More

    VIDEO: ಲಸಿಕೆ ಹಾಕಲು ಹೋದಾಗ ಮೈಮೇಲೆ ಬಂದ ದೇವರು! ದೇವ್ರಿಗೆ ಚುಚ್ಚಬೇಡಿ ಎಂದು ಮಹಿಳೆ ರಂಪಾಟ- ಮುಂದೇನಾಯ್ತು ನೋಡಿ…

    ಕೊಪ್ಪಳ: ಕರೊನಾ ಲಸಿಕೆ ಕುರಿತು ಎಷ್ಟೇ ಜಾಗೃತಿ ನೀಡುತ್ತಿದ್ದರೂ, ಕೆಲವರಿಗೆ ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಇರುವವರಿಗೆ ಲಸಿಕೆಯ ಕುರಿತಾಗಿ ಇನ್ನೂ ಭಯ ಹೋಗಿಲ್ಲ. ಆದ್ದರಿಂದ ಕಾರ್ಯಕರ್ತರು ಎಷ್ಟೇ ಹರಸಾಹಸ ಪಟ್ಟರೂ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವ ಜತೆಗೆ, ರಂಪಾಟ ಮಾಡುತ್ತಿದ್ದಾರೆ.

    ಅಂಥದ್ದೇ ಒಂದು ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದಲ್ಲಿ ನಡೆದಿದೆ. ಯಂಕಮ್ಮ ಎಂಬ ಮಹಿಳೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾಳೆ.

    ಕೊಪ್ಪಳ ಡಿಸಿ, ಜಿಪಂ ಸಿಇಒ ಅವರಿಂದ ಲಸಿಕೆಯ ಕುರಿತು ಜಾಗೃತಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಲಸಿಕೆ ಹಾಕಲು ಮುಂದಾದಾಗ ಮೈಮೇಲೆ ದೇವರು ಬಂದಂತೆ ವರ್ತಿಸಿ ಯಂಕಮ್ಮಾ, ಅಯ್ಯಯ್ಯೋ… ನನ್ನ ಮೈಮೇಲೆ ದೇವ್ರು ಬಂದಿದೆ. ದೇವ್ರಿಗೆ ಸೂಜಿ ಚುಚ್ಚಬಾರದು, ವ್ಯಾಕ್ಸಿನ್‌ ಹಾಕಬಾರದು ಎಂದು ಚೀರಾಡಿದ್ದಾಳೆ. ಮೈಮೇಲೆ ದೇವರು ಬಂದಾಗ ಮಾಡುವಂತೆ ತಲೆ- ಮೈಕೈ ಎಲ್ಲಾ ಅಲುಗಾಡಿಸುತ್ತಾ ನನ್ನ ಮೈಮೇಲೆ ದೇವರು ಬಂದಿದೆ ಎಂದಿದ್ದಾಳೆ.

    ನಂತರ ಆಯ್ತಮ್ಮಾ, ವ್ಯಾಕ್ಸಿನ್‌ ಹಾಕಲ್ಲ ಎಂದು ಅಲ್ಲಿದ್ದವರು ಹೇಳಿದಾಗ ಮಹಿಳೆ ಸುಮ್ಮನಾಗಿದ್ದಾಳೆ. ಮೈಮೇಲಿ ದೇವರು ಹೋಯಿತು ಎಂದಿದ್ದಾಳೆ. ಇದಾದ ಮೇಲೆ ಆರೋಗ್ಯ ಸಿಬ್ಬಂದಿ ಆಕೆಗೆ ಕೊನೆಗೂ ಲಸಿಕೆ ಕೊಟ್ಟಿದ್ದಾರೆ!

    ಇಲ್ಲಿವೆ ನೋಡಿ ವಿಡಿಯೋ:

    ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿದ: ಹೊರಗೆ ಬಂದು ಗರ್ಭಿಣಿ ಹೆಂಡತಿ ಸೇರಿದಂತೆ ಮೂವರ ಕೊಲೆ ಮಾಡಿದ!

    ತಿರುಪತಿಯಲ್ಲಿ ಮತ್ತೆ ಭೂಕುಸಿತ: ಪ್ರಯಾಣಿಕರು ಸ್ವಲ್ಪದರಲ್ಲಿ ಬಚಾವ್‌- ಟ್ರಿಪ್‌ಗೆ ಹೋಗೋದಿದ್ರೆ ಕ್ಯಾನ್ಸಲ್‌ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts