More

    ದೇಹವ್ಯವಸ್ಥೆಯಲ್ಲಿ ಪರಿಪೂರ್ಣತೆ ಸಾಧಿಸುವುದು ಹೇಗೆ?

    ದೇಹವ್ಯವಸ್ಥೆಯಲ್ಲಿ ಪರಿಪೂರ್ಣತೆ ಸಾಧಿಸುವುದು ಹೇಗೆ?ಜೀವನದಲ್ಲಿ ಒಳ್ಳೆಯದು ಮಾತ್ರ ನಡೆಯಬೇಕು ಎಂದು ಬಯಸುತ್ತಾರೆಯೋ ಅವರು ಜೀವನವನ್ನು ನಡೆಸಲು ಯೋಗ್ಯರಲ್ಲ. ಏಕೆಂದರೆ ಕಠಿಣ ಸಂದರ್ಭಗಳಲ್ಲೂ ಜೀವನವನ್ನು ಸಂತೋಷದಿಂದ ಹೇಗೆ ನಡೆಸಿಕೊಂಡು ಹೋಗಬೇಕೆಂದು ತಿಳಿದಿಲ್ಲವಾದರೆ, ಜೀವನದ ಎಲ್ಲ ಉನ್ನತವಾದ ಸಾಧ್ಯತೆಗಳನ್ನು ತಪ್ಪಿಸಿಕೊಳ್ಳುವಿರಿ.

    ನಾನು ಎಲ್ಲಿಗೇ ಹೋದರೂ ಒಂದು ನಿರ್ದಿಷ್ಟ ಭಂಗಿಯಲ್ಲಿ ಕುಳಿತುಕೊಳ್ಳುತ್ತೇನೆ. ಹಾಗಾಗಿ ಎಲ್ಲರೂ, ‘ಇದು ಕೇವಲ ನೀವು ಕುಳಿತುಕೊಳ್ಳುವ ಶೈಲಿಯೇ ಅಥವಾ ಯಾವುದೇ ಒಬ್ಬ ವ್ಯಕ್ತಿ ಕುಳಿತುಕೊಳ್ಳಬೇಕಾದ ಭಂಗಿಯೇ’ ಎಂದು ಕೇಳುತ್ತಾರೆ. ಬಹಳಷ್ಟು ಜನ ಇಂದಿಗೂ ಭಾರತೀಯ ಶೈಲಿಯ ಶೌಚಗೃಹವನ್ನು ಬಳಸುತ್ತಿದ್ದಾರೆ. ಅಲ್ಲಿ ಒಂದು ನಿರ್ದಿಷ್ಟ ರೀತಿಯಲ್ಲಿ ಕುಳಿತುಕೊಳ್ಳುತ್ತೀರ ಅಲ್ಲವೇ? ಏಕೆಂದರೆ ದೇಹದ ನಿರ್ವಣವೇ ಹಾಗಿದೆ. ವಿದೇಶದಲ್ಲಿರುವ ಕೆಲವು ವಿಶ್ವವಿದ್ಯಾಲಯಗಳು ಇದರ ಬಗ್ಗೆ ಒಂದು ಅಧ್ಯಯನ ಮಾಡಿ, ‘ಇದು ಮಲವಿಸರ್ಜನೆ ಮಾಡುವ ಉತ್ತಮ ಮಾರ್ಗವಾಗಿದೆ’ ಎಂಬ ನಿರ್ಣಯಕ್ಕೆ ಬಂದಿದ್ದಾರೆ, ಏಕೆಂದರೆ ತೊಡೆಗಳು ಹೊಟ್ಟೆಯ ಕಡೆಗೆ ಒತ್ತುತ್ತದೆ. ಇದರಿಂದ ದೇಹದಿಂದ ಹೊರಬರಲು ಅಗತ್ಯವಿರುವ ಎಲ್ಲ ಅಂಶವೂ ಹೊರಬರುತ್ತದೆ. ಯಾವಾಗ ಹೊರಗೆ ಬರಬೇಕಾದಂಥ ಯಾವುದೇ ಅಂಶ ಹೊರಬರುವುದಿಲ್ಲವೋ, ಅದು ನಿಧಾನವಾಗಿ ತಲೆಯ ಕಡೆಗೆ ಏರುತ್ತದೆ ಅಷ್ಟೆ.

    ಒಂದು ಸಂಯೋಜನೆಯನ್ನು ತರುವುದು ಯೋಗ ವಿಜ್ಞಾನದಲ್ಲಿ, ದೇಹದ ಕೆಲವು ನಿರ್ದಿಷ್ಟ ಭಂಗಿಗಳಿಂದ ನಿರ್ದಿಷ್ಟ ಕಾರ್ಯಚಟುವಟಿಕೆ ಬಹಳ ಚುರುಕಾಗಿ ಮಾಡಲು ಸಾಧ್ಯವಾಗುತ್ತದೆ ಎಂಬುದಾಗಿ ವಿವರಿಸಲಾಗಿದೆ. ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಹಠಯೋಗದಲ್ಲಿ, ದೇಹವನ್ನು ಒಂದು ನಿರ್ದಿಷ್ಟ ಜ್ಯಾಮಿತಿಗೆ (ಜಛಿಟಞಛಿಠ್ಟಿಜ್ಚಿ ಟಛ್ಟಿ್ಛ್ಚಜಿಟ್ಞ) ಪರಿಪೂರ್ಣವಾಗಿ ಸಂಯೋಜನೆ ಹೊಂದುವ ರೀತಿ ಮಾಡುವುದು ಎಂದರ್ಥ. ದೇಹದ ಜ್ಯಾಮಿತಿ ಬ್ರಹ್ಮಾಂಡದ ಜ್ಯಾಮಿತಿಯೊಂದಿಗೆ ಸಂಯೋಜಿತವಾಯಿತೆಂದರೆ, ಯಾವಾಗಲೂ ಅದಕ್ಕೆ ಪೂರಕವಾಗಿರುತ್ತೀರ, ಎಂದಿಗೂ ವ್ಯತ್ಯಾಸವಾಗುವುದಿಲ್ಲ. ಎಷ್ಟು ಸಮತೋಲನವಿದೆ, ವಿಷಯಗಳನ್ನು ಎಷ್ಟು ಸ್ಪಷ್ಟವಾಗಿ ನೋಡುತ್ತೀರಿ ಮತ್ತು ಕೆಲಸಕಾರ್ಯಗಳನ್ನು ಎಷ್ಟು ಉತ್ತಮವಾಗಿ ಮಾಡಬಲ್ಲಿರಿ- ಇವೆಲ್ಲವೂ ನೀವು ಅದರೊಂದಿಗೆ ಎಷ್ಟು ಸಮಂಜಸವಾಗಿದ್ದೀರ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಎಷ್ಟು ಸರಾಗವಾಗಿ ಮತ್ತು ಘರ್ಷಣೆರಹಿತವಾಗಿ ಬದುಕುತ್ತೀರಿ ಎಂಬುದು ಸುತ್ತಲಿನ ಜನರು, ಮತ್ತಾವುದೇ ಜೀವಿಗಳು, ಮರಗಳು ಅಥವಾ ಕೇವಲ ಸುತ್ತಲಿನ ಸ್ಥಳ- ಯಾವುದೇ ಆಗಲಿ ಅವುಗಳೊಂದಿಗೆ ಎಷ್ಟು ಸಮಂಜಸವಾಗಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

    ನಾನು ಮಾತನಾಡುವಾಗ ಮಾತ್ರ ಸಿದ್ಧಾಸನ ಭಂಗಿಯ ರೀತಿಯಲ್ಲಿ ಕುಳಿತುಕೊಳ್ಳುತ್ತೇನೆ. ಇದರಲ್ಲಿ ಹಲವು ಅಂಶಗಳಿವೆ. ಒಂದು ಸರಳ ಅಂಶವೆಂದರೆ, ಇಂದಿನ ವೈದ್ಯಕೀಯ ವಿಜ್ಞಾನ ‘ಅಕಿಲೀಸ್’ ಎಂದು ಕರೆಯುವ ಒಂದು ಸ್ಥಳ ಎಡ ಹಿಮ್ಮಡಿಯ ಮೇಲಿದೆ (ಅಕಿಲೀಸ್ ಎಂಬ ವ್ಯಕ್ತಿಯ ಬಗ್ಗೆಯೂ ನೀವು ಕೇಳಿರಬಹುದು). ಅಕಿಲೀಸ್​ನ್ನು ಮೂಲಾಧಾರದೊಂದಿಗೆ ರ್ಸ³ಸುವ ರೀತಿಯಲ್ಲಿ ಹೊಂದಿಸಬೇಕು. ಈ ಎರಡು ಸ್ಥಳಗಳು ರ್ಸ³ಸಿದಾಗ, ನಿಮ್ಮೊಳಗಿನ ಹಲವು ಅಂಶಗಳು ಸ್ಪಷ್ಟವಾಗುತ್ತವೆ. ಆಲೋಚನೆಗಳು ಸ್ಪಷ್ಟವಾಗುತ್ತವೆ, ಭಾವನೆಗಳು ಹೊರಬರುತ್ತವೆ ಮತ್ತು ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮತ್ತು ಆಳವಾದ ಗ್ರಹಿಕೆ ಇರುತ್ತದೆ.

    ಅಕಿಲೀಸ್ ಅವರ ಹಿಮ್ಮಡಿಗೆ ಬಾಣವನ್ನು ಹೊಡೆದ ಕಾರಣವೇ ಅವರು ಕೊಲ್ಲಲ್ಪಟ್ಟರು ಎಂದು ನೀವು ಕೇಳಿರಬಹುದು. ಯಾರಾದರೂ ಹಿಮ್ಮಡಿಯ ಗಾಯದ ಕಾರಣ ಸಾಯುತ್ತಾರೆ ಎಂಬ ವಿಷಯವನ್ನು ನಂಬುತ್ತೀರಾ? ಮತ್ತೊಬ್ಬ ಮಹಾನ್ ವ್ಯಕ್ತಿ ಭಾರತದಲ್ಲಿ ಇದೇ ರೀತಿ ದೇಹ ತ್ಯಜಿಸಿದ. ಅಕಿಲೀಸ್​ಗಿಂತ ಬಹಳ ಹಿಂದೆ- ಅವನು ಕೃಷ್ಣ. ದೇಹದಲ್ಲಿ ಶಕ್ತಿವ್ಯವಸ್ಥೆಯ ಒಂದು ನಿರ್ದಿಷ್ಟ ಅಂಶವಿದೆ. ಅಕಿಲೀಸ್​ನ ಆ ಸ್ಥಳದೊಂದಿಗೆ ಮೂಲಾಧಾರ ಹೊಂದಿಸಿಕೊಂಡು ಕುಳಿತರೆ, ಯಾವುದೇ ಒಂದು ಪಕ್ಷ ವಹಿಸದೆ, ಸಮತೋಲನದಲ್ಲಿರುತ್ತೀರಿ.

    ಎಲ್ಲರೂ ತಮ್ಮದೇ ಆದ ಅಭಿಪ್ರಾಯ, ವಿಚಾರ ಮತ್ತು ಸಿದ್ಧಾಂತಗಳನ್ನು ಹೊಂದಿರುತ್ತಾರೆ. ಸ್ವಂತ ಜೀವನದ ಅನುಭವಗಳು ಮತ್ತು ಹೊರಗಡೆ ನೋಡುವಂಥ ಅನೇಕ ವಿಷಯಗಳು ಮನಸ್ಸಿನಲ್ಲಿ ಬೇರೂರಿರುತ್ತವೆ. ಒಂದು ವಿಷಯವನ್ನು ಇಷ್ಟ ಪಟ್ಟರೆ, ಮತ್ತೊಂದನ್ನು ಇಷ್ಟ ಪಡುವುದಿಲ್ಲ, ಕೆಲವರನ್ನು ಪ್ರೀತಿಸುತ್ತೀರಿ, ಕೆಲವರನ್ನು ದ್ವೇಷಿಸುತ್ತೀರಿ- ಇವೆಲ್ಲ ವಿಷಯಗಳು ನಿಮ್ಮನ್ನು ಪಕ್ಷಪಾತಿಗಳಾಗುವಂತೆ ಮಾಡುತ್ತವೆ. ಜೀವನವನ್ನು ಪೂರ್ಣವಾಗಿ ಅನುಭವಿಸಬೇಕಾದರೆ, ನಿಷ್ಪಕ್ಷಪಾತರಾಗಿ ಇರಬೇಕು. ಜೀವನದ ಪ್ರತಿ ಕ್ಷಣದಲ್ಲೂ ಎಲ್ಲವನ್ನೂ ಸಂಪೂರ್ಣವಾದ ಹೊಸತನದಿಂದ ನೋಡಲು ಕಲಿಯಬೇಕು.

    ಜನರಿಗೆ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ನನ್ನೊಂದಿಗೆ ಮೂವತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಇರುವ ಅನೇಕ ಜನರಿದ್ದಾರೆ, ಪ್ರತಿದಿನ ನನ್ನ ಜೊತೆ ಕೆಲಸ ಮಾಡುತ್ತಿರುತ್ತಾರೆ. ಆದರೆ ಇವತ್ತಿಗೂ ಅವರ ಕುರಿತು ನನ್ನದೇ ಆದ ಅಭಿಪ್ರಾಯವನ್ನು ಹೊಂದಿಲ್ಲ. ಒಂದು ನಿರ್ದಿಷ್ಟ ಕೆಲಸವನ್ನು ಮಾಡುವ ಸಮಯದಲ್ಲಿ ಮಾತ್ರ, ಅವರ ಸಾಮರ್ಥ್ಯ ಇತ್ಯಾದಿಗಳನ್ನು ಗಮನಿಸುತ್ತೇನೆ. ಆದರೆ ಅವರ ಬಗ್ಗೆ ನನಗೆ ಒಂದೇ ಒಂದು ಅಭಿಪ್ರಾಯವಿಲ್ಲ. ಏಕೆಂದರೆ, ಆಧ್ಯಾತ್ಮಿಕ ಪ್ರಕ್ರಿಯೆಯ ಮೂಲತತ್ತ್ವವೆಂದರೆ, ಪ್ರತಿಯೊಂದು ಜೀವವನ್ನೂ ಒಂದು ಸಾಧ್ಯತೆಯನ್ನಾಗಿ ನೋಡುವುದು. ಸಹಜವಾಗಿಯೇ, ಸಾಧ್ಯತೆಗೂ ಮತ್ತು ವಾಸ್ತವಕ್ಕೂ ಅಂತರವಿದೆ. ಕೆಲವರಿಗಷ್ಟೇ ಈ ಅಂತರವನ್ನು ಕಿರಿದಾಗಿಸುವ ಧೈರ್ಯ ಮತ್ತು ಬದ್ಧತೆ ಇರುತ್ತದೆ, ಕೆಲವರಿಗೆ ಅದು ಸಾಧ್ಯವಾಗುವುದಿಲ್ಲ. ಆದರೆ ಪ್ರತಿಯೊಂದು ಜೀವವೂ ಒಂದು ಸಾಧ್ಯತೆಯೇ. ಆ ಸಾಧ್ಯತೆಯನ್ನು ಮುಕ್ತವಾಗಿರಲು ಬಯಸಿದರೆಂದರೆ, ಎಂದಿಗೂ ಯಾರ ಮೇಲೂ ಯಾವುದೇ ರೀತಿಯ ಅಭಿಪ್ರಾಯ ರೂಪಿಸಿಕೊಳ್ಳಬಾರದು. ಒಳ್ಳೆಯದು, ಕೆಟ್ಟದ್ದು, ಅಸಹ್ಯ ಎಂದು ಯಾವುದೇ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಬಾರದು. ಎಲ್ಲವನ್ನೂ ಹೊಸದರಂತೆ ನೋಡಬೇಕು. ಯಾವುದೇ ವಿಷಯವಾಗಲೀ, ಈ ಕ್ಷಣದಲ್ಲಿ ಅದು ಹೇಗಿದೆ ಎಂಬುದಷ್ಟೇ ಪ್ರಸ್ತುತ. ‘ನಿನ್ನೆ ಹೇಗಿದ್ರಿ’ ಎಂಬುದು ನನಗೆ ಅಪ್ರಸ್ತುತ. ನಾಳೆ ನೀವು ಹೇಗೆ ಇರುವಿರೋ, ಅದನ್ನು ನೋಡೋಣ. ಇಂದಿನ ಪರಿಸ್ಥಿತಿಯನ್ನು ಅವಲಂಬಿಸಿ ನಾಳೆಯನ್ನು ನಿರ್ಧರಿಸಬಾರದು.

    ದೇಹದಲ್ಲಿ ನಿರ್ದಿಷ್ಟ ಜ್ಯಾಮಿತಿಯಿದೆ. ಈಗೀಗ, ಪಾಶ್ಚಿಮಾತ್ಯ ದೇಶಗಳು, ‘ಯೋಗವು ಶರೀರವನ್ನು ಬಗ್ಗಿಸುವ ವ್ಯಾಯಾಮವಾಗಿದೆ. ಹಾಗಾಗಿ ಯೋಗದ ಬದಲು, ಪೈಲೇಟ್ಸ್, ಬಾಕ್ಸಿಂಗ್, ಟೆನಿಸ್ ಮುಂತಾದುವುಗಳನ್ನು ಮಾಡಬಹುದು’ ಎಂದು ಪ್ರಚಾರ ಮಾಡುತ್ತಿವೆ. ಕೇವಲ ದೇಹದಾರ್ಢ್ಯತೆಯನ್ನು ಬಯಸಿದರೆ, ಎಲ್ಲಾದರೂ ಓಡಿ, ವ್ಯಾಯಾಮ ಮಾಡಿ, ಪರ್ವತವನ್ನು ಏರಿ, ಟೆನಿಸ್ ಆಡಿ ಅಥವಾ ಅಂತಹ ಮತ್ತೇನಾದರೂ ಚಟುವಟಿಕೆ ಮಾಡಿರಿ. ಯೋಗ ಕೇವಲ ದೇಹದಾರ್ಢ್ಯತೆಯ ಬಗ್ಗೆ ಅಲ್ಲ. ಯೋಗದಲ್ಲಿ ದೇಹದಾರ್ಢ್ಯತೆ ಒಂದು ಪಾರ್ಶ್ವ ಪರಿಣಾಮವಷ್ಟೇ. ಅದರಲ್ಲಿನ ಮುಖ್ಯ ವಿಷಯವೆಂದರೆ ಜೀವನದಲ್ಲಿ ಸರಿಯಾದ ಜ್ಯಾಮಿತಿಯನ್ನು, ಅರಿವನ್ನು ಹೊಂದುವುದು. ಏಕೆಂದರೆ ಭೌತಿಕ ಬ್ರಹ್ಮಾಂಡದಲ್ಲಿ ಎಲ್ಲವೂ ಜ್ಯಾಮಿತಿಯೇ ಆಗಿದೆ.

    ಒಂದು ಕಟ್ಟಡ ಬಹುಕಾಲ ಸ್ಥಿರವಾಗಿ ನಿಂತಿರುತ್ತದೆಯೋ ಅಥವಾ ತಲೆಯ ಮೇಲೆ ಬೀಳುತ್ತದೆಯೋ ಎಂಬುದು ಆ ಕಟ್ಟಡ ತನ್ನ ಜ್ಯಾಮಿತಿಯಲ್ಲಿ ಎಷ್ಟರ ಮಟ್ಟಿಗೆ ಕರಾರುವಾಕ್ಕಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದೇ ವಿಷಯ ದೇಹಕ್ಕೂ, ಗ್ರಹವ್ಯವಸ್ಥೆಗೂ, ಬ್ರಹ್ಮಾಂಡಕ್ಕೂ ಮತ್ತೆಲ್ಲಕ್ಕೂ ಪ್ರಸ್ತುತ.

    ಭೂಮಿ ಸೂರ್ಯನ ಸುತ್ತಲೂ ತಿರುಗುತ್ತಿರುವುದು ಯಾವುದೇ ಲೋಹದ ತಂತಿಯ ಕಾರಣದಿಂದಲ್ಲ. ಕೇವಲ ಆದರ ಜ್ಯಾಮಿತಿಯು ಕರಾರುವಾಕ್ಕಾಗಿ ಇರುವುದರಿಂದ. ಜ್ಯಾಮಿತಿಯಲ್ಲಿ ಸ್ವಲ್ಪ ಕೂಡ ಬದಲಾವಣೆಯಾದಲ್ಲಿ, ಎಲ್ಲವೂ ಅಸ್ತವ್ಯಸ್ತವಾಗುತ್ತದೆ. ನಮ್ಮ ವಿಷಯದಲ್ಲಿಯೂ ಅದು ನಿಜ. ನಮ್ಮ ಮೂಲಭೂತ ಜ್ಯಾಮಿತಿಯನ್ನು ನಾವು ಕಳೆದುಕೊಂಡರೆ, ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗುತ್ತದೆ. ಸಣ್ಣ ವಯಸ್ಸಿನಿಂದಲೇ, ನಿಮ್ಮ ವ್ಯವಸ್ಥೆಯ ಜ್ಯಾಮಿತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ. ಇದರಿಂದ ಜೀವನವನ್ನು ಪರಿಪಕ್ವವಾಗಿ ನಡೆಸಲು ಸಮರ್ಥರಾಗುತ್ತೀರಿ. ಯಾರು ತಮ್ಮ ಜೀವನದಲ್ಲಿ ಒಳ್ಳೆಯದು ಮಾತ್ರ ನಡೆಯಬೇಕು ಎಂದು ಬಯಸುತ್ತಾರೆಯೋ ಅವರು ಜೀವನವನ್ನು ನಡೆಸಲು ಯೋಗ್ಯರಲ್ಲ. ಏಕೆಂದರೆ ಕಠಿಣ ಸಂದರ್ಭಗಳಲ್ಲೂ ಜೀವನವನ್ನು ಸಂತೋಷದಿಂದ ಹೇಗೆ ನಡೆಸಿಕೊಂಡು ಹೋಗಬೇಕೆಂದು ತಿಳಿದಿಲ್ಲವಾದರೆ, ಜೀವನದ ಎಲ್ಲ ಉನ್ನತವಾದ ಸಾಧ್ಯತೆಗಳನ್ನು ತಪ್ಪಿಸಿಕೊಳ್ಳುವಿರಿ. ಕೇವಲ ಸ್ವಲ್ಪ ಕಷ್ಟಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಜೀವನದ ಎಲ್ಲ ದೊಡ್ಡ ಸಾಧ್ಯತೆಗಳನ್ನು ತಪ್ಪಿಸಿಕೊಳ್ಳುವಿರಿ. ವ್ಯವಸ್ಥೆ ಜ್ಯಾಮಿತೀಯವಾಗಿ ನಿರ್ದಿಷ್ಟ ಸ್ಥಿತಿಯಲ್ಲಿದ್ದಾಗ ಮಾತ್ರ, ಜೀವನದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರುತ್ತೀರಿ. ಎಂತಹ ಘೊರ ಪರಿಸ್ಥಿತಿಯಾದರೂ ಸರಿಯೇ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts