More

    ಆರ್ಯನ್​ ಖಾನ್​ ಡ್ರಗ್ಸ್​ ಕೇಸಲ್ಲಿ ಸಮೀರ್​ ವಾಂಖೇಡೆ ತನಿಖಾಧಿಕಾರಿಯಲ್ಲ: ಬಂದಿತು ಸ್ಪಷ್ಟನೆ

    ಮುಂಬೈ: ಮುಂಬೈ ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನಲ್ಲಿ ಬಾಲಿವುಡ್​ ನಟ ಶಾರುಖ್​ ಖಾನ್​ರ ಮಗ ಆರ್ಯನ್​ ಖಾನ್​ ಬಂಧಿಸಲ್ಪಟ್ಟಾಗಿನಿಂದ ಭಾರೀ ಚರ್ಚೆಯಲ್ಲಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ)ದ ಅಧಿಕಾರಿಯೆಂದರೆ ವಲಯ ನಿರ್ದೇಶಕರಾಗಿರುವ ಸಮೀರ್​ ವಾಂಖೇಡೆ. ಇದೀಗ ಅವರು ಈ ಡ್ರಗ್ಸ್​ ಕೇಸಿನ ತನಿಖಾಧಿಕಾರಿಯಲ್ಲ ಎಂದು ಎನ್​ಸಿಪಿ ದೆಹಲಿ ಉಪಮಹಾನಿರ್ದೇಶಕ(ಡಿಡಿಜಿ) ಜ್ಞಾನೇಶ್ವರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

    ವಾಂಖೇಡೆ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್​ ಮತ್ತು ಡ್ರಗ್ಸ್​ ಕೇಸಿನ ಸ್ವತಂತ್ರ ಸಾಕ್ಷಿ ಎನ್ನಲಾದ ಪ್ರಭಾಕರ್​ ಸೈಲ್​ ಸುಲಿಗೆ ಮತ್ತು ಹಣ ವಸೂಲಿ ಆರೋಪಗಳನ್ನು ಮಾಡಿದ್ದಾರೆ, ಈ ಬಗ್ಗೆ ಈಗಾಗಲೇ ಮುಂಬೈ ಪೊಲೀಸರು ವಾಂಖೇಡೆ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಎನ್​ಸಿಬಿ ಕೂಡ ಅವರ ವಿರುದ್ಧ ಇಲಾಖೆ ಮಟ್ಟದ ವಿಜಿಲೆನ್ಸ್​ ತನಿಖೆ ಆರಂಭಿಸಿದ್ದು, ಡಿಡಿಜಿ ಜ್ಞಾನೇಶ್ವರ್ ಸಿಂಗ್ ಆ ತನಿಖೆಯ ಜವಾಬ್ದಾರಿ ಹೊತ್ತಿದ್ದಾರೆ. ಹೀಗಿರುವಾಗ ಸಮೀರ್​ ವಾಂಖೇಡೆ ಅವರೇ ಆರ್ಯನ್ ಆರೋಪಿಯಾಗಿರುವ ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನ ಸೂತ್ರಧಾರಿ ಎಂದು ಬಿಂಬಿಸಲಾಗುತ್ತಿರುವ ಮತ್ತು ಅವರ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ, ಸಿಂಗ್,​ ಇಂದು ಸುದ್ದಿಗಾರರಿಗೆ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಮುಂದಿನ ಏಪ್ರಿಲ್​ನಿಂದ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಳ್ಳೋಲ್ಲ! ಹೀಗೆಂದವರು ಯಾರು, ಏಕೆ?

    “ಸಮೀರ್ ವಾಂಖೆಡೆ ಈ ಪ್ರಕರಣದ ತನಿಖಾಧಿಕಾರಿಯಲ್ಲ ಎಂದು ಸ್ಪಷ್ಟಪಡಿಸಲಿಚ್ಛಿಸುತ್ತೇನೆ. ಅವರು ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದರು. ಅವರ ಮೇಲೆ ಡಿಡಿಜಿ ಇದ್ದಾರೆ ಮತ್ತು ಡಿಡಿಜಿ ಮೇಲೆ ಡಿಜಿ ಇದ್ದಾರೆ. ಹಾಗಾಗಿ ಆ ಸರಣಿಯಲ್ಲಿ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ವಿ.ವಿ.ಸಿಂಗ್ ತನಿಖಾಧಿಕಾರಿಯಾಗಿದ್ದಾರೆ. ನಾವು ನಮ್ಮ ವರದಿಯನ್ನು ಸಲ್ಲಿಸಿದ ನಂತರ, ಅದರ ಆಧಾರದ ಮೇಲೆ ಡಿಜಿ ಅವರು ಮುಂದಿನ ಕ್ರಮವನ್ನು ನಿರ್ಧರಿಸುತ್ತಾರೆ” ಎಂದು ಡಿಡಿಜಿ ಸಿಂಗ್​ ವಿವರಿಸಿದ್ದಾರೆ.

    ವಾಂಖೆಡೆ ಮತ್ತು ಇನ್ನೋರ್ವ ಸಾಕ್ಷಿ ಕಿರಣ್ ಗೋಸಾವಿ ವಿರುದ್ಧ ಪ್ರಭಾಕರ್ ಸೈಲ್ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, “ಸೈಲ್ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಮಾಡಿರುವ ಎಲ್ಲಾ ಆರೋಪಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಸೈಲ್​ ಅವರಿಗೆ ಕರೆ ನೀಡಿದ್ದೇವೆ. ಗೋಸಾವಿ ಅವರ ಹೇಳಿಕೆಯನ್ನೂ ತೆಗೆದುಕೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಬುಧವಾರದಂದು, ಸಮೀರ್​ ವಾಂಖೇಡೆ ಅವರನ್ನು ಎನ್​ಸಿಬಿ ವಿಜಿಲೆನ್ಸ್ ತಂಡ ಹಲವು ಗಂಟೆಗಳ ಕಾಲ ವಿಚಾರಣೆ ಮಾಡಿದೆ. (ಏಜೆನ್ಸೀಸ್)

    ಕಾಶ್ಮೀರ: ಮತ್ತೊಬ್ಬ ನಾಗರೀಕನ ಹತ್ಯೆಗೆ ಸಜ್ಜಾಗಿದ್ದ ಉಗ್ರನ ಅಂತ್ಯ

    ರಾಖಿ ಕಟ್ಟಿದ ಹುಡುಗಿಯನ್ನೇ ಹಾರಿಸಿಕೊಂಡು ಹೋದ! ಸ್ನೇಹಿತನಿಂದಲೇ ನಡೆಯಿತು ಘೋರ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts