More

    ನನ್ನ ಪತಿಯ ಶಿರಚ್ಛೇದ ಮಾಡಿದವರಿಗೆ ಗಲ್ಲು ವಿಧಿಸಿ: ಅಂತ್ಯಕ್ರಿಯೆಯಲ್ಲಿ ಬಿಕ್ಕಿಬಿಕ್ಕಿ ಅತ್ತ ಕನ್ಹಯ್ಯಾ ಪತ್ನಿ

    ಉದಯಪುರ (ರಾಜಸ್ಥಾನ): ನನ್ನ ಪತಿಯನ್ನು ಕ್ರೂರವಾಗಿ ಕೊಂದವರನ್ನು ಸುಮ್ಮನೇ ಬಿಡಬೇಡಿ. ಅವರನ್ನು ಗಲ್ಲಿಗೇರಿಸಿ ಎಂದು ಟೈಲರ್​ ಕನ್ಹಯ್ಯಲಾಲ್​​ ಅವರ ಪತ್ನಿ ಜಶೋದಾ ಕಣ್ಣೀರಿಟ್ಟಿದ್ದಾರೆ.

    ಬಿಜೆಪಿ ನಾಯಕಿ ನೂಪುರ್​ ಶರ್ಮಾ ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಕಾರಣಕ್ಕೆ, ರಾಜಸ್ಥಾನದ ಉದಯಪುರದ ಟೈಲರ್​ ಕನ್ಹಯ್ಯಲಾಲ್​ ಅವರ ಶಿರಚ್ಛೇದ ಮಾಡಿ ಅದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಇಬ್ಬರು ಕ್ರೂರಿಗಳನ್ನು ಇದಾಗಲೇ ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಕನ್ಹಯ್ಯಾ ಅವರ ಪತ್ನಿ ಕೋರಿಕೊಂಡಿದ್ದಾರೆ.

    ಕನ್ಹಯ್ಯಲಾಲ್‌ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಮಾತನಾಡಿದ ಜಶೋಧಾ ಅವರು, ಹಂತಕರಿಗೆ ಮರಣದಂಡನೆ ವಿಧಿಸಿ, ನಮಗೆ ನ್ಯಾಯ ಒದಗಿಸಿ ಎಂದಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಬಳಿಕ ನನ್ನ ಪತಿಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಆದ್ದರಿಂದ ಅವರು ಕೆಲಸಕ್ಕೆ ಹೋಗಿರಲಿಲ್ಲ. ಆದರೆ ಕೆಲಸ ಮಾಡುವುದು ಅನಿವಾರ್ಯವಾಗಿ ನಿನ್ನೆ ಮಂಗಳವಾರ ಹೋಗಿದ್ದರು. ಅದೇ ದಿನ ಈ ಹತ್ಯೆ ನಡೆದಿದೆ ಎಂದು ಬಿಕ್ಕಿಬಿಕ್ಕಿ ಅತ್ತರು.

    ಆರೋಪಿ ರಿಯಾಜ್‌, ಕನ್ನಯ್ಯಲಾಲ್‌ ಅವರ ಕತ್ತನ್ನು ಕತ್ತರಿಸಿದ್ದು, ಮತ್ತೊಬ್ಬ ಆರೋಪಿ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಈ ಕೊಲೆಯನ್ನು ತಾವೇ ಮಾಡಿದ್ದಾಗಿ ಹೇಳಿರುವ ವಿಡಿಯೊಯೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದು, ಇಬ್ಬರೂ ಈಗ ಅರೆಸ್ಟ್​ ಆಗಿದ್ದಾರೆ.

    ಅಪ್ಪನನ್ನು ಪೊಲೀಸ್ರು ಬಂಧಿಸಿದ್ರು, ಬೆದರಿಕೆ ಕಂಪ್ಲೇಂಟ್​ ಕೊಟ್ರೂ ಕೇರೇ ಮಾಡ್ಲಿಲ್ಲ: ಟೈಲರ್​ ಕನ್ಹಯ್ಯ ಮಕ್ಕಳಿಂದ ಶಾಕಿಂಗ್​ ಹೇಳಿಕೆ

    ಶಿರಚ್ಛೇದನ ಮಾಡಿದವರಿಗೆ ಐಸಿಸ್​ ನಂಟು? ಮೃತ ಟೈಲರ್​ ಕುಟುಂಬಕ್ಕೆ 31 ಲಕ್ಷ ರೂ. ಪರಿಹಾರ- ಇಬ್ಬರಿಗೆ ಉದ್ಯೋಗ

    ಕಲ್ಲಂಗಡಿ ಒಡೆದಾಗ ಗಡಿಪಾರು ಮಾಡು ಎಂದ ಬುದ್ಧಿಜೀವಿಗಳೇ, ರುಂಡ ಕತ್ತರಿಸಿದ್ದಾರೆ… ಬಾಯಿ ಮುಚ್ಚಿಕೊಂಡಿರುವಿರೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts