More

    ಕಾಶ್ಮೀರದ ಬಗ್ಗೆ ನಾಲಿಗೆ ಹರಿಬಿಟ್ಟವರನ್ನು ತೆಗೆದುಹಾಕಲು, ಪಿಪಿಸಿಸಿ ಅಧ್ಯಕ್ಷ ಸಿಧುಗೆ ಸೂಚನೆ

    ನವದೆಹಲಿ: ಪಾಕಿಸ್ತಾನ ಮತ್ತು ಜಮ್ಮು-ಕಾಶ್ಮೀರ ವಿಚಾರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ತಮ್ಮ ಈರ್ವರು ಸಲಹೆಗಾರರನ್ನು ಪಂಜಾಬ್​ ಪ್ರದೇಶ್​ ಕಾಂಗ್ರೆಸ್​ ಕಮಿಟಿ(ಪಿಪಿಸಿಸಿ) ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ತಕ್ಷಣವೇ ತೆಗೆದು ಹಾಕಬೇಕೆಂದು ಹಿರಿಯ ಕಾಂಗ್ರೆಸ್​ ನಾಯಕ ಹರೀಶ್​ ರಾವತ್​ ಹೇಳಿದ್ದಾರೆ.

    ಇತ್ತೀಚೆಗೆ ಸಿಧು ತಂಡ ಸೇರಿದ ಪ್ಯಾರೆ ಲಾಲ್​ ಗರ್ಗ್​​ ಮತ್ತು ಮಲ್ವಿಂದರ್​ ಮಾಲಿ ಅವರನ್ನು ಸಿಧು ಕೂಡಲೇ ವಜಾ ಮಾಡಬೇಕು. ಈ ಬಗ್ಗೆ ಸಿಧು ಕ್ರಮ ಕೈಗೊಳ್ಳದಿದ್ದರೆ ಪಕ್ಷವೇ ಅವರನ್ನು ತೆಗೆದುಹಾಕುತ್ತದೆ ಎಂದು ಎನ್​ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಪಂಜಾಬ್​ ಕಾಂಗ್ರೆಸ್​ ಉಸ್ತುವಾರಿಯಾಗಿರುವ ರಾವತ್​ ಹೇಳಿದ್ದಾರೆ.

    ಇದನ್ನೂ ಓದಿ: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಗ್ಯಾಂಗ್ ರೇಪ್: ಘಟನಾ ಸ್ಥಳದಲ್ಲಿ ಸಿಕ್ಕಿದೆ 34 ಸಾಕ್ಷಿ

    ಮಲ್ವಿಂದರ್​ ಮಾಲಿ ಅವರು ಇತ್ತೀಚಿನ ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ಕಾಶ್ಮೀರವನ್ನು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

    “ಅವರ ಹೇಳಿಕೆಗಳ ಬಗ್ಗೆ ಇಡೀ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ವಿರೋಧವಿದೆ. ಜಮ್ಮು-ಕಾಶ್ಮೀರದ ಬಗ್ಗೆ ಪಕ್ಷಕ್ಕೆ ಒಂದು ನಿಲುವಿದೆ – ಅದು ಭಾರತದ ಭಾಗ ಎಂಬ ನಿಲುವು” ಎಂದಿರುವ ರಾವತ್​, ಅವರನ್ನು ಪಕ್ಷ ನೇಮಿಸಿಲ್ಲ. ನಾವು ಸಿಧುಗೆ ಅವರನ್ನು ವಜಾ ಮಾಡಲು ಹೇಳಿದ್ದೀವಿ. ಪಕ್ಷಕ್ಕೆ ಮುಜುಗರ ತರುವಂತಹ ಜನರು ನಮಗೆ ಬೇಡ” ಎಂದಿದ್ದಾರೆ. (ಏಜೆನ್ಸೀಸ್)

    ಮಹಾ ಸಿಎಂ ಉದ್ಧವ್​ ಠಾಕ್ರೆ, ಪತ್ನಿ ರಶ್ಮಿ ಠಾಕ್ರೆ ವಿರುದ್ಧ ಬಿಜೆಪಿ ನಾಯಕರ ದೂರು

    ಖಾಸಗಿ ಬಸ್ಸಿನಲ್ಲಿ 30 ಸಜೀವ ಬಾಂಬ್​ಗಳು ಪತ್ತೆ!

    ಬೆಳೆಯುವ ಮಕ್ಕಳಿಗೆ ಎತ್ತರವಾಗಲು ಸಹಕಾರಿ, ಈ ಸುಲಭ ಯೋಗಾಸನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts