More

    ತಟ್ಟೆ ತುಂಬಾ ಇದ್ದ ತಿಂಡಿ ​ಒಂದೇ ನಿಮಿಷದಲ್ಲಿ ಖಾಲಿ ಮಾಡಿದ್ರು ಸಚಿನ್ !

    ಕರೊನಾ ಲಾಕ್​ಡೌನ್​ ಸಮಯವನ್ನು ತನ್ನ ಫ್ಯಾಮಿಲಿ ಜತೆ ಮನೆಯಲ್ಲೇ ಕಳೆಯುತ್ತಿರುವ ಭಾರತೀಯ ಕ್ರಿಕೆಟ್​ನ ಆರಾಧ್ಯ ದೈವ ಸಚಿನ್​ ತೆಂಡೂಲ್ಕರ್​ ಅವರು ಮಗಳು ಸಾರಾ ಮಾಡಿಕೊಟ್ಟ ತಿಂಡಿಯೊಂದರ ರುಚಿ ಸವಿದು ದಿಲ್​ ಖುಷ್​ ಆಗಿದ್ದಾರೆ. ಒಂದು ಪ್ಲೇಟ್​ ತುಂಬಾ ಇದ್ದ ತಿನಿಸನ್ನು ಕೇವಲ 60 ಸೆಕೆಂಡ್​ನಲ್ಲಿ ಅಂದರೆ, ಒಂದೇ ನಿಮಿಷದಲ್ಲಿ ತಿಂದು ಮುಗಿಸಿದ್ದಾರಂತೆ. ಅಂದಹಾಗೆ, ಆ ತಿಂಡಿಯಾದರೂ ಏನು ಗೊತ್ತಾ?

    ತನ್ನ ಪ್ರೀತಿಯ ಅಪ್ಪನಿಗೆ ಖುದ್ದು ಮಗಳೇ ‘ಬೀಟ್​ರೂಟ್​ ಕಬಾಬ್​’ ತಯಾರಿಸಿ ಉಣಬಡಿಸಿದ್ದಾಳೆ. ಒಂದು ಪ್ಲೇಟ್​ನಲ್ಲಿ ಸುಮಾರು 8-9 ಫೀಸ್​ ಬೀಟ್ರೂಟ್​ ಕಬಾಬ್​ ಹಾಕಿ ಮಗಳು ಅಪ್ಪನ ಕೈಗೆ ಇಡುತ್ತಿದ್ದಂತೆ ಅದನ್ನೆಲ್ಲ ಖುಷಿಯಿಂದ ಒಮ್ಮೆಲೆ ತಿಂದು ಮುಗಿಸಿದ್ದಾರೆ. ಈ ಬಗ್ಗೆ ಅವರು ಬುಧವಾರ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ ಮಹಿಳಾ ಪಿಎಸ್​ಐಗೆ ಬೆದರಿಕೆಯೊಡ್ಡಿದ್ರಾ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ? ಮಂಗಳವಾರ ರಾತ್ರಿ ನಡೆದಿದ್ದೇನು?

    ಸಚಿನ್​ ಬೀಟ್ರೂಟ್​ ಕಾಬಾಬ್​ ತುಂಬಿದ ತಟ್ಟೆಯನ್ನು ಹಿಡಿದಿರುವ ಮತ್ತು ಎಲ್ಲವನ್ನೂ ತಿಂದಾದ ಮೇಲೆ ಪ್ಲೇಟ್​ ಖಾಲಿ ಆಗಿರುವುದನ್ನು ಅಪ್ಪ-ಮಗಳು ತೋರಿಸುತ್ತಿರುವ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್​ ಮಾಡಿರುವ ತೆಂಡೂಲ್ಕರ್​, ಮಗಳು ಸಾರಾಗೆ ಧನ್ಯವಾದ ತಿಳಿಸಿದ್ದಾರೆ. ತಿನಿಸು ಬಹಳ ರುಚಿಯಾಗಿತ್ತು. ಎಲ್ಲವನ್ನೂ 60 ಸೆಂಕೆಂಡಲ್ಲಿ ತಿಂದು ಖಾಲಿ ಮಾಡಿಬಿಟ್ಟೆ ಎಂದೂ ಬರೆದುಕೊಂಡಿದ್ದಾರೆ.

    ವಿಶ್ವ ಕ್ರಿಕೆಟ್​ನ ಬ್ಯಾಂಟಿಂಗ್​ ದಿಗ್ಗಜನ ಈ ಫೋಟೋಗೆ ಲಕ್ಷಾಂತರ ಲೈಕ್ಸ್, ಕಮೆಂಟ್​ಗಳು ಬರುತ್ತಿವೆ. ಇನ್ನು ಸಚಿನ್​ ಸಂತಸಕ್ಕೆ ಕಾರಣವಾದ ಮಗಳು ಸಾರಾ ತೆಂಡೂಲ್ಕರ್​ಗೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts