More

    ಸಹಕಾರಿ ಸಂಘಗಳಲ್ಲಿ ಸುಲಭವಾಗಿ ಸಾಲ: ಸಂಸದ ಡಿ.ಕೆ.ಸುರೇಶ್ ಹೇಳಿಕೆ ಕೆಸಿಸಿ ಬೆಳೆ ಸಾಲ, ಸ್ವ ಸಹಾಯ ಸಂಗಳಿಗೆ ಸಾಲ ವಿತರಣೆ

    ಕೂಟಗಲ್ : ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
    ಕೂಟಗಲ್ ಹೋಬಳಿ ಎರೇಹಳ್ಳಿಯಲ್ಲಿ ಭಾನುವಾರ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಕೆಸಿಸಿ ಬೆಳೆ ಸಾಲ ಮತ್ತು ಸ್ವಸಹಾಯ ಸಂಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ವಾತನಾಡಿದರು.

    ತಾಲೂಕಿನ ಸುಮಾರು 250 ರೈತರಿಗೆ 3.58 ಕೋಟಿ ರೂಪಾಯಿ ಸಾಲ ಮತ್ತು ಸ್ತ್ರೀ ಶಕ್ತಿ ಸಂಗಳಿಗೆ 3.04 ಲಕ್ಷ ರೂ.ಗಳನ್ನು ಬಿಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲವಾಗಿ ವಿತರಣೆ ವಾಡುತ್ತಿದೆ. ಲಾನುಭವಿಗಳಿಗೆ ಸಾಲ ಪಡೆಯುವಾಗ ಇರುವ ಆಸಕ್ತಿ ಮರುಪಾವತಿ ವಾಡುವಾಗಲೂ ಇರಬೇಕಾಗುತ್ತದೆ ಎಂದರು.

    ರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ನೀಡಲು ವಿವಿಧ ದಾಖಲೆಗಳನ್ನು ಕೇಳುತ್ತವೆ. ಆದರೆ ಸಹಕಾರಿ ಸಂದಲ್ಲಿ ಪಹಣಿ, ಮ್ಯುಟೇಷನ್ ನೀಡಿದರೆ ಸಾಲ ಪಡೆಯಬಹುದಾಗಿದೆ. ಎರೇಹಳ್ಳಿ ಭಾಗದಲ್ಲಿ ಬ್ಯಾಂಕ್ ತೆರೆಯುವ ಬಗ್ಗೆ ಗ್ರಾಮಸ್ಥರು ಮನವಿ ವಾಡಿದ್ದು, ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯಲಾಗುವುದು. ನಲ್ಲಿಗುಡ್ಡೆಯಿಂದ ಕೊಲ್ಲಿ ತೊರೆಗೆ ನೀರು ಹರಿಸುವಂತೆ ಸ್ಥಳೀಯರು ಮನವಿ ವಾಡಿದ್ದು, ಡಿ.ಕೆ.ಶಿವಕುವಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಅನುಮೋದನೆಯಾಗಿದ್ದ 540 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

    ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎರೇಹಳ್ಳಿ ಮಂಜು ವಾತನಾಡಿ, ತಾಲೂಕಿನ 20 ವಿಎಸ್ಸೆಸ್ಸೆನ್ ಗಳ ಮೂಲಕ ರೈತರಿಗೆ 72 ಕೋಟಿ ರೂಪಾಯಿ ಬೆಳೆ ಸಾಲ ವಿತರಣೆ ವಾಡಲಾಗಿದೆ. ರಾಮನಗರ ತಾಲೂಕಿಗೆ 22 ಕೋಟಿ ರೂ.ಸಾಲ ಸೌಲಭ್ಯವನ್ನು ಪಕ್ಷಭೇದ ಮರೆತು ವಿತರಣೆ ವಾಡಲಾಗಿದೆ ಎಂದರು.

    ಎರೇಹಳ್ಳಿ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಣೆ ವಾಡಲಾಯಿತು. ಎಂಎಲ್‌ಸಿಗಳಾದ ಎಸ್.ರವಿ, ಸಿ.ಎಂ.ಲಿಂಗಪ್ಪ, ಜಿಪಂ ವಾಜಿ ಅಧ್ಯಕ್ಷ ಎಚ್.ಎ.ಇಕ್ಬಾಲ್ ಹುಸೇನ್, ವಾಜಿ ಶಾಸಕ ಕೆ.ರಾಜು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹನುಮಂತಯ್ಯ, ಎಂಇಐ ವಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್.ಟಿ.ಕಾಂತರಾಜ್ ಪಟೇಲ್, ತಾಪಂ ವಾಜಿ ಅಧ್ಯಕ್ಷರಾದ ಗಾಣಕಲ್ ನಟರಾಜು, ಎಸ್.ಪಿ.ಜಗದೀಶ್, ಡಿ.ಎಂ.ಮಹದೇವಯ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಎನ್.ಅಶೋಕ್, ವಿಜಯ್‌ದೇವು, ಕೆಪಿಸಿಸಿ ಸದಸ್ಯ ಕೆ.ರಮೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಚಂದ್ರಶೇಖರ್, ದಿಶಾ ವಾಜಿ ಸದಸ್ಯೆ ಕಾವ್ಯ, ದೊಡ್ಡಗಂಗವಾಡಿ ಗ್ರಾಪಂ ಅಧ್ಯಕ್ಷ ರಾಜ್‌ಕುವಾರ್, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಜಗದೀಶ್ ಮತ್ತಿತರರು ಇದ್ದರು.

    ಕಾಂಗ್ರೆಸ್ ಬೆಂಬಲಿಸಿ : ಕೂಟಗಲ್ ಹೋಬಳಿಯಲ್ಲಿ ಅಭಿವೃದ್ಧಿ ಪರ ಕೆಲಸಗಳು ಆಗಬೇಕಿದೆ. ಸಂಸದ ಡಿ.ಕೆ.ಸುರೇಶ್ ಹಲವು ಅಭಿವೃದ್ಧಿ ಕೆಲಸಗಳನ್ನು ವಾಡುತ್ತಿರುವುದನ್ನು ಮೆಚ್ಚಿ ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಇಲ್ಲಿಂದ ಆಯ್ಕೆಯಾದವರು ಈ ಭಾಗವನ್ನು ಕಡೆಗಣಿಸುತ್ತಿರುವುದನ್ನು ಜನರು ಕಣ್ಣಾರೆ ನೋಡಿದ್ದೀರಿ. ಹಾಗಾಗಿ ಕಣ್ಣೀರು ಸುರಿಸುವವರಿಗೆ ಮಣೆ ಹಾಕದೆ ಅಭಿವೃದ್ಧಿ ಚಿಂತನೆ ಇರುವ ಕಾಂಗ್ರೆಸ್ ನಿಮ್ಮ ಸಹಕಾರವಿರಲಿ ಎಂದು ಮನವಿ ವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts