More

    ನಾಲ್ಕನೇ ದಿನವೂ ಸನತ್‌ ಸುಳಿವಿಲ್ಲ

    ಬೆಳ್ತಂಗಡಿ: ಮಲವಂತಿಗೆ ಗ್ರಾಪಂ ವ್ಯಾಪ್ತಿಯ ಬಂಗಾರಪಲ್ಕೆ ಜಲಪಾತ ಸಮೀಪ ಗುಡ್ಡ ಕುಸಿತಗೊಂಡು ನಾಪತ್ತೆಯಾಗಿರುವ ಉಜಿರೆಯ ಯುವಕ ಸನತ್‌ಗಾಗಿ ಗುರುವಾರವೂ ಶೋಧ ನಡೆಯಿತು. ಸಂಜೆಯಾದರೂ ಆತನ ಪತ್ತೆಯಿಲ್ಲ. ರಾತ್ರಿ ವೇಳೆ ಕಾಡು ಘಟ್ಟಗಳ ನಡುವೆ ಕಾರ್ಯಾಚರಣೆ ಅಸಾಧ್ಯವಾದ ಕಾರಣ ಶೋಧ ಸ್ಥಗಿತಗೊಳಿಸಲಾಯಿತು.

    ಪುತ್ತೂರು ಸಹಾಯಕ ಕಮಿಷನರ್ ಸತೀಶ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ ಸ್ಥಳೀಯ ಶಾಸಕರ ವಿನಂತಿಯಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು ಇದರಂತೆ ಶುಕ್ರವಾರ ಬೆಳ್ತಂಗಡಿ ಎಸ್‌ಐ ನಂದಕುಮಾರ್ ಮಾರ್ಗದರ್ಶನದಲ್ಲಿ ಕ್ರಶರ್ ಯಂತ್ರಗಳನ್ನು ತರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎನ್‌ಡಿಆರ್‌ಎಫ್ ತಂಡ ಮತ್ತು ಸ್ಥಳೀಯರ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಬೇಕಾಗಿದೆ.ಪರಿಸರದಲ್ಲಿ ತಿಗಣೆಗಳ ಕಾಟ ಅಧಿಕವಾಗಿದ್ದು ಸೂಕ್ತ ರಕ್ಷಣಾ ವ್ಯವಸ್ಥೆಗೆ ಪ್ರಾತಿನಿಧ್ಯ ನೀಡಲಾಗುವುದು ಎಂದರು.

    ಸರ್ಕಾರದಿಂದ ಶೋಧ ಕಾರ್ಯಾಚರಣೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಈಗಾಗಲೇ ಘಟನೆ ಬಗ್ಗೆ ಸರ್ಕಾರದ ಗಮನಸೆಳೆಯಲಾಗಿದ್ದು, ಸಚಿವರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸೂಚನೆಯಂತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸತೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts