More

    ಪಾಕ್​ ಭದ್ರತೆಯಲ್ಲಿ ಕುಳಿತು 3 ಖಂಡಗಳಲ್ಲಿ ಭಯೋತ್ಪಾದನಾ ದಾಳಿಯ ಸಂಚು ರೂಪಿಸಿದ!

    ನವದೆಹಲಿ: ಉಗ್ರರ ಸ್ವರ್ಗ ಪಾಕಿಸ್ತಾನದಲ್ಲಿ ಪಾಕ್​ ಸರ್ಕಾರದ ಬಿಗಿ ಭದ್ರತೆಯಲ್ಲಿ ಕುಳಿತ ವ್ಯಕ್ತಿಯೊಬ್ಬ 26/11ರ ಮುಂಬೈ ಮೇಲಿನ ಉಗ್ರರ ದಾಳಿ ಸೇರಿ 3 ಖಂಡಗಳಲ್ಲಿ ವಿವಿಧ ಭಯೋತ್ಪಾದನಾ ದಾಳಿಗಳನ್ನು ಸಂಘಟಿಸಿದ್ದ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.
    ಪಾಕಿಸ್ತಾನದ ಸೇನಾಪಡೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದ ಸಾಜೀದ್​ ಮೀರ್​ ಎಂಬಾತ ಆ ಕೆಲಸ ಬಿಟ್ಟು ಲಷ್ಕರ್​ ಎ ತೊಯ್ಬಾ ಭಯೋತ್ಪಾದನಾ ಸಂಘಟನೆ ಸೇರಿಕೊಂಡ ನಂತರದಲ್ಲಿ ಈ ಎಲ್ಲ ಸಂಚುಗಳನ್ನು ರೂಪಿಸಿದ್ದ ಎನ್ನಲಾಗಿದೆ.

    ಭಾರತ ಅಷ್ಟೇ ಅಲ್ಲ, ಆಸ್ಟ್ರೇಲಿಯಾ, ಅಮೆರಿಕದ ವರ್ಜೀನಿಯಾ ಮತ್ತು ಫ್ರಾನ್ಸ್​ನಲ್ಲಿ ಈ ದಾಳಿಗಳು ನಡೆದಿದ್ದವು. 2001ರಲ್ಲಿ ಲಷ್ಕರ್​ ಭಯೋತ್ಪಾದನೆ ಸಂಘಟನೆಯ ವಿದೇಶಿ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿದ್ದ ಫ್ರಾನ್ಸ್​ನ ವಿಲ್ಲಿ ಬ್ರಿಗಿಟ್ಟೆ ಕೂಡ ಸಾಜೀದ್​ನ ಶೋಧವಾಗಿದ್ದ. ಈತನ ಸಹಕಾರದಲ್ಲಿ 5 ವರ್ಷ ಮೊದಲೇ 2008ರ 26/11ರ ಮುಂಬೈ ಮೇಲಿನ ಉಗ್ರರ ದಾಳಿಯ ಸಂಚನ್ನು ರೂಪಿಸಿದ್ದ ಎನ್ನಲಾಗಿದೆ.

    2003ರ ಅಕ್ಟೋಬರ್​ನಲ್ಲಿ ಫ್ರಾನ್ಸ್​ನಲ್ಲಿ ಬಾಂಬ್​ ಸ್ಫೋಟಿಸುವ ಸಂಚು ರೂಪಿಸುತ್ತಿರುವಾಗ ವಿಲ್ಲಿ ಬ್ರಿಗಿಟ್ಟೆ ಮತ್ತು ಆತನ ಸಹಚರ ಪಾಕ್​ ಮೂಲದ ವಾಸ್ತುಶಿಲ್ಪ ಇಂಜಿನಿಯರ್​ ಫಹೀಂ ಖಲೀದ್​ ಲೂದಿ ಎಂಬಾತನನ್ನು ಫ್ರಾನ್ಸ್​ ಮತ್ತು ಆಸ್ಟ್ರೇಲಿಯಾದ ಗುಪ್ತಚರ ವಿಭಾಗದ ಸಿಬ್ಬಂದಿ ಬಂಧಿಸಿದ್ದರು.

    ಇದನ್ನೂ ಓದಿ: ಬೆಳ್ಳಿ ಗದೆ ಪಡೆದು ಮಿಂಚಿದ್ದ ಉಡುಪಿ ಜಿಲ್ಲಾಧಿಕಾರಿಗೆ ಜಗದೀಶ್​ಗೆ ಶುರುವಾಯ್ತು ಸಂಕಷ್ಟ..!

    ಆಗ ವಿಚಾರಣೆ ವೇಳೆ ಬ್ರಿಗಿಟ್ಟೆ ಲಷ್ಕರ್​ ಜುಗ್ರ ಸಾಜೀದ್​ ಮೀರ್​ ಬಗ್ಗೆ ಸಾಕಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದ ಎನ್ನಲಾಗಿದೆ. ಆಗ ಸಾಜೀದ್​ ಲಾಹೋರ್​ನ ಹೊರಭಾಗದಲ್ಲಿರುವ ಲಷ್ಕರ್​ನ ಮುಖ್ಯ ಕೇಂದ್ರದಲ್ಲಿ ವಿದೇಶಿ ಉಗ್ರರ ನೇಮಕಾತಿಯ ಜವಾಬ್ದಾರಿ ಹೊತ್ತಿದ್ದ ಎನ್ನಲಾಗಿದೆ. ಅಲ್ಲದೆ, ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿದ್ದ ಅಲ್​ ಖೈದಾ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ಲಷ್ಕರ್​ನ ಪ್ರಮುಖ ಉಗ್ರ ಝಾಕಿ ಉರ್​ ರೆಹಮಾನ್​ ಲಖ್ವಿ ಜತೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

    ಕ್ರಿಕೆಟ್​ ಪ್ರಿಯನ ಸೋಗಿನಲ್ಲಿ 2005ರಲ್ಲಿ ಭಾರತಕ್ಕೆ ಬಂದಿದ್ದ ಈತ ದೆಹ್ರಾಡೂನ್​ನ ಇಂಡಿಯನ್​ ಮಿಲಿಟರಿ ಅಕಾಡೆಮಿ ಮತ್ತು ನ್ಯಾಷನಲ್​ ಡಿಫೆನ್ಸ್​ ಕಾಲೇಜಿನ ಸ್ಥಳಾನ್ವೇಷಣೆ ನಡೆಸಿ ಸಂಪೂರ್ಣ ಮಾಹಿತಿ ಕಲೆಹಾಕಿಕೊಂಡಿದ್ದ ಎನ್ನಲಾಗಿದೆ.

    ಅಮೆರಿಕದ ಬೇಹುಗಾರಿಕೆ ಪಡೆಗಳು ನಡೆಸಿದ್ದ ತನಿಖೆಯಲ್ಲಿ ಈತ 26/11ರ ಮುಂಬೈ ದಾಳಿಯ ಸಂಚು ರೂಪಿಸಿದ್ದು, ಚಾಬಾದ್​ ಹೌಸ್​ನಲ್ಲಿ ಹೋಲ್ಟ್​ಜ್​ಬರ್ಗ್​ ದಂಪತಿಯ ಹತ್ಯೆ ಮಾಡಿಸಿದ್ದು ಸೇರಿ ಪ್ರತಿಯೊಂದು ಹಂತದಲ್ಲೂ ಈತನ ಕೈವಾಡ ಇತ್ತು ಎಂಬುದು ಪತ್ತೆಯಾಗಿತ್ತು.

    ಇದನ್ನೂ ಓದಿ: ‘ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ..’ ಧ್ವನಿ ಬಿಟ್ಟು ಮರೆಯಾದ ಉಷಾ

    ಅಮೆರಿಕ ಪ್ರಜೆ ಡೇವಿಡ್​ ಕೋಲ್ಮನ್​ ಹೆಡ್ಲಿಯನ್ನು ಗುಪ್ತಚರ ವಿಭಾಗದ ಅಧಿಕಾರಿಗಳು 2009ರಲ್ಲಿ ಬಂಧಿಸಿದ್ದರು. ಆಗ ಸಾಜೀದ್​ ಮೀರ್​ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಬಗ್ಗೆ ಮಾಹಿತಿ ಕೊಡುವವರಿಗೆ 37 ಕೋಟಿ ರೂ. ಬಹುಮಾನ ಕೊಡುವುದಾಗಿ ಅಮೆರಿಕ 2012ರಲ್ಲಿ ಘೋಷಿಸಿತ್ತು. ಈ ಬಹುಮಾನವನ್ನು ಪಡೆದುಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಆತ ಪಾಕಿಸ್ತಾನದ ಬೇಹುಗಾರಿಕಾ ಪಡೆ ಐಎಸ್​ಐನ ಬಿಗಿ ಭದ್ರತೆಯಲ್ಲಿ ಇರುವುದು ಇದಕ್ಕೆ ಕಾರಣ.

    ಭಾರತೀಯ ಭದ್ರತಾ ಅಧಿಕಾರಿಗಳ ಪ್ರಕಾರ ಸಾಜೀದ್​ ಮೀರ್​ಗೆ ಐಎಸ್​ಐ 7ನೇ ಮಟ್ಟದ ಭದ್ರತೆಯಲ್ಲಿ ಇರಿಸಿದೆ. ಅಂದರೆ, ಪಾಕಿಸ್ತಾನಕ್ಕೆ ಭೇಟಿ ಕೊಡುವ ವಿದೇಶಿ ನಾಯಕರಿಗೆ ಒದಗಿಸುವ ಭದ್ರತೆ ಮಟ್ಟದ ಭದ್ರತೆಯನ್ನು ಆತನಿಗೆ ಒದಗಿಸಲಾಗಿದೆ.

    ತೆಲಂಗಾಣ ಗೃಹ ಸಚಿವರಿಗೆ ಕೊವಿಡ್​-19 ಸೋಂಕು; ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts