More

    ವಿಶ್ವದ ಹಿರಿಯ ನಾಯಿ ಇನ್ನಿಲ್ಲ: 22 ವರ್ಷ ಪೂರ್ಣಗೊಳಿಸಿ ಗಿನ್ನೆಸ್​ ದಾಖಲೆ ಬರೆದ ಪೆಬ್ಲೆಸ್​ನ ಕಥೆ ಇಲ್ಲಿದೆ…

    ವಾಷಿಂಗ್ಟನ್‌: ವಿಶ್ವದ ಅತ್ಯಂತ ಹಿರಿಯ ಶ್ವಾನ ಎಂದೇ ಹೆಸರಾಗಿ ಗಿನ್ನೆಸ್‌ ರೆಕಾರ್ಡ್‌ ಬರೆದಿದ್ದ ಪೆಬ್ಲೆಸ್‌ ದಕ್ಷಿಣ ಕೆರೊಲಿನಾ ಟೇಲರ್ಸ್‌ನಲ್ಲಿ ಮೃತಪಟ್ಟಿದೆ. ಇದಕ್ಕೆ 22 ವರ್ಷ ವಯಸ್ಸಾಗಿತ್ತು. ಕೆಲವೇ ತಿಂಗಳಿನಲ್ಲಿ ಇದರ 23ನೇ ಹುಟ್ಟುಹಬ್ಬವಿತ್ತು.

    ಅಮೆರಿಕದ ಸೌತ್ ಕರೋಲಿನಾದ ವಿಶ್ವದ ಅತ್ಯಂತ ಹಿರಿಯ ನಾಯಿ ಇದು ಎನ್ನಿಸಿಕೊಂಡಿದೆ. ಫಾಕ್ಸ್ ಟೆರಿಯರ್ ತಳಿಯ ಈ ಶ್ವಾನ ಅಮೆರಿಕದ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿ 2000ರ ಮಾರ್ಚ್​ 28ರಂದು ಜನಿಸಿತ್ತು. ಬಾಬಿ ಮತ್ತು ಜೂಲಿ ಗ್ರೆಗೊರಿ ದಂಪತಿ ಇದನ್ನು ಸಾಕಿದ್ದರು.

    ಜೀವಂತವಾಗಿರುವ ಅತ್ಯಂತ ಹಿರಿಯ ನಾಯಿ ಎನ್ನಿಸಿಕೊಂಡಿದ್ದ ಟೋಬಿಕೀತ್ ಎಂಬ 21 ವರ್ಷದ ನಾಯಿ ದಾಖಲೆಯನ್ನು ಈ ಸೌತ್ ಕೆರೊಲಿನಾದ ಪೆಬ್ಲೆಸ್‌ ಮುರಿದು ಗಿನ್ನೆಸ್​ ಪುಟ ಸೇರಿದೆ. ದಂಪತಿ ಪ್ರಕಾರ, ಈ ಶ್ವಾನವು ಸಂತೋಷದಾಯಕ ಮತ್ತು ದೀರ್ಘ ಜೀವನವನ್ನು ನಡೆಸಿದೆ.

    ಇಷ್ಟು ವರ್ಷಗಳ ಅದರ ಜತೆ ಸಂತೋಷದಿಂದ ಕಾಲ ಕಳೆದಿದ್ದೇವೆ. ಪೆಬ್ಲೆಸ್​ ನಮ್ಮ ಮನೆಯ ಯುವರಾಣಿಯಾಗಿದ್ದಳು. 2017ರಲ್ಲಿ 16 ವಯಸ್ಸಿನಲ್ಲಿ 32 ನಾಯಿಮರಿಗಳಿಗೆ ಜನ್ಮ ನೀಡಿದ್ದಳು. ಪೆಬ್ಲೆಸ್‌ ತನ್ನ ಸಂಗಾತಿ ರಾಕಿಯೊಂದಿಗೆ ಜೀವನ ನಡೆಸಿತ್ತು ಎಂದು ಶ್ವಾನದ ಮಾಲೀಕಾರದ ಜೂಲಿ ಗ್ರೆಗೊರಿಯವರ ಹೇಳಿದ್ದಾರೆ. (ಏಜೆನ್ಸೀಸ್​)

    ನಿಷೇಧದ ಕ್ರಮವನ್ನು ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲು ಪಿಎಫ್​ಐಗೆ ಅನುಮತಿ: ಅಧ್ಯಕ್ಷರ ನೇಮಿಸಿದ ಕೇಂದ್ರ

    ಕ್ರಿಕೆಟ್ ತಂಡದ ಮಾಜಿ ನಾಯಕನ ವಿರುದ್ಧ ರೇಪ್​ ಕೇಸ್​: ಫೇಸ್​ಬುಕ್​ನಲ್ಲಿ ಮಾಹಿತಿ ನೀಡಿ ಸಿಕ್ಕಿಬಿದ್ದ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts