More

    ಜಮೀರ್ ವಿದೇಶ ಪ್ರವಾಸದ ಮಾಹಿತಿ ಮುಚ್ಚಿಟ್ಟಿದ್ದೇಕೆ? ತನಿಖೆ ಮಾಡುವಂತೆ ಬಿಎಸ್‌ವೈಗೆ ಸಂಬರಗಿ ಪತ್ರ

    ಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ನಿಯಮ ಉಲ್ಲಂಘಿಸಿ ವಿದೇಶ ಪ್ರವಾಸ ಮಾಡಿದ್ದು, ಈ ಬಗ್ಗೆ ತನಿಖೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ಆಗ್ರಹಿಸಿದ್ದಾರೆ.

    ಮಂಗಳವಾರ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಸಂಬರಗಿ, ಜನಪ್ರತಿನಿಧಿಯಾಗಿ ಸರ್ಕಾರದ ಗಮನಕ್ಕೆ ತಾರದೆ ವಿದೇಶ ಪ್ರವಾಸ ಮಾಡಿರುವುದು ನಿಯಮಬಾಹಿರ. 2018ರ ಜೂನ್ 6ರಿಂದ 2019ರ ಜುಲೈ 9ರ ವರೆಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಹಾರ, ನಾಗರಿಕ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿದ್ದಾಗ ವಿದೇಶ ಪ್ರವಾಸ ಮಾಡಿದ್ದಾರೆ. 2019ರ ಜೂ. 8ರಿಂದ 10ರ ವರೆಗೆ ವಿದೇಶ ಪ್ರವಾಸ ಮಾಡಿದ್ದಾರೆ. ಯಾಕೆ ಅವರು ಈ ಪ್ರವಾಸದ ವಿಚಾರವನ್ನ ಸಂಬಂಧಿತ ಅಧಿಕಾರಿಗಳಿಂದ ಮುಚ್ಚಿಟ್ಟಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ವಿವರಿಸಿದ್ದಾರೆ.

    ಹತ್ತು ಸಾವಿರಕ್ಕೂ ಹೆಚ್ಚು ಭಾರತೀಯರ ಮೇಲೆ ಚೀನಾ ಗೂಢಚಾರಿಕೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ಕಾನೂನು ಪಾಲನೆ ಮಾಡಬೇಕಾಗಿದ್ದ ಜಮೀರ್, ವಿದೇಶ ಪ್ರವಾಸಗಳ ಮಾಹಿತಿ ಮುಚ್ಚಿಟ್ಟಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಜಮೀರ್ ಬಹಳಷ್ಟು ಬಾರಿ ಕೊಲಂಬೋಕ್ಕೆ ಹೋಗಿ ಬಂದಿದ್ದಾರೆ. ಆದರೂ, ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಆರ್‌ಟಿಐ ಮೂಲಕವೂ ಅವರ ಪ್ರವಾಸದ ಮಾಹಿತಿ ಸಿಗುತ್ತಿಲ್ಲ. ಶಾಸಕರಾಗಿರುವ ಕಾರಣ, ಸ್ಪೀಕರ್ ಅವರಿಗಾದರೂ ಮಾಹಿತಿ ನೀಡಬೇಕಿತ್ತು. ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಎಂದಷ್ಟೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts