More

    ‘ಕರೊನಾ ಹೋರಾಟದ ಮಧ್ಯೆ ಕಂಡುಬಂತು ದೇಶದ ಒಗ್ಗಟ್ಟು…’- ವಿಡಿಯೋ ಶೇರ್​ ಮಾಡಿ, ‘ಪ್ರಣಾಮಗಳು’ ಎಂದ್ರು ಪ್ರಧಾನಿ…

    ನವದೆಹಲಿ: ಇಂದು ದೇಶಾದ್ಯಂತ ‘ಕರೊನಾ ವಾರಿಯರ್ಸ್’ಗೆ ​ಭಾರತೀಯ ಸಶಸ್ತ್ರ ಪಡೆಗಳು ಗೌರವ ಸಲ್ಲಿಸಿವೆ. ಮಿಲಿಟರಿ ಪಡೆಗಳು ವಿವಿಧ ರೀತಿಯ ಚಟುವಟಿಕೆಗಳ ಮೂಲಕ ಕರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು, ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿರುವ ಕೆಲವು ವಿಡಿಯೋಗಳನ್ನು ಸಂಯೋಜನೆ (ಕೊಲ್ಯಾಜ್​) ಮಾಡಿದ ಒಂದು ವಿಡಿಯೋವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ವಿಡಿಯೋ ಪೋಸ್ಟ್ ಮಾಡಿರುವ ನರೇಂದ್ರ ಮೋದಿಯವರು, ಕೊವಿಡ್​-19ರ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದುಕೊಂಡು, ಧೈರ್ಯದಿಂದ ಹೋರಾಡುತ್ತಿರುವ ಎಲ್ಲರಿಗೂ ಪ್ರಣಾಮಗಳು. ಅಂಥವರಿಗೆ ಇಂದು ನಮ್ಮ ಸಶಸ್ತ್ರಪಡೆಗಳು ಅದ್ಭುತ ಗೌರವ ಸಲ್ಲಿಸಿವೆ ಎಂದು ಬರೆದಿದ್ದಾರೆ.

    ಇದನ್ನೂ ಓದಿ: 2 ಪ್ಯಾಕೆಟ್​ ಕುರುಂಕುರುಂ ತಿಂಡಿ ಕೇಳಿದ್ದಕ್ಕೆ 2 ಲಕ್ಷ ರೂಪಾಯಿ ಗುಳುಂ! ಆಗಿದ್ದೇನು?

    ಮೋದಿಯವರು ಶೇರ್ ಮಾಡಿಕೊಂಡಿರುವ 2 ನಿಮಿಷ, 16 ಸೆಕೆಂಡ್​ಗಳ ವಿಡಿಯೋದಲ್ಲಿ, ಮಿಲಿಟರಿ ಸಿಬ್ಬಂದಿ ಬ್ಯಾಂಡ್​ಗಳನ್ನು ಬಾರಿಸುವುದನ್ನು, ಆಸ್ಪತ್ರೆ, ವೈದ್ಯಕೀಯ ಸಂಸ್ಥೆಗಳ ಎದುರು ನಿಂತ ಕರೊನಾ ವಾರಿಯರ್ಸ್​ ಮೇಲೆ ಹೂಮಳೆ ಗರೆಯುವುದನ್ನು ನೋಡಬಹುದು.

    ಅದಕ್ಕೆ ಪ್ರತಿಯಾಗಿ ಆರೋಗ್ಯ ಸಿಬ್ಬಂದಿಯೂ ಕೂಡ ಚಪ್ಪಾಳೆ ಹೊಡೆಯುತ್ತ, ಸ್ಪಂದಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

    ಭಾರತೀಯ ಸೇನೆಯ ಮೂರು ಪಡೆಗಳಿಂದ ಕರೊನಾ ವಾರಿಯರ್ಸ್​ಗೆ ವಿಶೇಷ ಗೌರವ ಸಲ್ಲಿಸಲಾಗುವುದು ಎಂದು ಶುಕ್ರವಾರ ಸಿಡಿಎಸ್​ ಮುಖ್ಯಸ್ಥ ಬಿಪಿನ್ ರಾವತ್ ಘೋಷಣೆ ಮಾಡಿದ್ದರು. (ಏಜೆನ್ಸೀಸ್​)

    ಇದನ್ನೂ ಓದಿ: ಕರೊನಾ ಹಾಟ್​ಸ್ಫಾಟ್​ ಆಗಿದೆ ದಾವಣಗೆರೆ; ಇಂದು ಒಂದೇ ದಿನದಲ್ಲಿ ಬರೋಬ್ಬರಿ 21 ಕೇಸ್​ಗಳು ಪತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts