More

    ‘ರಾಧೆ ಪೈರೆಸಿಯಲ್ಲಿ ತೊಡಗಬೇಡಿ, ತೊಂದರೆಗೆ ಸಿಲುಕುತ್ತೀರಿ’ ಎಂದ ಸಲ್ಮಾನ್

    ಮುಂಬೈ: ತಮ್ಮ ಹೊಸ ಚಿತ್ರ ‘ರಾಧೆ’ಯ ಪೈರೆಸಿಯಲ್ಲಿ ತೊಡಗದಂತೆ ನಟ ಸಲ್ಮಾನ್​ ಖಾನ್ ಮನವಿ ಮಾಡಿದ್ದಾರೆ. ಸೈಬರ್​ ಸೆಲ್​ನವರು ಪೈರೇಟೆಡ್​ ಸೈಟ್​ಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನೀವು ಅದರಲ್ಲಿ ಶಾಮೀಲಾಗಿ ತೊಂದರೆಗೆ ಸಿಕ್ಕುಹಾಕಿಕೊಳ್ಳಬೇಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

    ‘ರಾಧೆ : ಯುವರ್​ ಮೋಸ್ಟ್​ ವಾಂಟೆಡ್​ ಭಾಯಿ’ ಚಿತ್ರವು ಮೇ 13 ರಂದು ಜೀ5ನ ಜೀಪ್ಲೆಕ್ಸ್​ ಪೇ-ಪರ್-ವ್ಯೂ ಸೇವೆಯಲ್ಲಿ ಬಿಡುಗಡೆಯಾಗಿದೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿರುವ ಸಲ್ಮಾನ್, “ನಮ್ಮ ಚಿತ್ರ ರಾಧೆಯನ್ನು ಒಂದು ವೀಕ್ಷಣೆಗೆ 249 ರೂ.ಗಳಂತೆ ಸಮಂಜಸವಾದ ಬೆಲೆಯಲ್ಲಿ ವೀಕ್ಷಿಸಲು ನಾವು ಅವಕಾಶ ನೀಡಿದ್ದೇವೆ. ಆದಾಗ್ಯೂ ಕೆಲವು ಪೈರೇಟೆಡ್​ ಸೈಟ್​ಗಳು ಚಿತ್ರವನ್ನು ಕಾನೂನುಬಾಹಿರವಾಗಿ ಸ್ಟ್ರೀಮ್ ಮಾಡುತ್ತಿದ್ದು, ಅದು ಗಂಭೀರ ಅಪರಾಧವಾಗಿದೆ. ಸೈಬರ್​ ಸೆಲ್ ಈ ಎಲ್ಲಾ ಅಕ್ರಮ ಸೈಟ್​ಗಳ ಮೇಲೆ ಕ್ರಮ ತೆಗೆದುಕೊಳ್ಲುತ್ತಿದೆ. ದಯವಿಟ್ಟು ರಾಧೆಯ ಪೈರೆಸಿಯಲ್ಲಿ ತೊಡಗಬೇಡಿ. ಅರ್ಥ ಮಾಡಿಕೊಳ್ಳಿ, ನೀವು ಸೈಬರ್​ ಸೆಲ್​ನವರಿಂದ ಭಾರೀ ತೊಂದರೆಗೆ ಒಳಗಾಗುತ್ತೀರಿ” ಎಂದು ಎಚ್ಚರಿಕೆಯನ್ನು ಪೋಸ್ಟ್​ ಮಾಡಿದ್ದಾರೆ.

    ಸಿನಿಮಾ ಮಂದಿರಗಳಲ್ಲಿ ತೆರೆಕಂಡ ಸಲ್ಮಾನ್​ ಖಾನ್​ ಕೊನೆಯ ಚಿತ್ರ 2019 ರ ‘ದಬ್ಬಾಂಗ್​​​ 3’. ರಾಧೆ ಚಿತ್ರವು 2020 ರಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈ ವರ್ಷ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವಾಗಲೇ ಮತ್ತೆ ಸಿನಿಮಾ ಮಂದಿರಗಳು ಮುಚ್ಚಿದ್ದರಿಂದ ಓಟಿಟಿಯಲ್ಲಿ ವಿಶೇಷ ಪ್ರದರ್ಶನಕ್ಕೆ ಬಿಡುಗಡೆಯಾಗಿದೆ. ಸಲ್ಮಾನ್ ಖಾನ್​ ಅವರು ಪೊಲೀಸ್​ ಅಧಿಕಾರಿಯ ಪಾತ್ರ ವಹಿಸಿರುವ ಈ ಚಿತ್ರದಲ್ಲಿ ಜಾಕಿ ಶ್ರಾಫ್, ದಿಶಾ ಪಟಾನಿ ಮತ್ತು ರಣದೀಪ್ ಹೂಡ ಮುಖ್ಯ ಪಾತ್ರಗಳಲ್ಲಿದ್ದಾರೆ. (ಏಜೆನ್ಸೀಸ್)

    ಬಿಜೆಪಿ ನಾಯಕನ ಸಾವಿನ ಬಗ್ಗೆ ವಿವಾದಾತ್ಮಕ ಪೋಸ್ಟ್​​ : ಇಬ್ಬರ ಬಂಧನ

    ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts