More

    ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ದಿಗ್ಗಜ ಸಚಿನ್ ತೆಂಡುಲ್ಕರ್ ಮಾಡಿಕೊಂಡ ಮನವಿ ಏನು?

    ನವದೆಹಲಿ: ವೃತ್ತಿಪರ ಮಟ್ಟದಲ್ಲಿ ಆಡುವಾಗ ಬ್ಯಾಟ್ಸ್‌ಮನ್‌ಗಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಬೇಕು ಎಂದು ದಿಗ್ಗಜ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಮನವಿ ಮಾಡಿದ್ದಾರೆ. ಪಂಜಾಬ್ ತಂಡದ ಫೀಲ್ಡರ್ ನಿಕೋಲ್ ಪೂರನ್ ರನೌಟ್ ಮಾಡುವ ಬರದಲ್ಲಿ ಎಸೆದ ಚೆಂಡು ಸನ್‌ರೈಸರ್ಸ್‌ ಆಲ್ರೌಂಡರ್ ವಿಜಯ್ ಶಂಕರ್ ತಲೆಗೆ ಬಡಿದಿತ್ತು. ಆದರೆ, ಅದೃಷ್ಟಾವಶಾತ್ ವಿಜಯ್ ಹೆಲ್ಮೆಟ್ ಧರಿಸಿದ್ದರು.

    ಪೂರನ್ ಎಸೆದ ಚೆಂಡು ವಿಜಯ್ ಶಂಕರ್ ತಲೆಗೆ ಬಡಿದ ವಿಡಿಯೋ ಪ್ರಕಟಿಸಿರುವ ಸಚಿನ್ ತೆಂಡುಲ್ಕರ್, ಕ್ರಿಕೆಟ್ ತುಂಬಾ ವೇಗವಾಗಿ ನಡೆಯುತ್ತಿದೆ, ಆದರೆ, ಸುರಕ್ಷತೆ ಇದೆಯೇ ಎಂಬುದನ್ನು ಗಮನಿಸಬೇಕು. ಹೆಲ್ಮೆಟ್ ಕಡ್ಡಾಯಗೊಳಿಸಬೇಕು ಎಂದು ಐಸಿಸಿಗೆ ಟ್ವೀಟ್ ಮೂಲಕ ಮನವಿ ಸಲ್ಲಿಸಿದ್ದಾರೆ. ಜತೆಗೆ ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಗಳಿಗೆ ಟ್ಯಾಗ್ ಮಾಡಿದ್ದಾರೆ.

    2014ರ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ಫಿಲ್ ಹ್ಯೂಸ್ ತಲೆಗೆ ಸೀನ್ ಅಬೋಟ್ ಎಸೆತದ ಬೌನ್ಸ್ ಎಸೆದ ತಲೆಗೆ ಬಡಿದ ಪರಿಣಾಮ ಸಾವನ್ನಪ್ಪಿದ್ದರು. ಪ್ರದರ್ಶನ ಪಂದ್ಯವೊಂದರಲ್ಲಿ ಸುನೀಲ್ ಗಾವಸ್ಕರ್ ಎಸೆದ ಚೆಂಡು ತಮಗೆ ಬಿದ್ದಿದ್ದ ಘಟನೆ ಕುರಿತು ಭಾರತ ತಂಡದ ಮುಖ್ಯ ಕೋಚ್ ರವಿ ಶಾಸಿ ಮೆಲುಕು ಹಾಕಿದ್ದಾರೆ. ಸದ್ಯ ದೇವರ ದಯೆ ನನಗೆ ಏನು ಆಗಿರಲಿಲ್ಲ ಎಂದು ಶಾಸ್ತ್ರಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts