊರ ರಾಜ್ಯದಿಂದ ಗುತ್ತಿಗೆ ಕಾರ್ಮಿಕರನ್ನು ಕರೆತಂದರೆ ಅಂಥ ಕಂಪನಿಗಳ ಮತ್ತು ಗುತ್ತಿಗೆದಾರರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸೋಮವಾರ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಂದಾಲ್ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ಕರೆದು ಪ್ರಭಾರ ತಹಸೀಲ್ದಾರ್ ವಿಶ್ವಜಿತ್ ಮೆಹ್ತಾ ಸೋಮವಾರ ಸಂಜೆ ಚರ್ಚಿಸಿದ್ದಾರೆ.

    ಜಿಂದಾಲ್ ಮತ್ತು ಅದರ ಅಸೋಸಿಯೇಟೆಡ್ ಕಂಪನಿಗಳಲ್ಲಿ 450ಕ್ಕೂ ಹೆಚ್ಚು ಲೇಬರ್ ಕಾಂಟ್ರಾೃಕ್ಟರ್‌ಗಳಿದ್ದಾರೆ. ಸೋಮವಾರ ಸೋಂಕು ಕಾಣಿಸಿಕೊಂಡ 26 ಜನರಲ್ಲಿ ಹೆಚ್ಚಾಗಿ ಬಿಹಾರ, ಉತ್ತರ ಪ್ರದೇಶದವರು. ಸೀಲ್‌ಡೌನ್ ಪ್ರದೇಶದಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದು ಬಿಡಲಾಗಿದೆ ಎಂಬ ಆರೋಪ ಸ್ಥಳಿಯವಾಗಿ ಕೇಳಿಬರುತ್ತಿದೆ.

    ಕಳೆದ ಎರಡು ದಿನಗಳಲ್ಲಿ ಜಿಂದಾಲ್ ವಿದ್ಯಾನಗರ 13, ಎಚ್‌ಎಸ್‌ಟಿ 2, ಶಂಕರಗುಡ್ಡ ಕಾಲನಿ 4, ಸನ್ ರೈಸ್ ಕಾಲನಿ 2, ತೋರಣಗಲ್ 6, ತೋರಣಗಲ್ ರೈನಿ. 2, ರಾಜಾಪುರ ಸೋಲಾರ ಪ್ಲಾಂಟ್ 5, ಕೆಪಿಸಿಎಲ್ ಕಾಲನಿ 2, ವಡ್ಡು 1, ಪವರ್ ಪ್ಲಾಂಟ್ 3, ಅಂತಾಪುರ 2, ಚೋರುನೂರು ಹೋಬಳಿ 5, ಸಂಡೂರಿನಲ್ಲಿ ಒಬ್ಬರಿಗೆ ಸೋಂಕು ಕಾಣಿಸಿದೆ. ಕಳೆದ ವರ್ಷದ ಎರಡನೇ ಅಲೆಯಲ್ಲಿ ಕಲ್ಯಾಣ ಕರ್ನಾಟಕದ ಹಾಟ್‌ಸ್ಪಾಟ್ ಕುಖ್ಯಾತಿಗೆ ಒಳಗಾಗಿದ್ದ ಜಿಂದಾಲ್ ಕಾರ್ಖಾನೆ ಪ್ರದೇಶವು ಈ ಬಾರಿಯೂ ಅದೇ ಹಾದಿ ಹಿಡಿದಿದೆ. 2022ರ ಜ.2ರಿಂದ ಆರಂಭವಾದ ಸೋಂಕುಗಳ ಸಂಖ್ಯೆ ಕೇವಲ 9-10 ದಿನದಲ್ಲಿ 100 ದಾಟಿದರೆ, 146 ಸಕ್ರಿಯ ಪ್ರಕರಣಗಳಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.


    ಡಿಸಿ ಆದೇಶದ ಮೇರೆಗೆ ಹೊರ ರಾಜ್ಯದ ಕಾರ್ಮಿಕರನ್ನು ಕರೆ ತರಬಾರದು. ಕಾರ್ಖಾನೆಯಲ್ಲಿ ಕೆಲಸ ಮಾಡುವವರನ್ನು ಹೊರಗೆ ಸಂಚರಿಸದಂತೆ ಎಚ್ಚರಿಕೆ ನೀಡಬೇಕು. ನಿರ್ಲಕ್ಷಿಸಿದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಜಿಂದಾಲ್ ಅಧಿಕಾರಿಗಳು ಮತ್ತು ಗುತ್ತಿಗಾರದಾರರಿಗೆ ಸೂಚಿಸಲಾಗಿದೆ.
    | ವಿಶ್ವಜಿತ್ ಮೆಹ್ತಾ, ಪ್ರಭಾರ ತಹಸೀಲ್ದಾರ್ ಸಂಡೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts