More

    ಚಿತ್ರಮಂದಿರಗಳಲ್ಲಿ ಬಿಡಿ, ಟಿವಿಯಲ್ಲೂ ಫ್ಲಾಪ್​ ಆಯ್ತು ಪ್ರಭಾಸ್​ ಅಭಿನಯದ ‘ಸಾಹೋ’ …

    ಹೈದರಾಬಾದ್​: ಕಳೆದ ವರ್ಷದ ಅತೀ ನಿರೀಕ್ಷಿತ ಚಿತ್ರಗಳಲ್ಲಿ ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರವೂ ಒಂದು. ‘ಬಾಹುಬಲಿ 2’ನಂತಹ ಸೂಪರ್​ ಹಿಟ್​ ಚಿತ್ರದ ನಂತರ ಬಿಡುಗಡೆಯಾದ ಚಿತ್ರವಾದ್ದರಿಂದ, ‘ಸಾಹೋ’ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಮತ್ತು ಕೂತಹಲಗಳಿದ್ದವು. ಆದರೆ. ಜನರ ನಿರೀಕ್ಷೆಗೆ ನಿಲುಕುವುದಕ್ಕೆ ಈ ಚಿತ್ರಕ್ಕೆ ಸಾಧ್ಯವಾಗಲಿಲ್ಲ.

    ಇದನ್ನೂ ಓದಿ: ಮೊಮ್ಮಗ ಬಂದಿದ್ದು ಸಮುದ್ರಮಂಥನ ಆಗಿ ಕ್ಷೀರಸಾಗರದಿಂದ ಅಮೃತ ಸಿಕ್ಕಂತಾಗಿದೆ: ಸುಂದರ್​ ರಾಜ್​

    ‘ಸಾಹೋ’ ಚಿತ್ರವು ಬರೀ ಚಿತ್ರಮಂದಿರಗಳಲ್ಲಿ ಫ್ಲಾಪ್​ ಆಗಿದ್ದಷ್ಟೇ ಅಲ್ಲ, ಟಿವಿಯಲ್ಲೂ ಫ್ಲಾಪ್​ ಎಂದನಿಸಿಕೊಂಡಿದೆ. ಇತ್ತೀಚೆಗೆ ಈ ಚಿತ್ರವು ಜೀ ತೆಲುಗುನಲ್ಲಿ ಪ್ರದರ್ಶನವಾಗಿದ್ದು, ಅತೀ ಕಡಿಮೆ ಟಿವಿಆರ್​ ಪಡೆಯುವ ಮೂಲಕ ಫ್ಲಾಪ್​ ಎಂದನಿಸಿಕೊಂಡಿದೆ.

    ಅಕ್ಟೋಬರ್​ 18ರಂದು, ‘ಸಾಹೋ’ ಚಿತ್ರವು ಜೀ ತೆಲುಗು ಚಾನಲ್​ನಲ್ಲಿ ಪ್ರೀಮಿಯರ್​ ಆಗಿತ್ತು. ಚಿತ್ರಮಂದಿರಗಳಲ್ಲಿ ಹೆಚ್ಚು ಯಶಸ್ವಿಯಾಗದ ಈ ಚಿತ್ರ, ಕಿರುತೆರೆಯಲ್ಲಾದರೂ ಯಶಸ್ವಿಯಾಗಬಹುದು, ಜನ ನೋಡಬಹುದು ಎಂದು ಚಿತ್ರತಂಡದವರು ನಿರೀಕ್ಷಿಸಿದ್ದರು. ಆದರೆ, ಟಿಆರ್​ಪಿ ಪಟ್ಟಿ ನೋಡಿ ಎಲ್ಲರಿಗೂ ಶಾಕ್​ ಆಗಿದೆ. ಏಕೆಂದರೆ, ಈ ಚಿತ್ರಕ್ಕೆ 5.82 ಟಿವಿಆರ್​ ಸಿಕ್ಕಿದ್ದು, ಅತೀ ಕಡಿಮೆ ಎಂದು ಹೇಳಲಾಗುತ್ತಿದೆ.

    ಅಂದಹಾಗೆ, ಆಂಧ್ರ ಕಿರುತೆರೆಯಲ್ಲೇ ಇದುವರೆಗೂ ಅತೀ ಹೆಚ್ಚು ಟಿಆರ್​ಪಿ ಸಿಕ್ಕ ಚಿತ್ರ ಎಂದರೆ, ಅದು ಅಲ್ಲು ಅರ್ಜುನ್​ ಅಭಿನಯದ ‘ಅಲಾ ವೈಕುಂಠಪುರಂಲೋ’ ಎಂದು ಹೇಳಲಾಗುತ್ತದೆ. ಈ ವರ್ಷದ ಆರಂಭದಲ್ಲಿ ಬಿಡಗುಡೆಯಾದ ಈ ಚಿತ್ರವನ್ನು ಕೆಲವು ತಿಂಗಳುಗಳ ಹಿಂದೆ ಟಿವಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ದಾಖಲೆಯ 27 ಟಿವಿಆರ್​ ಪಡೆಯುವ ಮೂಲಕ, ಅತೀ ಹೆಚ್ಚು ಟಿಆರ್​ಪಿ ಗಿಟ್ಟಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಮಹೇಶ್​ ಬಾಬು ಅಭಿನಯದ ‘ಸರಿಲೇರು ನೀಕೆವ್ವರು’ ಚಿತ್ರಕ್ಕೆ 23 ಟಿವಿಆರ್​ ಸಿಗುವ ಮೂಲಕ ಎರಡನೆಯ ಸ್ಥಾನದಲ್ಲಿದೆ.

    ಇದನ್ನೂ ಓದಿ: ಪಕ್ಷ ನೋಡಿ ನಾನು ಪ್ರಚಾರಕ್ಕೆ ಬರುವುದಿಲ್ಲ, ವ್ಯಕ್ತಿ ನೋಡಿ ಕ್ಯಾಂಪೇನ್​ ಮಾಡುತ್ತೇನೆ: ದರ್ಶನ್​

    ‘ಸಾಹೋ’ ಚಿತ್ರಕ್ಕೆ ಈ ದಾಖಲೆಗಳನ್ನು ಮುರಿಯುವುದಕ್ಕೆ ಸಾಧ್ಯವಾಗದಿದ್ದರೂ, ಕನಿಷ್ಠ ಪಕ್ಷ 20 ಟಿವಿಆರ್​ ಆದರೂ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, 5.80 ಟಿವಿಆರ್​ ಸಿಗುವ ಮೂಲಕ ಪ್ರಭಾಸ್​ ಚಿತ್ರವು ಎಲ್ಲರ ನಿರೀಕ್ಷೆಯನ್ನು ತಲೆಕೆಳಗೆ ಮಾಡಿದೆ.

    PHOTO GALLERY| ಕಾಜಲ್​ ಕಲ್ಯಾಣ; ಮೆಹೆಂದಿ, ಅರಿಶಿನ ಶಾಸ್ತ್ರದ ಫೋಟೋಗಳು ಇಲ್ಲಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts