More

    26/11ರ ಮುಂಬೈ ದಾಳಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿದ್ದ ಸದಾನಂದ ವಸಂತ್ ‘ಎನ್‌ಐಎ’ ನೂತನ ಮುಖ್ಯಸ್ಥ  

    ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಅಂದರೆ ಎನ್‌ಐಎಗೆ ಹೊಸ ಮುಖ್ಯಸ್ಥರು ಸಿಕ್ಕಿದ್ದಾರೆ. ಎನ್‌ಐಎ ನೂತನ ಮುಖ್ಯಸ್ಥರಾಗಿ ಸದಾನಂದ ವಸಂತ್ ಡಾಟೆ ಅವರು ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಭಾನುವಾರ ನಿವೃತ್ತರಾದ ದಿನಕರ್ ಗುಪ್ತಾ ಅವರ ಸ್ಥಾನಕ್ಕೆ ಸದಾನಂದ್ ಆಯ್ಕೆಯಾಗಿದ್ದಾರೆ.    

    ಎನ್‌ಐಎ ಮುಖ್ಯಸ್ಥರಾಗುವ ಮೊದಲು, ಡಾಟೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ATS) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಮುಂಬೈನಲ್ಲಿ 26/11 ದಾಳಿಯ ಸಮಯದಲ್ಲಿ, ಭದ್ರತಾ ವ್ಯವಸ್ಥೆಗಳಲ್ಲಿ ಡಾಟೆ ಪ್ರಮುಖ ಪಾತ್ರ ವಹಿಸಿದ್ದಾರೆ .

    ಸದಾನಂದ ವಸಂತ್ ಡಾಟೆ ಪರಿಚಯ

    ಎನ್‌ಐಎ ಮುಖ್ಯಸ್ಥರಾಗುವ ಮೊದಲು ಸದಾನಂದ ವಸಂತ್ ಅವರು ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥರಾಗಿದ್ದರು. ಇವರು ಭಾರತೀಯ ಪೊಲೀಸ್ ಸೇವೆಯ (IPS) 1990 ರ ಬ್ಯಾಚ್ ಮಹಾರಾಷ್ಟ್ರ ಕೇಡರ್ ಅಧಿಕಾರಿ. ಎನ್ಐಎ  ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಡಾಟೆ ಮಹಾರಾಷ್ಟ್ರದ ಹಲವು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ.

    ಸಿಬಿಐನಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಗಿ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ನಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2008 ರಲ್ಲಿ ಮುಂಬೈ ಮೇಲೆ ದಾಳಿ ಮಾಡಿದ ಭಯೋತ್ಪಾದಕರನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ರಾಷ್ಟ್ರಪತಿ ಪದಕವನ್ನು ನೀಡಲಾಯಿತು.

    ಎನ್ಐಎ

    ಎನ್ಐಎ  ಮುಂಬೈ ಭಯೋತ್ಪಾದಕ ದಾಳಿಯ ನಂತರ 2008 ರಲ್ಲಿ ಭಾರತದ ಸಂಸತ್ತು ಅಂಗೀಕರಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಮಸೂದೆಯ ಅಡಿಯಲ್ಲಿ ಸ್ಥಾಪಿಸಲಾಯಿತು. ದೇಶದೊಳಗಿನ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟುವುದು ಮತ್ತು ಭಾರತದಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸುವುದು ಇದರ ಕೆಲಸ. ಎನ್ಐಎಗೆ ಭಾರತ ಸರ್ಕಾರ ಹಲವು ವಿಶೇಷ ಹಕ್ಕುಗಳನ್ನು ನೀಡಿದೆ.   

    ಪ್ಯಾರಸಿಟಮಾಲ್ ಸೇರಿದಂತೆ ಇಂದಿನಿಂದ 800 ಕ್ಕೂ ಹೆಚ್ಚು ಔಷಧಿಗಳು ದುಬಾರಿ!, ಯಾವುದು ಎಷ್ಟು ಹೆಚ್ಚಳ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts