More

    VIDEO: ಆಯತಪ್ಪಿ ರೈಲಿನಿಂದ ಕೆಳಬಿದ್ದ ರಕ್ಷಣಾ ಇಲಾಖೆಯ ಅಧಿಕಾರಿಯ ಪ್ರಾಣ ಉಳಿಸಿದ ರೈಲ್ವೆ ಪೊಲೀಸ್‌

    ಕಾರವಾರ: ರೈಲಿನಿಂದ ಕೆಳಕ್ಕೆ ಇಳಿಯುವ ವೇಳೆ ಬೀಳುತ್ತಿದ್ದ ಪ್ರಯಾಣಿಕನ ‍ಪೊಲೀಸ್ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕಾರವಾರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಲಗೇಜು ತರಲು ಕೆಳಕ್ಕೆ ಇಳಿಯುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಪ್ರಯಾಣಿಕರೊಬ್ಬರ ರಕ್ಷಣೆ ಮಾಡಲಾಗಿದೆ. ರೈಲ್ವೆ ಪೊಲೀಸ್ ನರೇಶ್ ಎಂಬುವವರು ರಕ್ಷಣೆ ಮಾಡಿದ್ದು, ಅವರ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಗಳೂರು ಮೂಲದ ಕೇಂದ್ರ ರಕ್ಷಣಾ ಇಲಾಖೆಯ ಅಧಿಕಾರಿ ಬಿ.ಎಂ.ದೇಸಾಯಿ ಪ್ರಯಾಣಿಸುತ್ತಿದ್ದರು. ಅವರು ಸೀಟು ಕಾದಿರಿಸಿ ತಮ್ಮ ಲಗೇಜು ತೆಗೆದುಕೊಳ್ಳಲು ಇಳಿಯುತ್ತಿದ್ದಾಗ ಟ್ರೇನ್‌ ಚಲಿಸಿಬಿಟ್ಟಿದೆ. ಈ ಸಂದರ್ಭದಲ್ಲಿ ಅವರು ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ.

    ಕೂಡಲೇ ಅಲ್ಲಿಯೇ ಇದ್ದ ನರೇಶ್‌ ಅವರು, ದೌಡಾಯಿಸಿ ಬಂದು ದೇಸಾಯಿ ಅವರ ರಕ್ಷಣೆ ಮಾಡಿದ್ದಾರೆ. ಹೀಗಾಗಿ ಭಾರಿ ಅನಾಹುತ ಆಗುವುದು ತಪ್ಪಿದ್ದು, ದೇಸಾಯಿ ಅವರಿಗೆ ಯಾವುದೇ ಹಾನಿಯಾಗಲಿಲ್ಲ. ಈ ಘಟನೆ ನಂತರ ತಾವು ರಕ್ಷಿಸಿರುವುದು ರಕ್ಷಣಾ ಇಲಾಖೆಯ ಅಧಿಕಾರಿ ಎಂದು ಪೊಲೀಸ್‌ ಸಿಬ್ಬಂದಿಗೆ ತಿಳಿದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. (ದಿಗ್ವಿಜಯ ನ್ಯೂಸ್‌)

    ಇಲ್ಲಿದೆ ನೋಡಿ ರಕ್ಷಣೆಯ ವಿಡಿಯೋ:

    ‘ಅವ್ನು ಎಲ್ಲೆಲ್ಲೋ ಕಿಸ್‌ ಕೊಟ್ಟಿರೋ ದೃಶ್ಯ ಪ್ರಸಾರ ಮಾಡ್ಬೇಡಿ ಪ್ಲೀಸ್‌’ ಎಂದು ಹಣಕ್ಕಾಗಿ ಎಲ್ಲಾ ಅರ್ಪಿಸಿಕೊಂಡ ನಟಿಯ ಮನವಿ!

    ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನಟ ಯಶ್‌- ಅಭಿಮಾನಿಗಳಿಂದಲೇ ಟ್ರೋಲ್‌, ಕಮೆಂಟ್‌ಗಳ ಮೂಲಕ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts