More

    ಅತೀ ಕಡಿಮೆ ರೇಟಿಂಗ್ ಪಡೆದು ಹೊಸ ದಾಖಲೆ ಬರೆದ `ಸಡಕ್ – 2′

    ಮಹೇಶ್ ಭಟ್ ನಿರ್ದೇಶನದ `ಸಡಕ್ 2′ ಚಿತ್ರದ ಟ್ರೇಲರ್ ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿ, ಜಗತ್ತಿನಲ್ಲೇ ಅತೀ ಹೆಚ್ಚು ಡಿಸ್ಲೈಕ್‍ಗಳನ್ನು ಪಡೆದ ಎರಡನೇ ಟ್ರೇಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಚಿತ್ರವು ಬಿಡುಗಡೆಯಾಗಿದ್ದು, ಇನ್ನೊಂದು ಹೊಸ ದಾಖಲೆಯನ್ನು ಬರೆದಿದೆ.

    ಇದನ್ನೂ ಓದಿ: ಚಂದನವನಕ್ಕಿದೆಯಾ ನಶೆಯ ನಂಟು?

    `ಸಡಕ್ 2′ ಚಿತ್ರವು ಆಗಸ್ಟ್ 28ರ (ಶುಕ್ರವಾರ) ರಾತ್ರಿ 7.30ಕ್ಕೆ ಡಿಸ್ನಿ ಹಾಟ್‍ಸ್ಟಾರ್‍ನಲ್ಲಿ ಪ್ರೀಮಿಯರ್ ಆಗಿದೆ. ಚಿತ್ರವನ್ನು ಜಗತ್ತಿನಾದ್ಯಂತ ಜನ ನೋಡಿದ್ದು, ಐಎಂಡಿಬಿಯಲ್ಲಿ ಈ ಚಿತ್ರಕ್ಕೆ ಅತೀ ಕಡಿಮೆ ರೇಟಿಂಗ್ ಸಿಕ್ಕಿದೆ. ಇದಕ್ಕೂ ಮುನ್ನ ಅಜಯ್ ದೇವಗನ್ ಅವರ `ಹಿಮ್ಮತ್‍ವಾಲಾ’ ಮತ್ತು ರಾಮ್‍ಗೋಪಾಲ್ ವರ್ಮಾ ಅವರ `ಆಗ್’ ಚಿತ್ರಕ್ಕೆ ಪ್ರೇಕ್ಷಕರಿಂದ 1.7 ರೇಟಿಂಗ್ ಸಿಕ್ಕಿತ್ತು. ಪ್ರೇಕ್ಷಕರಿಂದ ಒಂದು ಚಿತ್ರಕ್ಕೆ ಸಿಕ್ಕ ಅತ್ಯಂತ ಕಡಿಮೆ ರೇಟಿಂಗ್ ಎಂದು ಹೇಳಲಾಗಿತ್ತು.

    ಈಗ ಆ ಚಿತ್ರಗಳ ದಾಖಲೆಯನ್ನು ಆಲಿಯಾ ಭಟ್, ಸಂಜಯ್ ದತ್ ನಟಿಸಿರುವ `ಸಡಕ್ 2′ ಅಳಿಸಿ ಹಾಕಿದೆ. ಈ ಚಿತ್ರಕ್ಕೆ ಐಎಂಡಿಬಿಯಲ್ಲಿ ಪ್ರೇಕ್ಷಕರಿಂದ ಸಿಕ್ಕ ರೇಟಿಂಗ್ ಎಷ್ಟು ಗೊತ್ತಾ? 1.1 ಮಾತ್ರ. 10ಕ್ಕೆ 1.1 ರೇಟಿಂಗ್ ಸಿಕ್ಕಿರುವ ಈ ಚಿತ್ರವೇ ಇದೀಗ, ಭಾರತದ ಮೊದಲ ಅತ್ಯಂತ ಕಡಿಮೆ ರೇಟಿಂಗ್ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬರೀ ರೇಟಿಂಗ್ ಅಷ್ಟೇ ಅಲ್ಲ, ಚಿತ್ರ ನೋಡಿರುವವರು ಇದೊಂದು ಬೋರಿಂಗ್ ಚಿತ್ರ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ವಿಮರ್ಶಕರ ವಲಯದಿಂದಲೂ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳು ಸಿಕ್ಕಿಲ್ಲ.

    ಇದನ್ನೂ ಓದಿ: ಬ್ರೇಕಿಂಗ್ ನ್ಯೂಸ್: ‘ನಟಿ ಶರ್ಮಿಳಾ ಮಾಂಡ್ರೆ ಪಕ್ಕದಲ್ಲೇ ಕುಳಿತ್ತಿದ್ದ ಬೆಂಗಳೂರಿನ ದೊಡ್ಡ ಡ್ರಗ್ಸ್ ಪೆಡ್ಲರ್’

    ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ಬಾಲಿವುಡ್‍ನಲ್ಲಿ ನೆಪೋಟೀಸಂ (ಸ್ವಜನಪಕ್ಷಪಾತ)ದ ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಸ್ಟಾರ್ ಮಕ್ಕಳಿಂದಾಗಿ, ಹೊರಗಿನವರಿಗೆ ಅವಕಾಶಗಳು ಸಿಗುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಆಲಿಯಾ ಭಟ್ ಸಹ ಸಿನಿಮಾ ಕುಟುಂಬದವರಾದ್ದರಿಂದ, ಅವರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. `ಸಡಕ್ 2′ ಚಿತ್ರವನ್ನು ಸೋಲಿಸಬೇಕು ಎಂದು ಇಂಟರ್‍ನೆಟ್‍ನಲ್ಲಿ ಅಭಿಯಾನಗಳು ಶುರುವಾಗಿದ್ದವು. ಅದರ ಪ್ರತಿಫಲವಾಗಿ ಚಿತ್ರಕ್ಕೆ ಇದೀಗ ಅತೀ ಕಡಿಮೆ ರೇಟಿಂಗ್ ಸಿಕ್ಕಿದೆ.

    ಇದಕ್ಕಿಂತ ಸಾಕ್ಷಿ ಬೇಕಾ? ರಿಯಾಗೆ ಸುಶಾಂತ್ ಸಹೋದರಿ ಪ್ರಶ್ನೆ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts