More

    ‘ನಿಮ್ಮದು ಡಬಲ್ ಆಕ್ಟಿಂಗಾ? ಮೈಸೂರು ಜನರನ್ನು ಮಂಗ ಮಾಡಲು ಹೊರಟ್ಟಿದ್ದ ಪ್ರಚಾರಪ್ರಿಯೆ ನೀವು’

    ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಮತ್ತೊಮ್ಮೆ ಗುಡುಗಿದ್ದಾರೆ. ಭೂ ಹಗರಣದಿಂದಾಗಿ ವರ್ಗಾವಣೆ ಮಾಡಿದರು ಎಂಬ ನಿಮ್ಮ ಹೇಳಿಕೆ ಕಟ್ಟು ಕತೆ. ನೀವು ಯಾವುದೇ ಭೂಮಿ ಉಳಿಸುವ ಕೆಲಸ ಮಾಡಿಲ್ಲ ಎಂದು ಸಿಂಧೂರಿಗೆ ತಿರುಗೇಟು ನೀಡಿದ್ದಾರೆ. ​

    ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತ ಸಮುದಾಯದ ಶರತ್ ಅವರನ್ನು 28 ದಿನಗಳಲ್ಲಿ ವರ್ಗಾವಣೆ ಮಾಡಿಸಿದರು. ವಾಲ್ಮೀಕಿ ಜಯಂತಿಯಂದು ನಾಗರಹೊಳೆಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ದಸರಾ ಸಂದರ್ಭದಲ್ಲೂ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದರು. ಕೋವಿಡ್ ಸಾವಿನ ಸಂಬಂಧ ತಪ್ಪು ಲೆಕ್ಕ ನೀಡಿದ್ದರು. ಸಾ.ರಾ.ಚೌಲ್ಟ್ರಿಯನ್ನು ರಾಜಕಾಲುವೆ ಹಾಗೂ ಗೋಮಾಳದಲ್ಲಿ ನಿರ್ಮಾಣ ಮಾಡಲಾಗಿದೆ ಮತ್ತು ಸರ್ಕಾರಿ ಆದೇಶ ಉಲ್ಲಂಘನೆ ಆಗಿದೆ ಎಂದು ಆರೋಪ ಮಾಡಿದ್ದರು. ಆದರೆ, ಉಲ್ಲಂಘನೆ ಆಗಿಲ್ಲ ಅಂತ ಜಿಲ್ಲಾಧಿಕಾರಿಗಳಿಂದೇ ವರದಿ ಬಂದಿದೆ. ಲಿಂಗಾಂಬುದಿ ಕೆರೆಯ ಜಾಗ ಒತ್ತುವರಿ ಆಗಿಲ್ಲ. ಆರ್‌.ಟಿ.ನಗರದಲ್ಲಿ ಒಬ್ಬರಿಗೆ ಹೆಚ್ಚುವರಿಯಾಗಿ ಪರಿಹಾರ ಕೊಟ್ಟಿದ್ದರು. ಇದನ್ನು ನೀವು ಬರುವುದಕ್ಕೂ ಹಿಂದೆಯೇ ಮುಡಾ ಅಧ್ಯಕ್ಷರು ಪತ್ತೆ ಮಾಡಿದ್ದರು. ಸರ್ವೇ ನಂ.4 ವಿಚಾರದಲ್ಲಿ ನೀವು ಸುಪ್ರೀಂಕೋರ್ಟ್‌ನಲ್ಲಿ ಖಾಸಗಿ ಲಾಯರ್ ಇಟ್ಟಿದ್ದಿರಿ. ಅದಕ್ಕಾಗಿ ಮುಡಾದಿಂದ 24 ಲಕ್ಷ ರೂ.ಗಳನ್ನು ನಿಯಮ ಮೀರಿ ಕೊಟ್ಟಿದ್ದಿರಿ. ನಿಮ್ಮ ಕೇಸ್ ಕೋರ್ಟ್‌ನಲ್ಲಿ ವಜಾ ಆಗಿದೆ ಎಂದು ಸಿಂಧೂರಿ ವಿರುದ್ಧ ಸಾರಾ ಮಹೇಶ್ ಸಾಲು ಸಾಲು ಆರೋಪ ಮಾಡಿದರು.

    ಆಸ್ತಿ ವ್ಯಾಜ್ಯ ಸಂಬಂಧ ಸುಪ್ರೀಂಕೋರ್ಟ್‌ವರೆಗೂ ಹೋದವರು ಮೂರನೇ ದಿನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜಗತ್ತಿನ ಎಲ್ಲಿಯಾದರೂ ಹೀಗೆ ನಡೆಯುತ್ತಾ? ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ- ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಫೋಟೋ ತೋರಿಸಿ ವಾಗ್ದಾಳಿ ನಡೆಸಿದರು. ಸರ್ವೇ ನಂ.4 ವ್ಯಾಜ್ಯದಲ್ಲಿ ಡಿಸಿ ವಾದಿ ಮತ್ತು ರಾಜವಂಶದವರು ಪ್ರತಿವಾದಿ. ಆ ಕೇಸ್ ಸುಪ್ರೀಂಕೋರ್ಟ್‌ನಲ್ಲಿ ದಾಖಲಾಗಲಿಲ್ಲ. ಕೇಸ್ ವಜಾಗೊಂಡ ಮೂರನೇ ದಿನದಲ್ಲಿ ವಾದಿ, ಪ್ರತಿವಾದಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ಫೋಟೋ ತೆಗೆಸಿಕೊಳ್ಳುವ ನಿಮಗೆ ರಾಜವಂಶದವರ ಇತಿಹಾಸ ಗೊತ್ತಿರಲಿಲ್ಲವೇ? ಒಂದು ಕೋಟಿ ರೂ.ಗಳ ದುರ್ಬಳಕೆ ಮಾಡಿಕೊಂಡಿರುವ ಕಾರಣಕ್ಕಾಗಿ ನಿಮ್ಮ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

    ವರ್ಗಾವಣೆ ಮಾಡಿದಾಗ ನೀವು ಮಾಡಿದ ಆರೋಪಗಳೆಲ್ಲಾ ಸುಳ್ಳು. ಇದನ್ನು ನಿಮ್ಮ ಇಲಾಖೆಯ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ. ನಾವು ಮಾಡಿದ ಆರೋಪಗಳು ಸತ್ಯ ಎಂದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ತಕ್ಷಣ ಇವರನ್ನು ಅಮಾನತು ಮಾಡಬೇಕು‌. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ವರದಿ ಬಂದ ನಂತರ ಇವರನ್ನು ಅಮಾನತು ಮಾಡಬೇಕು. ಹಕ್ಕು ಚ್ಯುತಿ ಮಂಡನೆಗೂ ಮನವಿ ಮಾಡಿದ್ದೇನೆ. ನಿಮ್ಮ ವರ್ಗಾವಣೆ ಆಗಿದ್ದು, ಯಾವುದೇ ಭೂ ಮಾಫಿಯಾದಿಂದ ಅಲ್ಲ. ನಿಮ್ಮ ಮೂಲಕ ಮೈಸೂರಿನ ಜನತೆಗೆ ಹಚ್ಚಿದ್ದ ಕಳಂಕ ಒಂದೊಂದಾಗಿ ಬಯಲಿಗೆ ಬರ್ತಿದೆ ಎಂದರು.

    ರಾಜಮನೆತನ ಮತ್ತು ಅವರ ಕೊಡುಗೆ ಬಗ್ಗೆ ಈ ರೋಹಿಣಿ ಪುಸ್ತಕ ಓದಿಕೊಂಡಿರಬೇಕು. ರಾಜಮನೆತನ ಏನು? ಮೈಸೂರು ಜನ ಏನು ಎಂದು ಅವರಿಗೆ ಈಗ ಗೊತ್ತಾದಂತಿದೆ. ರಾಜ ಮನೆತನದವರ ವಿರುದ್ಧ ದಾಖಲಾಗದ ಕೇಸನ್ನು ಹಾಕಿದ್ದಾರೆ. ಇದಕ್ಕೆ 24 ಲಕ್ಷ ರೂ. ಹಣವನ್ನು ವ್ಯರ್ಥ ಮಾಡಿದರು. ಇದು ಮುಡಾ ಪ್ರಾಧಿಕಾರದ ಸಿಬ್ಬಂದಿ ನಿವೃತ್ತರಾದ ನಂತರ ಅವರಿಗೆ ಕೊಡುವ ಪೆನ್ಷನ್ ಹಣವಾಗಿದೆ. ಪೆನ್ಷನ್ ಹಣವನ್ನು ವ್ಯರ್ಥ ಮಾಡಿದ್ದಾರೆ. ಅದರಲ್ಲೂ ಮುಡಾದಲ್ಲಿ ಯಾರ ಅನುಮತಿ ಪಡೆಯದೆ ಹಣ ಬಳಸಿದ್ದಾರೆ ಎಂದು ಆರೋಪಿಸಿದರು.

    ನೀವೀಗ ಸಿಂಗ ಅಲ್ಲ, ಮೈಸೂರು ಜನರನ್ನು ಮಂಗಂ ಮಾಡಲು ಹೊರಟ್ಟಿದ್ದ ಪ್ರಚಾರಪ್ರಿಯೆ ನೀವು ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಕುಹಕವಾಡಿದರು. ವರ್ಗಾವಣೆ ಸಂದರ್ಭದಲ್ಲಿ ಭೂ ಅಕ್ರಮಗಳ ಬಗ್ಗೆ ಮಾತನಾಡಿದ್ದರು. ಅವರು ಮಾಡಿದ ಎಲ್ಲ ಆರೋಪಗಳೂ ಸುಳ್ಳಾಗಿವೆ. ನಿಮ್ಮ ನಿಲುವು ಏನು ಅಂತಲೇ ಗೊತ್ತಾಗುತ್ತಿಲ್ಲ. ನಿಮ್ಮದು ಡಬಲ್ ಆಕ್ಟಿಂಗಾ? ನಿಮ್ಮ ನಡೆ ಬಗ್ಗೆ ನನಗೆ ಅನುಮಾನ ಮೂಡುತ್ತಿದೆ ಎಂದು ಸಾ.ರಾ.ಮಹೇಶ್​​ ಹೇಳಿದರು. (ದಿಗ್ವಿಜಯ ನ್ಯೂಸ್​)

    ದಿವ್ಯಾ ಉರುಡುಗ-ಅರವಿಂದ್​ ಕೆಪಿ ಸಂಬಂಧದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಬಿಗ್​ಬಾಸ್ ಶೋ ನಿರ್ದೇಶಕ..!​

    ನನ್ನ ಸಾವಿನ ಸುದ್ದಿ ಹರಿಬಿಟ್ಟ ವ್ಯಕ್ತಿಗೆ ಥ್ಯಾಂಕ್ಸ್​! ಆ ರೀತಿ ಏನೂ ನಡೆದಿಲ್ಲ ಅಂದ್ರೂ ಶಕೀಲಾ!

    ಪಾಕ್​ನಲ್ಲಿ ಐವರು ಕಾಮುಕರಿಂದ ಮೇಕೆ ಮೇಲೆ ಗ್ಯಾಂಗ್​ರೇಪ್​: ಸಿಕ್ಕಾಪಟ್ಟೆ ಟ್ರೋಲ್​ ಆದ ಪ್ರಧಾನಿ ಇಮ್ರಾನ್​ ಖಾನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts