More

  ತನ್ನ ದಾಖಲೆ ಸರಿಗಟ್ಟಿದ ಕೊಹ್ಲಿಗೆ ಸಚಿನ್ ಶುಭಾಶಯ: ಏನಂದ್ರು ಕ್ರಿಕೆಟ್ ದೇವರು?

  ಕೋಲ್ಕತ: ‘ಕ್ರಿಕೆಟ್ ದೇವರ’ ದಾಖಲೆಯನ್ನು ಹುಟ್ಟಿದ ದಿನದಂದೇ ಸರಿಗಟ್ಟಿ ಹೊಸ ದಾಖಲೆಯನ್ನು ಹುಟ್ಟುಹಾಕುವ ಭರವಸೆ ಮೂಡಿಸಿರುವ ವಿರಾಟ್ ಕೊಹ್ಲಿಗೆ ಇದೀಗ ಸಚಿನ್ ತೆಂಡುಲ್ಕರ್ ಶುಭಾಶಯ ಕೋರಿದ್ದಾರೆ.

  ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ಇಂದು ಶತಕ ಬಾರಿಸುವ ಮೂಲಕ ಸಚಿನ್ ದಾಖಲೆ ಸರಿಗಟ್ಟಿ ತಮ್ಮ ಜನ್ಮದಿನವನ್ನು ಅವಿಸ್ಮರಣೀಯ ಆಗಿಸಿಕೊಂಡಿದ್ದಾರೆ.

  ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂದು ಅಮೋಘ ಆಟವನ್ನು ಪ್ರದರ್ಶಿಸಿದ ವಿರಾಟ್​ ಕೊಹ್ಲಿ ಈ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್​ನಲ್ಲಿ 49ನೇ ಶತಕ ಬಾರಿಸುವ ಮೂಲಕ ಸಚಿನ್ ತೆಂಡುಲ್ಕರ್ ಮಾಡಿದ್ದ ಅದೇ ಸಾಧನೆಯನ್ನು ಸರಿಗಟ್ಟಿದ್ದಾರೆ.

  ಈ ವರ್ಷದ ಆರಂಭದಲ್ಲಿ 49ರಿಂದ 50ಕ್ಕೆ ಹೋಗಲು ನನಗೆ 365 ದಿನಗಳು ಬೇಕಾದವು. ನೀವು 49ರಿಂದ 50ಕ್ಕೆ ಹೋಗಿ ಮುಂದಿನ ಕೆಲವು ದಿನಗಳಲ್ಲಿ ನನ್ನ ದಾಖಲೆಯನ್ನು ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿಗೆ ಸಚಿನ್ ತೆಂಡುಲ್ಕರ್ ಶುಭಾಶಯ ಕೋರಿದ್ದಾರೆ.

  ಬೆಂಗಳೂರಿನ ಈ ಅಪಾರ್ಟ್​ಮೆಂಟ್​​ನಲ್ಲಿ ನಾಯಿಯನ್ನು ಸಾಕಲು 10 ಸಾವಿರ ರೂ. ಕೊಡಬೇಕಂತೆ!

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts