More

    ಸಂಪಗಾಂವ ಗ್ರಾಮದಲ್ಲಿ ಹೆಚ್ಚಿದ ಆತಂಕ

    ಬೈಲಹೊಂಗಲ: ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಕ್ವಾರಂಟೈನ್‌ದಲ್ಲಿದ್ದ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರ ಗ್ರಾಮವನ್ನು ಸಂಪೂರ್ಣ ಬಂದ್ ಮಾಡಿ ಮುಂಜಾಗೃತಾ ಕ್ರಮ ಜರುಗಿಸಲಾಯಿತು.

    ಗ್ರಾಮದ 7 ಜನರು ಅಜ್ಮೀರದಿಂದ ಆಗಮಿಸುತ್ತಿದ್ದಂತೆ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಏಳು ಜನರಲ್ಲಿ ಇಬ್ಬರಿಗೆ ಸೋಂಕು ದೃಢ ಪಡುತ್ತಿದ್ದಂತೆ ತಾಲೂಕಾ ಡಳಿತ ಗ್ರಾಮದ ಕ್ವಾರಂಟೈನ್ ಸ್ಥಳದ 200 ಮೀಟರ್ ಪ್ರದೇಶವನ್ನು ಸಂಪೂರ್ಣ ಸೀಲ್‌ಡೌನ್ ಮಾಡಿ ಅಂಗಡಿ-ಮುಂಗಟ್ಟುಗಳನ್ನು ಬಂದ್‌ಮಾಡಿಸಿತು.

    ಇಲ್ಲಿಯವರೆಗೆ ತಾಲೂಕಿನಲ್ಲಿ ಯಾವುದೇ ಪ್ರಕರಣ ಇಲ್ಲದ್ದರಿಂದ ನಿರ್ಭಿತಿಯಿಂದ ಇದ್ದ ಜನರು ಸೋಂಕು ದೃಢಪಡುತ್ತಿದ್ದಂತೆ ಗಾಬರಿಗೊಂಡಿ ದ್ದಾರೆ. ಗ್ರಾಮದಲ್ಲಿ ಕಾಳು ವ್ಯಾಪಾರ ಮಾಡುತ್ತಿದ್ದ ಯುವಕರು ಪ್ರವಾಸಕ್ಕೆ ತೆರಳಿ 15 ದಿನಗಳ ಹಿಂದೆ ಮರಳಿದ್ದರು. 7 ಜನರು ಒಟ್ಟಿಗೆ ಇದ್ದರು ಎನ್ನಲಾಗುತ್ತಿದೆ. ಸೋಂಕಿತರ ಸಂಬಂಧಿಕರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಹಸೀಲ್ದಾರ್ ಡಾ.ದೊಡ್ಡಪ್ಪ ಹೂಗಾರ, ತಾಲೂಕು ಪಂಚಾಯಿತಿ ಇಒ ಸಮೀರ ಮುಲ್ಲಾ, ಪಿಎಸ್‌ಐ ಈರಪ್ಪ ರಿತ್ತಿ, ತಾಲೂಕು ವೈದ್ಯಾಧಿಕಾರಿ ಡಾ. ಸಂಜಯ ಸಿದ್ದನ್ನವರ, ಪಿಡಿಒ ಜ್ಯೋತಿ ಉಪ್ಪಿನ ನೇತೃತ್ವದಲ್ಲಿ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಹಾಕಿಕೊಂಡು ಓಡಾಡುವಂತೆ ಸೂಚಿಸಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುವುದು ಎಂದು ತಾಲೂಕು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts