More

    ಶಬರಿಮಲೆ ಯಾತ್ರಾರ್ಥಿಗಳಿಗೆ ಹೈಕೋರ್ಟ್ ಆದೇಶ: ನಟರು-ರಾಜಕಾರಣಿಗಳ ಫೋಟೋಸಹಿತ ದರ್ಶನಕ್ಕಿಲ್ಲ ಪ್ರವೇಶ

    ಕೊಚ್ಚಿ: ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತಾದಿಗಳು ಇತ್ತೀಚೆಗೆ ಸಿನಿಮಾ ನಟರು ಹಾಗೂ ರಾಜಕಾರಣಿಗಳ ಫೋಟೋ ಹಿಡಿದುಕೊಂಡು ಹೋಗಿ ಅದನ್ನು ಪ್ರದರ್ಶಿಸಿ ತಮ್ಮ ಕೋರಿಕೆಯನ್ನು ಹೇಳಿಕೊಳ್ಳುತ್ತಿರುವ ಪ್ರಕರಣಗಳು ಬಹಳಷ್ಟು ನಡೆದಿವೆ. ಇದೀಗ ಅಂಥದ್ದಕ್ಕೆಲ್ಲ ಕಡಿವಾಣ ಹಾಕುವಂಥ ಆದೇಶ ಕೇರಳ ಹೈಕೋರ್ಟ್​ನಿಂದಲೇ ಹೊರಬಿದ್ದಿದೆ.

    ಯಾವುದೇ ಭಕ್ತಾದಿಗಳು ನಟರು ಹಾಗೂ ರಾಜಕಾರಣಿಗಳು ಸೇರಿದಂತೆ ಯಾವುದೇ ಸೆಲೆಬ್ರಿಟಿಗಳ ದೊಡ್ಡ ಫೋಟೋ ಅಥವಾ ಪೋಸ್ಟರ್​ ಹಿಡಿದು ಶಬರಿಮಲೆಯ ಸನ್ನಿಧಾನಕ್ಕೆ ಪ್ರವೇಶ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ಆದೇಶ ಮಾಡಿದೆ. ಈ ಕುರಿತು ಟ್ರಾವಂಕೂರ್ ದೇವಸ್ವಂ ಬೋರ್ಡ್​ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

    ಶಬರಿಮಲೆಯ ಸನ್ನಿಧಿಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಲು ಭಕ್ತರಿಗೆ ಎಲ್ಲ ಹಕ್ಕುಗಳಿವೆ. ಆದರೆ ಭಕ್ತರು ಕ್ಷೇತ್ರದ ಸಂಪ್ರದಾಯ ಹಾಗೂ ಪದ್ಧತಿಯನ್ನು ಪಾಲಿಸುವುದು ಕಡ್ಡಾಯ ಎಂದು ನ್ಯಾಯಮೂರ್ತಿ ಅನಿಲ್​ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ. ಅಜಿತ್​ಕುಮಾರ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ. ಭಕ್ತರು ಸೆಲೆಬ್ರಿಟಿಗಳ ಫೋಟೋ-ಪೋಸ್ಟರ್ ಹಿಡಿದುಕೊಂಡು ಪತಿನೆಟ್ಟಂಪಾಡಿ ಅಥವಾ ಶಬರಿಮಲೆ ಸನ್ನಿಧಾನದ ಸೋಪಾನಂ ಎಂದು ದರ್ಶನ ಪಡೆಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

    ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts