More

    29ರಂದು ಟ್ರ್ಯಾಕ್ಟರ್‌ ರ‍್ಯಾಲಿ ಮಾಡದಿರಲು ಕಿಸಾನ್‌ ಯೂನಿಯನ್‌ ನಿರ್ಧಾರ: ಪ್ರಧಾನಿಗೆ ಬರೆದ ಪತ್ರದಲ್ಲೇನಿದೆ?

    ನವದೆಹಲಿ: ಸಿಂಘು ಗಡಿಯಲ್ಲಿ ಯೂನಿಯನ್ ನಡೆಸುತ್ತಿದ್ದ ಸಭೆ ಇದೀಗ ಮುಕ್ತಾಯಗೊಂಡಿದ್ದು, 29ರಂದು ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರ‍್ಯಾಲಿ ರದ್ದುಪಡಿಸಲು ತೀರ್ಮಾನಿಸಲಾಗಿದೆ.

    ಈ ಕುರಿತು ಕಿಸಾನ್ ಯೂನಿಯನ್ ಹೇಳಿಕೆ ನೀಡಿದೆ. ನವೆಂಬರ್ 29ರಂದು ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ರಾಲಿ ಸ್ಥಗಿತಗೊಳಿಸಲಾಗಿದೆ. ಆದರೆ ಇದು ಕೇವಲ ಸ್ಥಗಿತವಷ್ಟೇ. ಟ್ರ್ಯಾಕ್ಟರ್ ರ‍್ಯಾಲಿಯನ್ನು ನಿಜವಾಗಿ ಹಿಂಪಡೆದಿಲ್ಲ, ಡಿಸೆಂಬರ್ 4 ರಂದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುತ್ತೇವೆ ಎಂದಿದೆ ಸಂಘಟನೆ.

    ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಸಂಘ, ರೈತರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು. ಎಂಎಸ್‌ಪಿ ಸಂಬಂಧ ಸಮಿತಿಯನ್ನು ರಚಿಸಬೇಕು ಎಂದು ಹೇಳಿದೆ. ಈ ಪತ್ರಕ್ಕೆ ಉತ್ತರಿಸಲು ಡಿಸೆಂಬರ್ 4ರವರೆಗೆ ಪ್ರಧಾನಿಗೆ ಅವಕಾಶ ನೀಡಿದ್ದೇವೆ. ಒಂದು ವೇಳೆ ಅಲ್ಲಿಯವರೆಗೆ ಉತ್ತರ ಬರದಿದ್ದರೆ ಹೋರಾಟ ಮುಂದುವರೆಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

    ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಇದೆ. ಸೋಮವಾರ ನಡೆಯಲಿರುವ ಸಂಸತ್ತಿನಲ್ಲಿ ಮೂರು ಕೃಷಿ ಕಾಯ್ದೆಗಳ ರದ್ದತಿ ಮಸೂದೆಯನ್ನೂ ಅಧಿವೇಶನದ ಇತರ 26 ಕಾರ್ಯಸೂಚಿಯೊಂದಿಗೆ ಕೇಂದ್ರ ಸರ್ಕಾರ ಸೇರಿಸಿದೆ. ಅಂದು ಕಡ್ಡಾಯವಾಗಿ ಬಿಜೆಪಿ ಸಂಸದರು ಲೋಕಸಭೆಯಲ್ಲಿ ಹಾಜರಿರಲೇಬೇಕು ಎಂದು ವಿಪ್​ ಜಾರಿ ಮಾಡಲಾಗಿದೆ. ಹಾಗೇ, ರಾಜ್ಯಸಭೆ ಸದಸ್ಯರಿಗೂ ವಿಪ್ ಜಾರಿಯಾಗಿದೆ. ಇನ್ನು ಕಾಂಗ್ರೆಸ್ ಕೂಡ ತನ್ನ ಸಂಸದರಿಗೆ ಮೂರು ಸಾಲಿನ ವಿಪ್​ ಜಾರಿ ಮಾಡಿದೆ.

    ನಂದಿನಿ ಪ್ಯಾಕೆಟ್‌ನಲ್ಲಿ ಕಾಣಿಸಿಕೊಳ್ತೀರೋ ಈ ವ್ಯಕ್ತಿ ಯಾರು? ಶತಮಾನ ಪೂರೈಸಿದ ‘ಕ್ಷೀರಕ್ರಾಂತಿ ಪಿತಾಮಹ’ನ ಕುತೂಹಲ ಕಥನ…

    ಎರಡು ಡೋಸ್‌ ಲಸಿಕೆ ಇಲ್ಲದಿದ್ರೆ ಕಿಮ್ಸ್‌ನಲ್ಲಿ ನೋ ಎಂಟ್ರಿ: ರೋಗಿಗಳಿಗೆ, ಸಂಬಂಧಿಕರಿಗೆ ಎಲ್ಲರಿಗೂ ಕಡ್ಡಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts