More

    ಯಕ್ಷಗಾನ ಪ್ರಿಯರಿಗೆ ಸಿಹಿಸುದ್ದಿ: ತೆಂಕು-ಬಡಗಿನ ಸಮ್ಮಿಳನ ‘ಪಾಂಚಜನ್ಯ-ದಕ್ಷಾದ್ವರ’

    ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಕಳೆದ 8-9 ತಿಂಗಳುಗಳಿಂದ ಎಲ್ಲಾ ಕಾರ್ಯಕ್ರಮಗಳೂ ಸ್ಥಗಿತಗೊಂಡಿವೆ. ಇದರಿಂದಾಗಿ ನೃತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ಬಹುತೇಕ ಎಲ್ಲಾ ಕಾರ್ಯಕ್ರಮಗಳನ್ನೂ ಯೂಟ್ಯೂಬ್​ ಇಲ್ಲವೇ ಫೇಸ್​ಬುಕ್​ ಲೈವ್​ ಪುಟದಲ್ಲಿ ಕಲಾಪ್ರೇಮಿಗಳು ಸವಿಯಬೇಕಿತ್ತು.

    ಅಂಥವರಿಗೆಲ್ಲಾ ಈಗ ಸಿಹಿಸುದ್ದಿ ಬಂದಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಟೀಂ ಉತ್ಸಾಹಿ ತಂಡದಿಂದ ಪಾಂಚಜನ್ಯ ಮತ್ತು ದಕ್ಷಾದ್ವರ ಯಕ್ಷಗಾನವು ನಡೆಯಲಿದೆ. ತೆಂಕು ಮತ್ತು ಬಡಗಿನ ಯಕ್ಷದಿಗ್ಗಜರ ಸಮ್ಮಿಲನ ಇದಾಗಿದೆ.

    ಇದೇ ಭಾನುವಾರ ಅಂದರೆ ಡಿ.20ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9ರವರೆಗೆ ಈ ಯಕ್ಷಗಾನಗಳು ಜರುಗಲಿವೆ.

    ಯಕ್ಷಗಾನ ಪ್ರಿಯರಿಗೆ ಸಿಹಿಸುದ್ದಿ: ತೆಂಕು-ಬಡಗಿನ ಸಮ್ಮಿಳನ 'ಪಾಂಚಜನ್ಯ-ದಕ್ಷಾದ್ವರ'ನಟಿ, ಯಕ್ಷಗಾನ ಕಲಾವಿದೆ ನಾಗಶ್ರೀ ಜಿ.ಎಸ್ ಹಾಗೂ ಪಲ್ಲವ ಗಾಣಿಕ ಹೇರಂಜಾಲು ಇವರ ಸಂಚಾಲಕತ್ವದಲ್ಲಿ ಟೀಂ ಉತ್ಸಾಹಿ ತಂಡದಿಂದ ಈ ಕಾರ್ಯಕ್ರಮ ನಡೆಯಲಿದೆ.

    ಕೋವಿಡ್​ ಹಿನ್ನೆಲೆಯಲ್ಲಿ ಇದಾಗಲೇ 9 ಪ್ರದರ್ಶನಗಳನ್ನು ಫೇಸ್​ಬುಕ್​ ಲೈವ್​ ಹಾಗೂ ಯೂಟ್ಯೂಬ್​ಗಳಲ್ಲಿ ನೀಡಲಾಗಿದ್ದು, ಇದೀಗ ನೇರವಾಗಿ ಯಕ್ಷಗಾನ ಪ್ರದರ್ಶನ ಮಾಡುತ್ತಿರುವುದು ಹೊಸದೊಂದು ಅನುಭವವನ್ನೇ ನೀಡುತ್ತಿದೆ ಎಂದಿದೆ ಟೀಂ ಉತ್ಸಾಹಿ ತಂಡ.

    ಕಾರ್ಯಕ್ರಮವನ್ನು ನೇರವಾಗಿಯೇ ಸವಿಯಬಯಸಿರುವ ಅನೇಕ ಯಕ್ಷಗಾನ ಪ್ರಿಯರಿಗೆ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ, ಕರೊನಾದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತದೆ. ಇಡೀ ಹಾಲ್​ ಅನ್ನು ಸ್ಯಾನಿಟೈಸರ್​ ಮಾಡಿದ ಬಳಿಕವೇ ಕಾರ್ಯಕ್ರಮ ನಡೆಯಲಿದೆ ಎಂದು ತಂಡದವರು ಮಾಹಿತಿ ನೀಡಿದ್ದಾರೆ.

    ಯಕ್ಷಗಾನ ಪ್ರಿಯರಿಗೆ ಸಿಹಿಸುದ್ದಿ: ತೆಂಕು-ಬಡಗಿನ ಸಮ್ಮಿಳನ 'ಪಾಂಚಜನ್ಯ-ದಕ್ಷಾದ್ವರ'

    ಈ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಪ್ರದೇಶ ಹೋಟೆಲ್​ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಚಂದ್ರಶೇಖರ್​ ಹೆಬ್ಬಾರ್​, ಹಳ್ಳಿಮನೆಯ ನೀಲಾವರ ಸಂಜೀವ ರಾವ್​, ಬಿಬಿಎಂಪಿ ಹೆಚ್ಚುವರಿ ಆಯುಕ್ತ ನಾಗರಾಜ್​ ಶೇರೆಗಾರ್​, ಬಿಬಿಎಂಪಿ ಸದಸ್ಯ ಜೆ.ಉಮೇಶ್​ ಶೆಟ್ಟಿ, ಕನ್ನಡ ಭವನದ ಜಂಟಿ ನಿರ್ದೇಶಕ ಅಶೋಕ ಛಲವಾದಿ, ಉದ್ಯಮಿ ಕೃಷ್ಣಮೂರ್ತಿ ಮಂಜರು, ಚಲನಚಿತ್ರ ಹಾಸ್ಯನಟ ಟೆನ್ನಿಸ್​ ಕೃಷ್ಣ ಹಾಗೂ ಯುವ ಚಲನಚಿತ್ರ ನಿರ್ದೇಶಕ ಗುರುದತ್​ ಗಾಣಿಗ ಸೇರಿದಂತೆ ವಿವಿಧ ಕ್ಷೇತ್ರದ ಮುಖಂಡರಾದ ಜಿ.ಕೆ.ಸೋಮಯಾಜಿ, ಸುಧಾಕರ ಪೈ, ನಾಗರಾಜ್​ ನಾಯಕ್​, ರಾಘವೇಂದ್ರ ಹತ್ವಾರ್​, ಸುರೇಶ್​ ಹೆಗಡೆ ಕಡತೋಕ, ಪ್ರವೀಣ್​ ಗಡಿಯಾರ್​ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್​ ಆಚಾರ್ಯ ಅವರನ್ನು ಸನ್ಮಾನಿಸಲಾಗುತ್ತದೆ.

    ಬಡಗು ಮೇಳದಲ್ಲಿ: ಭಾಗವತರು: ಗಣೇಶ್​ ಕುಮಾರ್​ ಹೆಬ್ರಿ, ಹೇರಂಜಾಲು ಪಲ್ಲವ ಗಾಣಿಗ. ಮದ್ದಳೆ: ಶಶಾಂಕ್​ ಆಚಾರ್ಯ, ಚಂಡೆ: ರಾಕೇಶ್​ ಮಲ್ಯ ಹಳ್ಳಾಡಿ. ಗೋಪಾಲ ಆಚಾರ್ಯ, ನಾಗೇಂದ್ರ ರಾವ್​, ಪ್ರಶಾಂತ್​ ವರ್ಧನ, ಮಂಜು ಹವ್ಯಕ, ದ್ವತೇಶ್​ ಕಾಮತ್​, ನಾಗಶ್ರೀ ಜಿ.ಎಸ್​.ನಿಹಾರಿಕ ಭಟ್​, ಮಾನಸ ಉಪಾಧ್ಯ ಮುಂತಾದವರು.

    ತೆಂಕು ಮೇಳದಲ್ಲಿ: ಭಾಗವತರು: ರವಿಚಂದ್ರ ಕನ್ನಡಿಕಟ್ಟೆ; ಮದ್ದಳೆ: ಕೃಷ್ಣಪ್ರಕಾಶ್​ ಉಳಿತ್ತಾಯ, ಚಂಡೆ: ಚೈತನ್ಯಕೃಷ್ಣ ಪದ್ಯಾಣ; ಚಕದ್ರತಾಳ: ಶಿಬಿನ್​ ಶರ್ಮ, ಜಯಪ್ರಕಾಶ್​ ಶೆಟ್ಟಿ, ಸೀತಾರಾಮ ಕುಮಾರ್​ ಶಿವಕುಮಾರ್​ ಬೇಗಾರ್​, ಗೋಪಾಲಕೃಷ್ಣ ಭಟ್​, ದಿಶಾ ಶೆಟ್ಟಿ ಮುಂತಾದವರು.

    ಪಾಕ್​ನಲ್ಲಿ ಸಿಲುಕಿ ಭಾರತಕ್ಕೆ ಬಂದು ಪಾಲಕರಿಗಾಗಿ ಹುಡುಕುತ್ತಿರುವ ಮೂಕಿಯೊಬ್ಬಳ ಮನಕಲಕುವ ಕಥೆಯಿದು…

    ಚಂದಿರನ ಅಂಗಳವನ್ನು ತೋಡಿ ಕಲ್ಲು-ಮಣ್ಣು ಹೊತ್ತು ತಂದ ‘ಚಾಂಗ್​ ಲಿ’

    VIDEO: ನಿರ್ಮಾಣಹಂತದಲ್ಲಿ ಕಟ್ಟಡದ ಕಂಬ ಯುವಕನ ಮೇಲೆ ಬಿದ್ದ ಭಯಾನಕ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts