More

    ಅಯ್ಯೋ… ಇದು ವಿಕ್ರಮ- ಬೇತಾಳ ಅಲ್ರಪ್ಪ… ಹಾಗಿದ್ರೆ ಇದೇನು ಅಂತೀರಾ? ಇಲ್ಲಿದೆ ನೋಡಿ ವಿವರ…

    ಕಠ್ಮಂಡು: ಹೆಣ್ಣು ಸಂಸಾರದ ಕಣ್ಣು, ಹೆಣ್ಣೆಂದರೆ ಹಾಗೆ… ಹೆಣ್ಣೆಂದರೆ ಹೀಗೆ ಎಂದು ಹಾಡಿ ಹೊಗಳುವ ಮಾತುಗಳು, ಆಕೆಯನ್ನು ಕರೆದು ಸನ್ಮಾನ ಮಾಡುವುದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಸಾಮಾನ್ಯವಾಗಿದೆ. ಸಂಸಾರದ ನೊಗವನ್ನೂ ಹೊತ್ತ ಗೃಹಿಣಿಯಾಗಿ ಮಾತ್ರವಲ್ಲದೇ, ಉದ್ಯೋಗ, ಉದ್ಯಮಗಳಲ್ಲಿ ಉನ್ನತ ಸ್ಥಾನ ಏರಿರುವ ಮಹಿಳೆಯರಿಗೇನೂ ಕಮ್ಮಿ ಇಲ್ಲವಾದರೂ ಮಹಿಳಾ ದಿನದಂದು ಮಾತ್ರ ಆಕೆಯ ಗುಣಗಾನ ಇನ್ನಿಲ್ಲದಂತೆ ನಡೆಯುತ್ತದೆ.

    ಇದೇ ದಿನ ಅಂಗವಾಗಿ ವೇಳೆ ಕೆಲವು ಕಡೆಗಳಲ್ಲಿ ಮಹಿಳೆಯರಿಗಾಗಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಉಂಟು. ಅಂಥದ್ದೇ ಒಂದು ವಿಶೇಷ ಕಾರ್ಯಕ್ರಮವನ್ನು ನೇಪಾಳದ ದೇವಘಾಟ್​ ಗ್ರಾಮಸಭೆಯಲ್ಲಿ ಆಚರಿಸಲಾಗಿತ್ತು. ಮಹಿಳೆಯರು ತಮ್ಮ ಪತಿಯಂದಿರನ್ನು ಹೆಗಲ ಮೇಲೆ ಹೊತ್ತು ರೇಸ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಾ ಕಾರ್ಯಕ್ರಮ ಇದಾಗಿತ್ತು.

    ಈ ಸ್ಪರ್ಧೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿದೆ. ಈ ಕಾರ್ಯಕ್ರಮ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಸಂಸಾರದ ನೊಗವನ್ನಷ್ಟೇ ಅಲ್ಲದೇ, ಪತ್ನಿ ಗಂಡನನ್ನೂ ಹೆಗಲ ಮೇಲೆ ಹೊತ್ತುಕೊಂಡು ಸಾಗಬಲ್ಲರು ಎಂದು ಈ ಸ್ಪರ್ಧೆಯಲ್ಲಿ ತೋರಿಸಿಕೊಟ್ಟಿತು.

    ವಿವಿಧ ವಯಸ್ಸಿನ 16 ಮಹಿಳೆಯರು ಈ ಓಟದಲ್ಲಿ ಭಾಗಿಯಾಗಿದ್ದರು. ತಮ್ಮ ಪತಿಯನ್ನು ಹೆಗಲ ಮೇಲೆ ಹೊತ್ತು 100 ಮೀಟರ್‌ ಓಡಿದರು. ಫಸ್ಟ್​, ಸೆಕೆಂಡ್​ ಎಂಬ ಬಹುಮಾನ ನೀಡುವ ಬದಲು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡುವ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡಲಾಯಿತು.

    ಮಹಿಳೆಯರು ಕೇವಲ ಮನೆಗೆಲಸಕ್ಕೆ ಸೀಮಿತವಾಗಿಲ್ಲ, ಬದಲಿಗೆ ಅವರು ಪುರುಷರಿಗಿಂತ ಯಾವುದೇ ವಿಧದಲ್ಲೂ ಸಹ ಕಡಿಮೆ ಇಲ್ಲ ಎಂಬ ಸಂದೇಶ ರವಾನೆ ಮಾಡಲು ಈ ಓಟ ಆಯೋಜಿಸಿದ್ದೇವೆ ಎಂದು ಗ್ರಾಮ ಸಭೆಯ ಮುಖ್ಯಸ್ಥ ದುರ್ಗಾ ಬಹದ್ದೂರ್‌ ಥಾಪಾ ತಿಳಿಸಿದರು.

    ಆದರೆ ಇದನ್ನು ನೋಡಿದ ಹಲವು ಮಂದಿ ವಿಕ್ರಮ, ಬೇತಾಳದಂತೆ ಕಾಣಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ. ಅದರಲ್ಲಿಯೂ ಮಹಿಳೆಯರು ಇದು ನಿಜ, ನಿಜ… ಹಲವು ಮನೆಗಳಲ್ಲಿ ಪತಿಯಂದಿರು ಬೇತಾಳದಂತೆ ಕಾಣಿಸುತ್ತಾರೆ ಎಂದು ಸೇರಿಸಿದ್ದಾರೆ.

    ಬ್ಯಾಂಕ್​ನಲ್ಲಿ ಕೆಲಸ ಇದೆಯೆ? ಇಂದೇ ಮುಗಿಸಿ… ಇಲ್ಲದಿದ್ದರೆ ನಾಲ್ಕು ದಿನ ಪರದಾಡಬೇಕಾಗುತ್ತೆ!

    ಇದೆಂಥ ಹೊಸ ಅವತಾರನಪ್ಪ! ಬಲೂನು ಬಿಟ್ಟು ಭಾರತವನ್ನು ಹೆದರಿಸಲು ನೋಡ್ತಿದೆಯೇ ಪಾಕ್​?

    ಕ್ರೀಡಾ ಪ್ರಾಧಿಕಾರದಲ್ಲಿ ಕನ್ಸಲ್ಟಂಟ್ ಹುದ್ದೆ- ₹1 ಲಕ್ಷದವರೆಗೆ ವೇತನ- 55 ವರ್ಷದವರೆಗೂ ಆದ್ಯತೆ

    v

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts