ಭಾರತೀಯ ಸೇನೆಯಿಂದ ಇಂಜಿನಿಯರಿಂಗ್ ಪದವೀಧರರಾಗಿರುವ ಅವಿವಾಹಿತ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಮತ್ತು ರಕ್ಷಣಾ ಸಿಬ್ಬಂದಿಯ ವಿಧವಾ ಅಭ್ಯರ್ಥಿಗಳಿಂದ ಶಾರ್ಟ್ ಸವಿರ್ಸ್ ಕಮಿಷನ್ (ಎಸ್ಎಸ್ಸಿ) ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಸ್ಥಾನಗಳು: 189
ಎಸ್ಎಸ್ಸಿ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚೆನ್ನೈನ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಲ್ಲಿ (ಒಟಿಎ) ತರಬೇತಿ ನೀಡಲಾಗುವುದು. 189 ಸ್ಥಾನಗಳಲ್ಲಿ ಪುರುಷ ಅಭ್ಯರ್ಥಿಗೆ 175 ಸ್ಥಾನ, ಮಹಿಳಾ ಅಭ್ಯರ್ಥಿಗೆ 14 ಸ್ಥಾನ ಮೀಸಲಿರಿಸಲಾಗಿದೆ.
ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ನೀಡಲಾಗುವ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಸೇನೆಯಲ್ಲಿ ಲೆಫ್ಟಿನೆಂಟ್ ಹಂತದ ಹುದ್ದೆಗಳನ್ನು ನೀಡಲಾಗುವುದು. ತರಬೇತಿಯ ಅವಧಿಯು 49 ವಾರಗಳಾಗಿರುತ್ತದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ವಿವಾಹವಾಗುವಂತಿಲ್ಲ.
ಯಾವ ವಿಭಾಗಗಳಲ್ಲಿ ತರಬೇತಿ, ಎಷ್ಟು ಸ್ಥಾನ?
* ಸಿವಿಲ್/ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಟೆಕ್ನಾಲಜಿ – 65
* ಆಕಿರ್ಟೆಕ್ಚರ್ – 1
* ಮೆಕ್ಯಾನಿಕಲ್ – 6
* ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ – 9
* ಎಲೆಕ್ಟ್ರಾನಿಕ್ಸ್ – 2
* ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್/ ಕಂಪ್ಯೂಟರ್ ಟೆಕ್ನಾಲಜಿ/ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ – 35
* ಇನ್ಮೇರ್ಷನ್ ಟೆಕ್ನಾಲಜಿ – 14
* ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ – 5
* ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ – 4
* ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ – 5
* ಸ್ಯಾಟಲೈಟ್ ಕಮ್ಯುನಿಕೇಷನ್ – 3
* ಮೈಕ್ರೋ ಎಲೆಕ್ಟ್ರಾನಿಕ್ಸ್ ಆ್ಯಂಡ್ ಮೈಕ್ರೋವೇವ್ – 3
* ಏರೋನಾಟಿಕಲ್ / ಏರೋಸ್ಪೇಸ್/ ಎವಿಯೋನಿಕ್ಸ್ – 7
* ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಸ್ಟ್ರುಮೆಂಟೇಷನ್/ ಇನ್ಸ್ಟ್ರುಮೆಂಟೇಷನ್ – 4
* ಆಟೋಮೊಬೈಲ್ ಇಂಜಿನಿಯರಿಂಗ್ – 3
* ಇಂಡಸ್ಟ್ರಿಯಲ್/ ಮ್ಯಾನುಫ್ಯಾಕ್ಚರಿಂಗ್/ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ – 6
* ಓಪ್ಟೋ ಎಲೆಕ್ಟ್ರಾನಿಕ್ಸ್ – 3
* ಫೈಬರ್ ಆಪ್ಟಿಕ್ಸ್ – 2
* ಬಯೋ ಟೆಕ್ನಾಲಜಿ – 1
* ಬ್ಯಾಲಿಸ್ಟಿಕ್ಸ್ ಇಂಜಿನಿಯರಿಂಗ್ – 1
* ರಬ್ಬರ್ ಟೆಕ್ನಾಲಜಿ – 1
* ಕೆಮಿಕಲ್ ಇಂಜಿನಿಯರಿಂಗ್ – 1
* ವರ್ಕ್ಶಾಪ್ ಟೆಕ್ನಾಲಜಿ – 3
* ಲೇಸರ್ ಟೆಕ್ನಾಲಜಿ – 2
ಶೈಕ್ಷಣಿಕ ಅರ್ಹತೆ: ಇಂಜಿನಿಯರಿಂಗ್ ಪದವಿ ಪಡೆದಿರುವ ಅಥವಾ ಅಂತಿಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ (1.10.2021ಕ್ಕೆ ಪದವಿ ಪ್ರಮಾಣಪತ್ರ ಪಡೆಯುವಂತಿರಬೇಕು) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿಧವಾ ಅಭ್ಯರ್ಥಿಗಳು ನಾನ್ ಟೆಕ್ನಿಕಲ್ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು. ಟೆಕ್ನಿಕಲ್ ಹುದ್ದೆಗೆ ಬಿಇ/ಬಿ.ಟೆಕ್ ಪದವಿ ಪಡೆದಿರಬೇಕು.
ವಯೋಮಿತಿ: 1.10.2021ಕ್ಕೆ ಅನ್ವಯವಾಗುವಂತೆ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ, ಗರಿಷ್ಠ 27 ವರ್ಷ (2.10.1994-1.10.2001ರ ನಡುವೆ ಜನಿಸಿರಬೇಕು). ವಿಧವಾ ಅಭ್ಯರ್ಥಿಗೆ ಗರಿಷ್ಠ 35 ವರ್ಷ, (2.7.1994 ರಿಂದ 1.7.2001ರ ನಡುವೆ ಜನಿಸಿರಬೇಕು)
ಸ್ಟೈಪೆಂಡ್: ಐಎಂಎ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ 56,100 ರೂ. ಸ್ಟೈಪೆಂಡ್ ನೀಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 23.6.2021
ಅಧಿಸೂಚನೆಗೆ: https://bit.ly/3fofaNj
ಮಾಹಿತಿಗೆ: www.joinindianarmy.nic.in
ಬಿಇ, ಬಿಟೆಕ್ ಪದವೀಧರರಿಗೆ ಬಿಇಎಲ್ನಲ್ಲಿದೆ ಉದ್ಯೋಗಾವಕಾಶ: ನಾಳೆಯೇ ಕೊನೆಯ ದಿನ