More

    ವಿವಿಧ ಪದವೀಧರರಿಗೆ ಸೆಣಬು ಸಂಸ್ಥೆಯಲ್ಲಿವೆ ಉದ್ಯೋಗಾವಕಾಶ- 1.15 ಲಕ್ಷ ರೂ.ವರೆಗೆ ಸಂಬಳ

    ಸೆಣಬು ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವ ಸಲುವಾಗಿ ಕಂಪನಿ ಕಾಯ್ದೆಯಡಿ ಪ್ರಾರಂಭವಾದ ಜೂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಜೆಸಿಐ) ಕಚ್ಚಾ ಸೆಣಬು ವಲಯ ಹಾಗೂ ಸಂಬಂಧಿತ ಉತ್ಪನ್ನಗಳ ವ್ಯಾಪಾರ ವ್ಯವಹಾರವನ್ನು ನೋಡಿಕೊಳ್ಳುತ್ತದೆ. ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ತ್ರಿಪುರ, ಒಡಿಶಾ, ಆಂಧ್ರಪ್ರದೇಶ ಸೇರಿ ದೇಶದ 6 ರಾಜ್ಯಗಳಲ್ಲಿ ಘಟಕ ಹೊಂದಿರುವ ಜೆಸಿಐ ವಿವಿಧ ಹುದ್ದೆಗೆ ನೇಮಕ ಮಾಡಿಕೊಳ್ಳುವುದಾಗಿ ಅಧಿಸೂಚನೆ ಹೊರಡಿಸಿದೆ.

    ಒಟ್ಟು ಹುದ್ದೆಗಳು: 63

    ಜೆಸಿಐನಲ್ಲಿ ನೇಮಕ ಮಾಡಿಕೊಳ್ಳುವ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗಕ್ಕಾದರೂ ನೇಮಕ ಮಾಡಬಹುದಾಗಿದೆ, ಅಲ್ಲದೇ ಸಂಸ್ಥೆ ವಹಿಸುವ ಇತರ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಕಂಪ್ಯೂಟರ್ ಆಧಾರಿತ ಆನ್​ಲೈನ್ ಪರೀಕ್ಷೆ ನಡೆಸಿ ಶಾರ್ಟ್​ಲಿಸ್ಟ್ ಮಾಡಲಾಗುವುದು. ಅಭ್ಯರ್ಥಿಗಳು ಯಾವುದಾದರೂ 3 ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರಶ್ನೆಪತ್ರಿಕೆಯು ಇಂಗ್ಲಿಷ್ ಮತ್ತು ಹಿಂದಿಯಲ್ಲಿರುತ್ತದೆ. ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಟೈಪಿಂಗ್ ಪರೀಕ್ಷೆ ನಡೆಸಲಾಗುವುದು. ಆನ್​ಲೈನ್ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು.

    ಹುದ್ದೆ ವಿವರ

    * ಅಕೌಂಟೆಂಟ್- 12

    ಎಂಕಾಂ ಜತೆ ಅಡ್ವಾನ್ಸ್​ಡ್ ಅಕೌಂಟೆನ್ಸಿ ಆಂಡ್ ಆಡಿಟಿಂಗ್ ಮಾಡಿದ್ದು, ಕಮರ್ಷಿಯಲ್ ಅಕೌಂಟ್ಸ್ ನಿರ್ವಹಣೆಯಲ್ಲಿ ಕನಿಷ್ಠ 5 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಬಿಕಾಂ ಮಾಡಿರುವ ಅಭ್ಯರ್ಥಿಗಳಿಗೆ 7 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಎಸಿಎ, ಎಸ್​ಎಎಸ್, ಸಿಎ, ಎಸಿಡಬ್ಲ್ಯುಎ, ಸಿಎಡಿ ಮಾಡಿರುವ ಅಭ್ಯರ್ಥಿಗಳು ಅರ್ಹರು. ಮಾಸಿಕ 28,600- 1,15,000 ರೂ. ವೇತನ ನಿಗದಿಪಡಿಸಲಾಗಿದೆ.

    * ಜೂನಿಯರ್ ಅಸಿಸ್ಟೆಂಟ್ – 11

    ಪದವಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಎಂಎಸ್ ವರ್ಡ್ ಮತ್ತು ಎಕ್ಸೆಲ್ ಬಳಕೆ ಜತೆ ಕಂಪ್ಯೂಟರ್ ಜ್ಞಾನ ಅವಶ್ಯ. ನಿಮಿಷಕ್ಕೆ ಕನಿಷ್ಠ 40 ಇಂಗ್ಲಿಷ್ ಪದ ಟೈಪಿಂಗ್ ಮಾಡುವಂತಿರಬೇಕು. ಮಾಸಿಕ 21,500- 86,500 ರೂ. ವೇತನ ಇದೆ.

    * ಜೂನಿಯರ್ ಇನ್​ಸ್ಪೆಕ್ಟರ್ – 40

    ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು ಅಥವಾ ಕಚ್ಚಾ ಸೆಣಬಿನ ಖರೀದಿ/ ಮಾರಾಟ/ ಸಂಗ್ರಹಣೆಯಲ್ಲಿ ಕನಿಷ್ಠ 3 ವರ್ಷ ವೃತ್ತಿ ಅನುಭವವನ್ನು ತತ್ಸಮಾನ ಶಿಕ್ಷಣ ಎಂದು ಪರಿಗಣಿಸಲಾಗುವುದು. ಮಾಸಿಕ 21,500-86,500 ರೂ. ವೇತನ ಇದೆ. ಈ ಹುದ್ದೆಗಳಲ್ಲಿ ಅಂಗವಿಕಲರಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

    ವಯೋಮಿತಿ: 1.12.2021ಕ್ಕೆ ಅನ್ವಯವಾಗುವಂತೆ ಎಲ್ಲ ಹುದ್ದೆಗೂ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇರುತ್ತದೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿಸೈನಿಕ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 200 ರೂ. ಅನ್ನು ಆನ್​ಲೈನ್ ಮೂಲಕ ಮಾತ್ರ ಪಾವತಿಸತಕ್ಕದ್ದು.

    ಅರ್ಜಿ ಸಲ್ಲಿಸಲು ಕೊನೇ ದಿನ: 13.1.2022

    ಅಧಿಸೂಚನೆಗೆ: https://bit.ly/3qJYbJY

    ಮಾಹಿತಿಗೆ: http://www.jutecorp.in

    ಸ್ನಾತಕೋತ್ತರ ಪದವೀಧರರಿಗೆ ಗುಡ್‌ನ್ಯೂಸ್‌: ಕೇಂದ್ರ ಸರ್ಕಾರದಿಂದ 177 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts