More

    ಸಂಬಳ, ಟಿಎ, ಡಿಎ, ಮನೆ ಏನನ್ನೂ ತೆಗೆದುಕೊಳ್ಳಲ್ಲ; ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಪ್ರತಿಕ್ರಿಯೆ

    ಬೆಂಗಳೂರು: ಮುಖ್ಯಮಂತ್ರಿಯವರು ಹಿರಿಯ ಶಾಸಕರಿಗೆ ಸಲಹೆಗಾರರ ಹುದ್ದೆ ನೀಡಿರುವುದಕ್ಕೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮಾಡಿರುವ ಟೀಕೆಗೆ ಶಾಸಕ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ರಾಯರೆಡ್ಡಿ ಹಾಗೂ ಬಿ.ಆರ್.ಪಾಟೀಲ್ ಅವರನ್ನು ವಾರದ ಹಿಂದಷ್ಟೇ ಮುಖ್ಯಮಂತ್ರಿಯವರು ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿಕೊಟ್ಟಿದ್ದರು. ಈ ರೀತಿ ಅವಕಾಶ ಕೊಟ್ಟಿರುವುದಕ್ಕೆ ಗಂಜಿ ಕೇಂದ್ರ ಎಂದು ಎಚ್‌ಡಿಕೆ ವ್ಯಂಗ್ಯವಾಡಿದ್ದರು.
    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಯರೆಡ್ಡಿ, ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ, ಅಂತವರು ಬೇಜವಾಬ್ದಾರಿಯಾಗಿ ಮಾತನಾಡಬಾರದು. ನನಗೆ ಕೊಟ್ಟಿರುವ ಆರ್ಥಿಕ ಸಲಹೆಗಾರ ಹುದ್ದೆ ಹೇಗೆ ಗಂಜಿ ಕೇಂದ್ರ ಆಗಲಿದೆ? ನಾನು ಸಂಬಳ, ಟಿಎ, ಡಿಎ, ಮನೆ ಏನನ್ನೂ ತೆಗೆದುಕೊಳ್ಳುವುದಿಲ್ಲ. ನಾನು ಶಾಸಕನಾಗಿ ಇದೂವರೆಗೂ ಸಂಬಳ ಪಡೆದಿಲ್ಲ. ಹೀಗಿರುವಾಗ ಸಿಎಂ ನೀಡಿರುವ ಜವಾಬ್ದಾರಿ ಗಂಜಿ ಕೇಂದ್ರ ಹೇಗಾಗುತ್ತದೆ ಎಂದರು.
    ಯಾವುದೇ ಬೋಡ್‌ರ್, ಚೇರ್ಮನ್ ಆದರೂ ಆಗಬಹುದಾಗಿತ್ತು, ನನಗೆ ಸಿಕ್ಕಿರೋ ಸ್ಥಾನದಲ್ಲಿ ಯಾವುದೇ ಸಂಬಳ ಇಲ್ಲ, ಜೀರೋ. ನನಗೆ ಈ ಸ್ಥಾನದ ಬಗ್ಗೆ ತುಂಬಾ ಖುಷಿ ಇದೆ. ದಂದುವೆಚ್ಚದ ಬಗ್ಗೆ ಮುಖ್ಯಮಂತ್ರಿಗೆ ಸಲಹೆ ನೀಡಬಹುದು. ಅದರ ಹೊರತು ನಾನು ತೀರ್ಮಾನ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
    ಸಿದ್ದರಾಮಯ್ಯ ಕಾರ್ಯನಿರ್ವಹಣೆ ಕುರಿತು ಪ್ರತಿಕ್ರಿಯೆ ನೀಡಿ, 2013ರ ಅವಧಿಗೂ ಈಗ ಏನೂ ವ್ಯತ್ಯಾಸವಿಲ್ಲ. ಆಗ ಸಿದ್ದರಾಮಯ್ಯ ಸಿಎಂ ಆಗಿ ಹೇಗೆ ಕೆಲಸ ಮಾಡುತ್ತಿದ್ದರೋ ಈಗಲೂ ಹಾಗೆ ಕೆಲಸ ಮಾಡುತ್ತಿದ್ದಾರೆ. ವಯಸ್ಸಿನಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಆಗ 66 ವಯಸ್ಸು ಇದ್ದೋರು ಈಗ 76 ವರ್ಷದವರಾದ್ದಾರೆ. ವಯಸ್ಸಿನ ಕಾರಣಕ್ಕೆ ಸ್ವಲ್ಪ ಚಟುವಟಿಕೆ ಕಡಿಮೆಯಾಗಿರಬಹುದು. ಈಗಲೂ ಅವರ ನೆನಪಿನ ಶಕ್ತಿ ಹಾಗೆಯೇ ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts