More

    ಅನ್‌ಲಾಕ್‌ 3.0ಗೆ ಕ್ಷಣಗಣನೆ: ಏನೇನಾಗಬಹುದು? ಇಲ್ಲಿದೆ ನೋಡಿ ಡಿಟೇಲ್ಸ್‌…

    ಬೆಂಗಳೂರು: ಇದಾಗಲೇ ಅನ್‌ಲಾಕ್‌ 2.0 ಸಂದರ್ಭದಲ್ಲಿ ಕೆಲವು ವಿನಾಯಿತಿಗಳನ್ನು ನೀಡಿರುವ ಬೆನ್ನಲ್ಲೇ ಇದೀಗ ಅನ್‌ಲಾಕ್‌ 3.0ಗೆ ಕ್ಷಣಗಣನೆ ಶುರುವಾಗಿದೆ.
    ನಾಳೆ ಅಂದರೆ ಜುಲೈ 3ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯಲಿದೆ ಹೈ ವೋಲ್ಟೇಜ್ ಮೀಟಿಂಗ್ ನಡೆಯಲಿದ್ದು, ಈ ಸಭೆಯಲ್ಲಿ ಯಾವೆಲ್ಲಾ ಸೌಕರ್ಯಗಳು ಇರಬೇಕು, ಯಾವುದಕ್ಕೆ ನಿರ್ಬಂಧ ಮುಂದುವರೆಸಬೇಕು ಎಂಬ ಬಗ್ಗೆ ನಿರ್ಧಾರ ಆಗಲಿದೆ.
    ಮುಖ್ಯಮಂತ್ರಿಗಳು ಹಿರಿಯ ಸಚಿವರ ಜತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದು, ಈ ಸಭೆಯ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

    ಯಾವುದಕ್ಕೆಲ್ಲಾ‌ ವಿನಾಯಿತಿ ಸಿಗಬಹುದು?
    – ವ್ಯಾಪಾರದ ಅವಧಿ ಇನ್ನಷ್ಟು ವಿಸ್ತರಣೆ ಸಾಧ್ಯತೆ
    – ಮಾಲ್ ಗಳಲ್ಲಿ ಶೇಕಡಾ 50ರಷ್ಟು ಆಧಾರದಲ್ಲಿ ಅನುಮತಿ ಸಾಧ್ಯತೆ
    – ಒಳಾಂಗಣ ಶೂಟಿಂಗ್ ಗೆ ಅನುಮತಿ ಸಾಧ್ಯತೆ
    – ಬಾರ್, ರೆಸ್ಟೋರೆಂಟ್‌ಗಳಿಗೆ ಅನುಮತಿ ( ಶೇಕಡಾ 50 ರಷ್ಟು ಗ್ರಾಹಕರಿಗೆ ಅವಕಾಶ)
    – ಪ್ರವಾಸಿ ತಾಣಗಳಿಗೆ ಅನುಮತಿ ಸಾಧ್ಯತೆ( ಕೋವಿಡ್ ನಿಯಮ ಪಾಲನೆ ಆಧಾರದ ಮೇಲೆ)
    – ಉದ್ಯಾನವನ ಪೂರ್ಣ ಪ್ರಮಾಣದಲ್ಲಿ ಓಪನ್ ಸಾಧ್ಯತೆ( ಜಿಮ್ ಸಲಕರಣೆ ಉಪಯೋಗಿಸೋದಕ್ಕೆ ನಿಷೇಧ)
    – ಸರ್ಕಾರಿ ಕಚೇರಿಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿಗೆ ಅವಕಾಶ
    – ಕ್ಯಾಬ್, ಆಟೋಗಳಿಗೆ ವಿಧಿಸಿರೋ ನಿರ್ಬಂಧ ತೆಗೆಯುವ ಸಾಧ್ಯತೆ( ಕೇವಲ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಇತ್ತು)
    – ದೇವಸ್ಥಾನಗಳಲ್ಲಿ ಕನಿಷ್ಠ ಭಕ್ತಾಧಿಗಳಿಗೆ ಅವಕಾಶ ಸಾಧ್ಯತೆ
    – ಹೊಟೇಲ್‌ಗಳಲ್ಲಿ ಈಗಿನ ನಿಯಮ ಮುಂದುವರಿಕೆ (ಶೇಕಡಾ 50ರಷ್ಟು ಗ್ರಾಹಕರಿಗೆ ಅವಕಾಶ)
    ಮದುವೆ ಅಂತ್ಯ ಸಂಸ್ಕಾರಕ್ಕೆ ಈಗಿನ ನಿಯಮವೇ ಮುಂದುವರಿಕೆ
    – ವೀಕೆಂಡ್ ಕರ್ಫ್ಯೂವಿನಲ್ಲಿ ಇನ್ನಷ್ಟು ಸಡಿಲಿಕೆ
    – ಕಾಲೇಜುಗಳ ಆರಂಭಕ್ಕೆ ಅನುಮತಿ (ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ)

    ಯಾವುದಕ್ಕಿಲ್ಲ ವಿನಾಯಿತಿ?
    – ಚಿತ್ರ ಮಂದಿರ ಓಪನ್ ಆಗೋದು ಅನುಮಾನ
    – ಶಾಪಿಂಗ್ ಮಾಲ್ ಒಳಗಡೆ ಇರೋ ಫುಡ್ ಕೋರ್ಟ್
    – ಶಾಲೆಗಳು ಒಪನ್ ಆಗೋದು ಅನುಮಾನ

    ಅನ್ ಲಾಕ್ ನಲ್ಲಿ ಸರ್ಕಾರ ಏನು ಮಾಡುತ್ತೆ..?

    – ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ
    – ಡೆಲ್ಟಾ + ವೈರಸ್ ಹೆಚ್ಚಿರೋ ರಾಜ್ಯಗಳ ಗಡಿಯಲ್ಲಿ ಚೆಕಿಂಗ್
    – ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಹೊರ ರಾಜ್ಯದಿಂದ ಎಂಟ್ರಿ
    – ನೈಟ್ ಕರ್ಫ್ಯೂ ಮುಂದುವರೆಸುವ ಸಾಧ್ಯತೆ
    – ಕೋವಿಡ್ ನಿಯಮ ಪಾಲನೆಗೆ ಹೆಚ್ಚಿನ ಒತ್ತು

    ಸಿಡಿ ಲೇಡಿ ಹುಡುಕಿ ಹೊರಟ್ರು ಜಾರಕಿಹೊಳಿ- ಊರಿಗೆ ಬಂದ್ರೂ ಮನೆಗೆ ಬಂದಿಲ್ಲ: ಎಲ್ಲವೂ ನಿಗೂಢ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts