More

    ಕಾಫಿ, ಅಡಕೆ, ಬಾಳೆ ಗಿಡಗಳು ನಾಶ

    ಕಾಫಿ, ಅಡಕೆ, ಬಾಳೆ ಗಿಡಗಳು ನಾಶ

    ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಾಸುರು ಗ್ರಾಮಕ್ಕೆ ಶನಿವಾರ ಬಂದಿದ್ದ ಆನೆಗಳ ಹಿಂಡು ಕಾಫಿ ತೋಟದ ಮಾರಿಗುಡಿ ದೇವಾಲಯದ ಬಳಿ ಬೀಡುಬಿಟ್ಟಿದ್ದವು. ಭಾನುವಾರ ಬೆಳಗ್ಗೆ ಸಕಲೇಶಪುರ ತಾಲೂಕಿನ ಆದಿಗೆಯತ್ತ ಸಾಗಿದ್ದನ್ನು ಕಂಡ ಗ್ರಾಮಸ್ಥರಲ್ಲಿ ಆತಂಕ ದೂರಾಗಿದೆ. ಕಾಫಿ, ಅಡಕೆ, ಬಾಳೆಗಿಡಗಳನ್ನು ನಾಶಪಡಿಸಿವೆ.

    ಶನಿವಾರ ಬಾಸುರ ಗ್ರಾಮದ ಬಳಿ 11 ಆನೆಗಳು ಕಾಫಿ ತೋಟಕ್ಕೆ ನುಗ್ಗಿದ್ದವು. ಹಿರೆಸಗರದ ಸುನಿಲ್ ಅವರ ಕಾಫಿ ತೋಟದಲ್ಲಿ ದಿನವಿಡಿ ಬೀಡು ಬಿಟ್ಟಿದ್ದವು. ಸಂಜೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಿಗೆ ಅಟ್ಟುವ ಪ್ರಯತ್ನ ಮಾಡಿ ಕತ್ತಲಾಗುತ್ತಿದ್ದಂತೆ ಹಿಂತಿರುಗಿದ್ದರು. ರಾತ್ರಿ ಆನಂದ ಭಟ್ ಅವರ ತೋಟದ ಮಾರಿಗುಡಿ ದೇವಾಲಯದ ಬಳಿ ಆನೆಗಳು ಬೀಡು ಬಿಟ್ಟಿದ್ದವು.

    ಭಾನುವಾರ ಬೆಳಗ್ಗೆ 6.30ರ ವೇಳೆಗೆ ಮರಿಯಾನೆಯೊಂದಿಗೆ ಹೊರಟ ಆನೆಗಳು ಕೆಲವರ ಕಾಫಿ ತೋಟದ ಅಲ್ಲಲ್ಲಿ ಹಲಸಿನ ಹಣ್ಣು ತಿಂದಿವೆ. ಬಾಳೆಗಿಡ, ಅಡಕೆ ಮರಗಳು, ಕಲ್ಲುಕಂಬದ ಬೇಲಿಗಳನ್ನು ಧ್ವಂಸ ಮಾಡಿವೆ. ಯುವಕರು ಆನೆಗಳ ಹೆಜ್ಜೆ ಗುರುತನ್ನೇ ಹಿಂಬಾಲಿಸಿಕೊಂಡು ಸಾಗಿ ಅಲ್ಲಲ್ಲಿ ಪಟಾಕಿ ಸಿಡಿಸುತ್ತ ಸಾಗಿದರು.

    ನಂತರ ಗ್ಯಾಸ್​ಪೈಪ್​ಲೈನ್ ಪಕ್ಕದಲ್ಲೇ ಹೊಲಗದ್ದೆಗಳಲ್ಲಿ ಹೋಗಿರುವ ಆನೆಗಳು ಹೇಮಾವತಿ ಹಳ್ಳ ಹಾದು ದಿಣ್ಣೇಕೆರೆ ಮೂಲಕ ಮೂಡಿಗೆರೆ ಗಡಿದಾಟಿ ಸಕಲೇಶಪುರದ ಆದಿಗೆ, ಮದನಾಪುರದತ್ತ ಸಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ವಿಜಯವಾಣಿಗೆ ತಿಳಿಸಿದ್ದಾರೆ.

    ಬಾಸುರ, ಹಿರೆಸಿಗರ, ಸಿಂಗಟಗೆರೆ, ಸೀಗೆಹಳ್ಳಿ ಸುತ್ತಮುತ್ತ ಗ್ರಾಮಸ್ಥರಲ್ಲಿದ್ದ ಆತಂಕದ ಛಾಯೆ ದೂರಾಗಿದ್ದು ಕಾರ್ವಿುಕರು ಹೊಲಗದ್ದೆಗಳಲ್ಲಿ ಕೆಲಸಕ್ಕೆ ಮುಂದಾಗಿದ್ದಾರೆ.

    ಹಿರೆಸಿಗರ ಸುತ್ತಮುತ್ತ ಕೆಲ ಕಾಫಿ ತೋಟಗಳಲ್ಲಿ 11 ಆನೆಗಳು ಕಾಫಿ, ಅಡಕೆ, ಬಾಳೆಗಿಡಗಳನ್ನು ನಾಶಪಡಿಸಿವೆ. ರಾತ್ರಿ ಹೊತ್ತು ಆನೆಗಳು ದಾಳಿ ಮಾಡಬಹುದು ಎಂಬ ಭಯವಿತ್ತು. ಅದೃಷ್ಟವಶಾತ್ ಮರಿಯಾನೆ ಇದ್ದುದರಿಂದ ಯಾವುದೆ ಅಪಾಯ ಸಂಭವಿಸಿಲ್ಲ.ಬೆಳಗ್ಗೆ ಆನೆಗಳು ಹೇಮಾವತಿ ಹಳ್ಳದಾಟಿ ಆದಿಗೆ ಕಡೆ ಸಾಗಿರುವುದನ್ನು ಕೆಲವು ಗ್ರಾಮಸ್ಥರು ನೋಡಿದ್ದಾರೆ. ಹೀಗಾಗಿ ಕಾರ್ವಿುಕರು ಕೆಲಸಕ್ಕೆ ಹೋಗುತ್ತಿದ್ದಾರೆ ಎನ್ನುತ್ತಾರೆ ಬಾಸುರ ಗ್ರಾಮದ ಯುವರಾಜ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts