More

    ಐಟಿಐ ಪದವೀಧರರಿಗೆ ಬಿಗ್​ ಆಫರ್​- 304 ಹುದ್ದೆಗಳಿಗೆ ಅರ್ಜಿ ಆಹ್ವಾನ

    ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‍ಎಂಡಿಸಿ) ಚತ್ತೀಸಗಢ್‍ನ ನಗರ್ನಾರ್‍ನಲ್ಲಿ ಬೃಹತ್ ಇಂಟಿಗ್ರೇಟೆಡ್ ಸ್ಟೀಲ್ ಘಟಕವನ್ನು ಪ್ರಾರಂಭಿಸುತ್ತಿದೆ. ಪ್ರಸ್ತುತ ಕಿರಂದುಲ್ ಕಾಂಪ್ಲೆಕ್ಸ್ ಹಾಗೂ ಬಚೆಲಿ ಕಾಂಪ್ಲೆಕ್ಸ್‍ನಲ್ಲಿರುವ ಭೈಲಾದಿಲ ಐರನ್ ಓರ್ ಮೈನ್‍ಗಳಲ್ಲಿ ಕಾರ್ಯನಿರ್ವಹಿಸಲು ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು ಹುದ್ದೆಗಳು: 304

    ಐಟಿಐನ ವಿವಿಧ ಟ್ರೇಡ್‍ಗಳಲ್ಲಿ ಅದರಲ್ಲೂ ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಿಕಲ್ ವ್ಯಾಸಂಗ ಮಾಡಿದವರಿಗೆ ಹೆಚ್ಚಿನ ಹುದ್ದೆಗಳಿವೆ. ಎನ್‍ಎಂಡಿಸಿಯಲ್ಲಿ ಕಾರ್ಯನಿರ್ವಹಿಸಲು ಆಸಕ್ತರಾಗಿರುವ ಅಭ್ಯರ್ಥಿಗಳು ಆನ್‍ಲೈನ್ ಹಾಗೂ ಆïಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

    ಟ್ರೇನಿ ಹುದ್ದೆ ವಿವರ
    * ಫೀಲ್ಡ್ ಅಟೆಂಡೆಂಟ್ – 65
    * ಮೈಂಟೇನೆನ್ಸ್ ಅಸಿಸ್ಟೆಂಟ್ (ಮೆಕ್ಯಾನಿಕಲ್)- 148
    * ಮೈಂಟೇನೆನ್ಸ್ ಅಸಿಸ್ಟೆಂಟ್ (ಎಲೆಕ್ಟ್ರಿಕಲ್) – 81
    * ಬ್ಲಾಸ್ಟರ್ ಗ್ರೇಡ್-ಐಐ – 1
    * ಎಂಸಿಒ ಗ್ರೇಡ್- ಐಐಐ – 9

    ಮೀಸಲಾತಿ: 304 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 132 ಸ್ಥಾನ, ಎಸ್ಸಿಗೆ 35, ಎಸ್ಟಿಗೆ 94, ಇತರ ಹಿಂದುಳಿದ ವರ್ಗಕ್ಕೆ 15, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 28 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ವಿದ್ಯಾರ್ಹತೆ: ವೆಲ್ಡಿಂಗ್/ ಫಿಟ್ಟರ್/ ಮೆಷಿನಿಸ್ಟ್/ ಮೋಟಾರ್ ಮೆಕ್ಯಾನಿಕ್/ ಡೀಸೆಲ್ ಮೆಕ್ಯಾನಿಕ್/ ಆಟೋ ಎಲೆಕ್ಟ್ರಿಷಿಯನ್, ಎಲೆಕ್ಟ್ರಿಕಲ್ ಟ್ರೇಡ್, ಬ್ಲಾಸ್ಟರ್‍ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು. ಬ್ಲಾಸ್ಟರ್ ಹುದ್ದೆಗೆ ಮೈನಿಂಗ್ ಮೇಟ್ ಪ್ರಮಾಣ ಪತ್ರ ಮತ್ತು ಪ್ರಾಥಮಿಕ ಚಿಕಿತ್ಸೆ ಪ್ರಮಾಣಪತ್ರ ಅವಶ್ಯ. ಎಂಸಿಒ ಹುದ್ದೆಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ 3 ವರ್ಷದ ಡಿಪ್ಲೋಮಾ ಮಾಡಿರುವುದರ ಜತೆಗೆ ದೊಡ್ಡ ವಾಹನದ ಚಾಲಾನಾ ಪರವಾನಗಿ ಹೊಂದಿರಬೇಕು.

    ವಯೋಮಿತಿ: 15.4.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇರಲಿದೆ.

    ವೇತನ: ಗ್ರೇಡ್ 2 ಮತ್ತು 3 ಹುದ್ದೆಗೆ ಮೊದಲ ವರ್ಷ 19,000 ರೂ. ಸ್ಟೈಪೆಂಡ್ ರೂಪದಲ್ಲಿ ನೀಡಲಾಗುವುದು, ನಂತರ 19,900-35,040 ರೂ. ವೇತನ ಇರಲಿದೆ. ಉಳಿದ ಹುದ್ದೆಗಳಿಗೆ ಮೊದಲ ವರ್ಷ ಮಾಸಿಕ 18,000 ಇದ್ದು, ನಂತರ 18,700-31,800 ರೂ. ವೇತನ ಇರಲಿದೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ, ಸಂಸ್ಥೆಯ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 150 ರೂ. ಪಾವತಿಸತಕ್ಕದ್ದು.

    ಆಯ್ಕೆ ಪ್ರಕ್ರಿಯೆ: ಫೀಲ್ಡ್ ಅಟೆಂಡೆಂಟ್ ಹುದ್ದೆಗೆ ಲಿಖಿತ ಪರೀಕ್ಷೆ ಜತೆ ಫಿಜಿಕಲ್ ಎಬಿಲಿಟಿ ಪರೀಕ್ಷೆ ನಡೆಸಲಾಗುವುದು. ಉಳಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಟ್ರೇಡ್ ಟೆಸ್ಟ್ ನಡೆಸಲಾಗುವುದು. ನಂತರ ದಾಖಲೆ ಪರೀಶೀಲನೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.

    ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಕೊನೇ ದಿನ: 31.3.2021
    ಆïಲೈನ್ ಅರ್ಜಿ ಸಲ್ಲಿಕೆಗೆ ಕೊನೇ ದಿನ: 15.4.2021
    ಅರ್ಜಿ ಸಲ್ಲಿಕೆ ವಿಳಾಸ: http://“Post Box No.1383, Post Office, Humayun Nagar, Hyderabad, Telangana State, Pin- 500028

    ಅಧಿಸೂಚನೆಗೆ: https://bit.ly/3kZkjNh
    ಮಾಹಿತಿಗೆ: http://www.nmdc.co.in

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts