More

    ಬಿಡುಗಡೆಗೆ ಮುನ್ನವೇ ಸೇಫ್; ಮೇ 20ಕ್ಕೆ ಸಕುಟುಂಬ ಸಮೇತ ಚಿತ್ರ ನೋಡಿ

    ಬೆಂಗಳೂರು: ‘ಸಕುಟುಂಬ ಸಮೇತ’ ಎಂಬ ಹೊಸ ಚಿತ್ರವನ್ನು ತಮ್ಮ ಪರಂವಾ ಸ್ಟುಡಿಯೋಸ್ ಮೂಲಕ ನಿರ್ವಿುಸುತ್ತಿರುವುದಾಗಿ ರಕ್ಷಿತ್ ಶೆಟ್ಟಿ ಕಳೆದ ವರ್ಷವೇ ಹೇಳಿಕೊಂಡಿದ್ದರು. ಆ ನಂತರ ಚಿತ್ರದ ಬಗ್ಗೆ ಹೆಚ್ಚು ಸುದ್ದಿ ಇರಲಿಲ್ಲ. ಈಗ ಮೇ 20ಕ್ಕೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಅವರು ತಯಾರಿ ನಡೆಸಿದ್ದಾರೆ.

    ಹಾಗೆ ನೋಡಿದರೆ, ಈ ಚಿತ್ರವನ್ನು ಮೊದಲು ಓಟಿಟಿಯಲ್ಲಿ ನೇರವಾಗಿ ಬಿಡುಗಡೆ ಮಾಡಬೇಕು ಎಂದು ರಕ್ಷಿತ್ ಯೋಚಿಸಿದ್ದರಂತೆ. ಅದರಂತೆ ಅವರು ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಿದ್ದೂ ಆಗಿದೆ. ಬಿಡುಗಡೆಗೂ ಮುನ್ನವೇ ಲಾಭದಲ್ಲಿರುವ ರಕ್ಷಿತ್, ಈಗ ಚಿತ್ರವನ್ನು ಚಿತ್ರಮಂದಿರಗಳಲ್ಲಿ ತೆರೆಕಾಣಿಸುವುದಕ್ಕೆ ತಯಾರಿ ನಡೆಸಿದ್ದಾರೆ. ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವುದು ರಾಹುಲ್.

    ಮದುವೆಗೆ ಇನ್ನೊಂದು ವಾರ ಇರುವಾಗ, ಮದುಮಗಳು ತನಗೆ ಮದುವೆ ಇಷ್ಟವಿಲ್ಲ ಎಂದು ವರನ ಮನೆಯವರಿಗೆ ಹೇಳುತ್ತಾಳೆ. ಆ ನಂತರ ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ಚಿತ್ರದಲ್ಲಿ ಭರತ್ ಬಿ.ಜಿ, ಸಿರಿ ರವಿಕುಮಾರ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ‘ಆಡಿಷನ್ ಮೂಲಕ ಆಯ್ಕೆಯಾದ ನಾನು ಸ್ಕ್ರಿಪ್ಟ್ ಓದುವಾಗಲೇ ಬಹಳ ಎಂಜಾಯ್ ಮಾಡಿದ್ದೆ’ ಎಂದು ಭರತ್ ಹೇಳಿದರೆ, ‘ಮೊದಲ ಚಿತ್ರದಲ್ಲೇ ಬಹಳ ಒಳ್ಳೆಯ ಪಾತ್ರ ಸಿಕ್ಕಿದೆ’ ಎಂದು ಸಿರಿ ಹೇಳುತ್ತಾರೆ.

    ಭಾರಿ ಬೆಂಕಿ ಅನಾಹುತ: ಕನಿಷ್ಠ 26 ಮಂದಿ ಸಾವು, ಸುಮಾರು 40 ಜನರಿಗೆ ಗಾಯ..

    ಬಣ್ಣಬಣ್ಣದ ಡಿಸೈನ್ ಕಾರೊಳಗಿತ್ತು ಕೊಳೆತ ಶವ; 2 ವರ್ಷಗಳಿಂದ ಒಂದೇ ಕಡೆ ನಿಲ್ಲಿಸಲಾಗಿದ್ದ ಕಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts