More

    ಕಿಂಡಿ ಅಣೆಕಟ್ಟಿನ ತಡೆಗೋಡೆಯಡಿ ಸಿಲುಕಿದ ಬಾಲಕ

    ಕಡಬ: ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ, ಬಾಲಕನ ಜೀವಕ್ಕೆ ಅಪಾಯವಾಗುವ ಸಂಭವವಿದ್ದರೂ, ಅದೃಷ್ಟವಶಾತ್ ಬಾಲಕ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ಕೋಡಿಂಬಾಳ ಗ್ರಾಮದ ಕುತ್ಯಾಡಿ ಎಂಬಲ್ಲಿ ಶನಿವಾರ ನಡೆದಿದೆ.

    ಕುತ್ಯಾಡಿ ಎಂಬಲ್ಲಿ ತೋಡಿಗೆ ನಿರ್ಮಿಸಲಾಗಿದ್ದ ಕಿಂಡಿ ಅಣೆಕಟ್ಟಿನ ತಡೆಗೋಡೆ ಮುಟ್ಟಿದ್ದ ಕುತ್ಯಾಡಿ ನಿವಾಸಿ ಮೋನಪ್ಪ ಗೌಡ ಎಂಬುವರ ಪುತ್ರ ಧನ್ವಿತ್(10) ತಡೆಗೋಡೆ ಸಹಿತ ತೋಡಿಗೆ ಬಿದ್ದಿದ್ದಾನೆ. ಇದರಿಂದ ಧನ್ವಿತ್ ತಲೆ ಹಾಗೂ ಮೈಗೆ ಗಾಯವಾಗಿದೆ. ಗಾಯಗೊಂಡ ಬಾಲಕನಿಗೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

    ಧನ್ವಿತ್ ಹಾಗೂ ತಮ್ಮ ದಕ್ಷಿತ್ ಆಟವಾಡಲು ಮನೆ ಸಮೀಪದ ತೋಟಕ್ಕೆ ಹೋಗಿದ್ದಾಗ ದಾರಿಯಲ್ಲಿ ಇರುವ ಕಿಂಡಿ ಅಣೆಕಟ್ಟಿನ ತಡೆಗೋಡೆ ಸ್ಪರ್ಶಿಸಿದಾಗ ದುರ್ಘಟನೆ ಸಂಭವಿಸಿದೆ. ಈ ಸಂದರ್ಭ ಸಹೋದರ ದಕ್ಷಿತ್ ಸಹಾಯಕ್ಕಾಗಿ ಮನೆಯವರನ್ನು ಕೂಗಿ ಕರೆದಿದ್ದು, ತಾಯಿ ವಾರಿಜಾ ತಕ್ಷಣ ಬಂದರೂ ತೋಡಿಗೆ ಇಳಿಯಲು ಸಾಧ್ಯವಗಾದೆ ಸಹಾಯಕ್ಕೆ ಬೇರೆಯವರನ್ನು ಕೂಗಿದ್ದರು. ನೆರೆಮನೆಯವರು ಆಗಮಿಸಿ ತಡೆಗೋಡೆಯಡಿ ಸಿಲುಕಿದ್ದ ಧನ್ವಿತ್‌ನನ್ನು ಮೇಲಕ್ಕೆತ್ತಿ ಕಡಬ ಸಮುದಾಯ ಆಸ್ಪತ್ರಗೆ ದಾಖಲಿಸಿದ್ದರು.

    ಕಳಪೆ ಕಾಮಗಾರಿ?: ಕಿಂಡಿ ಅಣೆಕಟ್ಟಿನ ತಡೆಗೋಡೆ ಸಿಮೆಂಟ್ ಇಟ್ಟಿಗೆಯಲ್ಲಿ ಅವೈಜ್ಞಾನಿಕವಾಗಿ ಕಟ್ಟಿರುವುದರಿಂದ ಅದು ಕುಸಿದಿದೆ. ಉದ್ಯೋಗ ಖಾತ್ರಿ ಯೊಜನೆಯಡಿ 3 ಲಕ್ಷ ರೂ. ಅನುದಾನದಲ್ಲಿ ಈ ಕಾಮಗಾರಿ ನಡೆಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts