More

    ಬೀಚ್​ನಲ್ಲಿ ಉಡುಪಿಯ ನವದಂಪತಿ ಆಚರಿಸಿದ್ರು ಡಿಫರೆಂಟ್​ ‘ಹನಿಮೂನ್​’- ಶ್ಲಾಘನೆಗಳ ಮಹಾಪೂರ

    ಉಡುಪಿ: ಮದುವೆಗಿಂತ ಮುಂಚೆಯೇ ಹನಿಮೂನ್​ ಕುರಿತು ಭಾವಿ ದಂಪತಿ ಯೋಚನೆ ಮಾಡುವುದು ಹೊಸ ವಿಷಯವಲ್ಲ. ಎಲ್ಲಿಗೆ ಹೋಗಬೇಕು? ಫಾರಿನ್​ ಟೂರ್​ ಮಾಡಬೇಕಾ? ಯಾವ ಸ್ಥಳ ಬೆಸ್ಟ್​ ಹೀಗೆಲ್ಲಾ ಯೋಚನೆ ಮಾಡಿ ಅದಕ್ಕಾಗಿ ಮೊದಲೇ ಮುಂಗಡವಾಗಿ ಹಣವನ್ನೂ ಬುಕ್​ ಮಾಡಿಯಾಗಿರುತ್ತದೆ.

    ಆದರೆ ಉಡುಪಿಯ ಈ ನವಜೋಡಿ ಮಾತ್ರ ತುಂಬಾ ವಿಭಿನ್ನವಾಗಿ ಹನಿಮೂನ್​ ಮಾಡುವ ಯೋಚನೆ ಮಾಡಿದ್ದರು. ಅದಕ್ಕಾಗಿಯೇ ಇವರೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಫೇಮಸ್​ ಆಗಿದ್ದಾರೆ. ಇವರ ಈ ಯೋಚನೆಗೆ ಸಹಸ್ರಾರು ಮಂದಿ ಶಹಬ್ಬಾಸ್​ ಎಂದಿದ್ದಾರೆ.

    ಅಷ್ಟಕ್ಕೂ ಈ ದಂಪತಿ ಮಾಡಿರುವುದು ಎಂದರೆ, ಉಡುಪಿಯ ಬೀಚ್​ನಲ್ಲಿಯೇ ಒಟ್ಟಾಗಿ ಶುಚಿಕಾರ್ಯ ಕೈಗೊಂಡಿರುವುದು! ಹೌದು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಳವಾಡಿಯ ಅನುದೀಪ್ – ಮಿನುಷಾ ದಂಪತಿ ಸಮಾಜಸೇವೆ ಮಾಡುವುದೇ ತಾವು ಕೈಗೊಳ್ಳುವ ಹನಿಮೂನ್​ ಎಂದು ಹೇಳುವ ಮೂಲಕ ತಮ್ಮ ಹೊಸ ಜೀವನವನ್ನೂ ಸ್ಮರಣೀಯ ಮಾಡಿಕೊಂಡಿದ್ದಾರೆ.

    ಬೀಚ್​ನಲ್ಲಿ ಉಡುಪಿಯ ನವದಂಪತಿ ಆಚರಿಸಿದ್ರು ಡಿಫರೆಂಟ್​ 'ಹನಿಮೂನ್​'- ಶ್ಲಾಘನೆಗಳ ಮಹಾಪೂರಕಳೆದ ನ.18ರಂದು ಇವರ ಮದುವೆ ನಡೆದಿದೆ. ಆದರೆ ಅವರು ಹನಿಮೂನ್​ಗೆಂದು ಯಾವ ಸ್ಥಳಕ್ಕೂ ಹೋಗದೆ ಕಡಲ ಕಿನಾರೆಯನ್ನು ಸ್ವಚ್ಛಗೊಳಿಸುವ ಕೆಲಸ ಪ್ರಾರಂಭಿಸಿದರು. ನವೆಂಬರ್ 27ರಂದು ಬೀಚ್​ನಲ್ಲಿ ಪ್ರತಿ ದಿನ 2 ಗಂಟೆಯ ಕಾಲ ಸ್ವತಃ ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದಾರೆ. ತೀರದಲ್ಲಿ ಬಿದ್ದಿದ್ದ ಮದ್ಯದ ಬಾಟಲಿ, ಪ್ಲಾಸ್ಟಿಕ್, ಚಪ್ಪಲಿ ಸಹಿತ ಅನೇಕ ತ್ಯಾಜ್ಯ ಕಸ ಕಡ್ಡಿಗಳನ್ನು ತೆಗೆದು ಶುಚಿಗೊಳಿಸಿದ್ದಾರೆ.

    ತಾವು ಈ ಬಗ್ಗೆ ಮೊದಲೇ ಯೋಚನೆ ಮಾಡಿದ್ದೆವು. ಇದರಿಂದ ಸಮಾಜಸೇವೆಯಾಗುವುದು ಮಾತ್ರವಲ್ಲದೇ ಇದು ಇತರರಿಗೂ ಸ್ಫೂರ್ತಿಯಾಗುತ್ತದೆ ಎಂಬುದು ನಮ್ಮ ಭಾವನೆಯಾಗಿತ್ತು. ಇದು ನಿಜ ಕೂಡ ಆಯಿತು. ನಮ್ಮ ಸಾಮಾಜಿಕ ಕಾರ್ಯವನ್ನು ಮೆಚ್ಚಿದ ಸ್ಥಳೀಯರು, ತಾವೂ ಕೈಜೋಡಿಸಿ ಕಡಲ ಕಿನಾರೆಯನ್ನು ಸ್ವಚ್ಛಗೊಳಿಸಿದ್ದಾರೆ ಎನ್ನುತ್ತಾರೆ ದಂಪತಿ.

    ಅಂದಹಾಗೆ ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್. ಮಿನುಷಾ ಫಾರ್ಮಾಸಿಟಿಕಲ್ ಕಂಪನಿ ಉದ್ಯೋಗಿ. ಇಬ್ಬರೂ ಪ್ರಕೃತಿ ಪ್ರಿಯರು. ಇವರ ಕಾರ್ಯಕ್ಕೆ ಜಾಲತಾಣದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

    ಇಂಡಿಯನ್ ಆಯಿಲ್ ಕಾರ್ಪೋರೇಷನ್​ನಲ್ಲಿ 436 ಹುದ್ದೆಗಳಿಗೆ ಅರ್ಜಿ ಆಹ್ವಾನ

    ನನ್ನ ಮುದ್ದಿನ ಮೊಮ್ಮಗಳು ಎಂದ ಅಜ್ಜನ ಖಾತೆಗೇ ಲವರ್​ ಜತೆ ಸೇರಿ ಕನ್ನ ಹಾಕಿದ ಕಳ್ಳಿ!

    ಏಲಿಯನ್ ಜತೆ ಅಮೆರಿಕ ಒಪ್ಪಂದ​: ವಿಶ್ವಖ್ಯಾತಿ ಇಸ್ರೇಲ್​ ವಿಜ್ಞಾನಿಯಿಂದ ಅಚ್ಚರಿಯ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts