More

    ಸಾಲಿಗ್ರಾಮ ಮಾರುಕಟ್ಟೆ ಕಾಮಗಾರಿ ಪರಿಶೀಲನೆ, ಹೆದ್ದಾರಿ ವಿಸ್ತರಣೆ ಹಿನ್ನೆಲೆ ಶಾಸಕರ ನೇತೃತ್ವದಲ್ಲಿ ತಾತ್ಕಾಲಿಕ ವ್ಯವಸ್ಥೆ

    ಕೋಟ: ಸಾಲಿಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಮೀನು ಮಾರುಕಟ್ಟೆ ಹಾಗೂ ಅಂಗಡಿ ಮುಂಗಟ್ಟು, ಆಟೋ ನಿಲ್ದಾಣ ಕಾಮಗಾರಿಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ- ಉಪಾಧ್ಯಕ್ಷೆ, ಅಧಿಕಾರಿಗಳ ನಿಯೋಗ ಸೋಮವಾರ ಭೇಟಿ ನೀಡಿ ಪರಿಶೀಲಿಸಿತು.

    ಪ.ಪಂ ಅಧ್ಯಕ್ಷೆ ಸುಲತಾ ಹೆಗ್ಡೆ, ಉಪಾಧ್ಯಕ್ಷೆ ಅನುಸೂಯ ಆನಂದರಾಮ ಹೇರ್ಳೆ, ಪೇಟೆ ವಾರ್ಡ್ ಸದಸ್ಯೆ ರತ್ನನಾಗರಾಜ್ ಗಾಣಿಗ, ಸದಸ್ಯರಾದ ರಾಜು ಪೂಜಾರಿ, ರೇಖಾ ಕೇಶವ ಕರ್ಕೇರ, ಭಾಸ್ಕರ್ ಬಂಗೇರ , ಮುಖ್ಯಾಧಿಕಾರಿ ಅರುಣ್ ಬಿ., ಇಂಜಿನಿಯರ್ ರಾಜಶೇಖರ್, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ, ಮೀನು ಮಾರಾಟಗಾರರಾದ ಗುಲಾಬಿ, ಗೀತಾ ಇನ್ನಿತರರು ಉಪಸ್ಥಿತರಿದ್ದರು.

    ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ಸಮಸ್ಯೆ ಕಗ್ಗಂಟಾಗಿ ಪರಿಣಮಿಸಿದ ಮೀನು ಮಾರುಕಟ್ಟೆ ಹಾಗೂ ಸ್ಥಳೀಯ ಅಂಗಡಿ ಮುಂಗಟ್ಟುಗಳಿಗೆ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಇತ್ತೀಚೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿಗೆ ಸೂಚಿಸಿದ್ದರು. ಶಾಸಕರು ತನ್ನ ಸ್ವಂತ ಹಣದಿಂದ ಪ.ಪಂ. ಸದದ್ಯ ರಾಜು ಪೂಜಾರಿ ನೇತೃತ್ವದಲ್ಲಿ ತಾತ್ಕಾಲಿಕ ಮೀನು ಮಾರುಕಟ್ಟೆ ಹಾಗೂ ಆಟೋ ನಿಲ್ದಾಣ, ಅಂಗಡಿ ಕೋಣೆಗಳು ಸಿದ್ಧಗೊಳ್ಳುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts