More

    ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿ ಜಗತ್ತು ಸುತ್ತಿದ ಕಿರಿಯ ಮಹಿಳಾ ಪೈಲಟ್‌- ದಾಖಲೆ ಬರೆದ ಯುವತಿ

    ಬ್ರುಸೆಲ್ಸ್: ಬ್ರಿಟಿಷ್-ಬೆಲ್ಜಿಯಂ ಮೂಲದ ಝಾರಾ ಎಂಬ ಯುವತಿ ವಿಶ್ವಾದ್ಯಂತ ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿದ್ದು, ಈ ಮೂಲಕ ಜಗತ್ತಿನ ಅತ್ಯಂತ ಕಿರಿಯ ಪೈಲಟ್‌ ಎನಿಸಿದ್ದಾಳೆ.

    ಇದಕ್ಕೂ ಮುನ್ನ ಅಂದರೆ 2017ರಲ್ಲಿ ಅಫ್ಘಾನ್ ಮೂಲದ ಅಮೆರಿಕ ಪ್ರಜೆ ಶಾಸ್ತಾ ವೈಸ್ ತಮ್ಮ 30ನೇ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಏಕಾಂಗಿಯಾಗಿ ವಿಮಾನದಲ್ಲಿ ಹಾರಾಟ ಮಾಡಿ ದಾಖಲೆ ಬರೆದಿದ್ದರು. ಈ ದಾಖಲೆ ಹಿಂದಿಕ್ಕಿದ 19 ವರ್ಷದ ಝಾರಾ ರುದರ್‌ಫೋರ್ಡ್ ಇಂಥದ್ದೊಂದು ಕೀರ್ತಿಗೆ ಪಾತ್ರಳಾಗಿದ್ದಾಳೆ. ಮೈಕ್ರೋಲೈಟ್ ವಿಮಾನದಲ್ಲಿ ಏಕಾಂಗಿಯಾಗಿ ಈಕೆ ಹಾರಾಟ ನಡೆಸಿದ್ದು, ಪ್ರಪಂಚದಾದ್ಯಂತ 5 ಖಂಡಗಳನ್ನು ಒಂಟಿಯಾಗಿ ಸುತ್ತುಹಾಕಿದ್ದಾಳೆ. ಈ ಮೂಲಕ ಏಕಾಂಗಿಯಾಗಿ ಜಗತ್ತನ್ನು ವಿಮಾನ ಓಡಿಸುತ್ತಾ ಸುತ್ತಿದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ.

    2021ರ ಆಗಸ್ಟ್ 18ರಂದು ಮೈಕೊಲೈಟ್ ವಿಮಾನದಲ್ಲಿ ಈಕೆಯ ಪ್ರಯಾಣ ಆರಂಭವಾಗಿತ್ತು. ಒಟ್ಟು 51 ಸಾವಿರ ಕಿ.ಮೀ. ವರೆಗೆ ವಿಮಾನದಲ್ಲಿ ಹಾರಾಟ ನಡೆಸಿ, ಗುರುವಾರ ಬೆಲ್ಜಿ

    ಯಂನ ಕೋರ್ಟಿಜ್ಕ್-ವೆವೆಲ್ಗೆಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾಳೆ.

    ಅತ್ಯಂತ ಕಿರಿಯ ಪುರುಷರ ದಾಖಲೆ ಅಮೆರಿಕ ಮೂಲ ಮೇಸನ್ ಆಂಡ್ರ್ಯೂಸ್ ಅವರ ಹೆಸರಿನಲ್ಲಿದೆ. ಇವರು 2018ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ದಾಖಲೆ ಬರೆದಿದ್ದರು.

    ಮದುವೆಗೆ ಹೋದವರು ಮಸಣ ಸೇರಿದರು: ಭೀಕರ ಅಪಘಾತದಲ್ಲಿ ಐವರ ಸಾವು, ಹಲವರ ಸ್ಥಿತಿ ಚಿಂತಾಜನಕ

    ವಿಮಾನಕ್ಕೆ ಹೊರಟಿರುವಿರಾ? ಒಂದಕ್ಕಿಂತ ಹೆಚ್ಚಿಗೆ ಹ್ಯಾಂಡ್‌ ಬ್ಯಾಗ್‌ ಒಯ್ಯುವಂತಿಲ್ಲ- ಇಲ್ಲಿದೆ ನೋಡಿ ಹೊಸ ರೂಲ್ಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts