More

    ಚೀನಾ ಔಷಧ ಕಂಪೆನಿಯಿಂದ ಸೋರಿಕೆ: ಪುರುಷರ ಕಾಡಲಿದೆ ಈ ಮಹಾಮಾರಿ ಬ್ಯಾಕ್ಟೀರಿಯಾ!

    ಬೀಜಿಂಗ್: ಕರೊನಾದಿಂದ ಇಡೀ ವಿಶ್ವ ಇನ್ನೂ ಹೊರಬಂದಿಲ್ಲ. ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಸುತ್ತಲೇ ಇದೆ ಈ ವೈರಸ್​. ಚೀನಿಯರೇ ಸೃಷ್ಟಿಮಾಡಿದ್ದಾರೆ ಎನ್ನಲಾದ ಈ ವೈರಸ್​ನ ಭೀಕರತೆಗೆ ಇಡೀ ವಿಶ್ವವೇ ನಲುಗಿ ಹೋಗಿರುವ ಬೆನ್ನಲ್ಲೇ ಈಗ ಬ್ಯಾಕ್ಟೀರಿಯಾ ಒಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.

    ಕಳೆದ ವರ್ಷ ವಾಯುವ್ಯ ಚೀನಾದ ಜೈವಿಕ ಔಷಧ ಕಂಪೆನಿಯೊಂದರಲ್ಲಿ ಸೋರಿಕೆಯಾದ ಬ್ಯಾಕ್ಟೀರಿಯಾದ ರೋಗವಾದ ಬ್ರುಸೆಲ್ಲೋಸಿಸ್ ಇದೀಗ ತನ್ನ ರೌದ್ರ ಸ್ವರೂಪವನ್ನು ತೋರುತ್ತಿದೆ ಎಂದು ವರದಿಯಾಗಿದೆ. ಇದಾಗಲೇ 3,245 ಜನರು ಈ ವೈರಸ್​ ಪೀಡಿತರಾಗಿರುವುದಾಗಿ ಚೀನಾದ ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ.

    ಗ್ಯಾನ್ಸು ಪ್ರಾಂತ್ಯದ ರಾಜಧಾನಿ ಯಾದ ಲಾಂಝೌನಲ್ಲಿ ಈ ಮಹಾಮಾರಿ ಕಾಣಿಸಿಕೊಂಡಿದೆ. ಈಗಾಗಲೇ 3,245 ಜನರು ಈ ರೋಗಕ್ಕೆ ಈಡಾಗಿದ್ದು, ಇದು ಬ್ಯಾಕ್ಟೀರಿಯಾ ಬ್ರುಸೆಲ್ಲಾವನ್ನು ಹೊತ್ತೊಯ್ಯುವ ಜಾನುವಾರುಗಳ ಸಂಪರ್ಕದಿಂದ ಉಂಟಾಗಿದೆ ಎಂದು ಚೀನಾದ ಆರೋಗ್ಯ ಆಯೋಗ ಹೇಳಿದೆ.

    ಇದನ್ನೂ ಓದಿ: ಗಂಡನ ಮನೆಗೆ ಕನ್ನ ಹಾಕಿ ನಟಿ ಎಸ್ಕೇಪ್​: ಪತಿರಾಯ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು?

    ಅಷ್ಟಕ್ಕೂ ಈ ಮಹಾಮಾರಿ ಪುರುಷರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಚೀನಾದ ಆರೋಗ್ಯ ಇಲಾಖೆಯೇ ಒಪ್ಪಿಕೊಂಡಿದೆ. ಇದು ವೃಷಣಗಳ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ, ಉರಿಯೂತದ ವೃಷಣ ಬಾಧಿಸಬಹುದು. ಇದರಿಂದ ಪುರುಷರ ಬಂಜೆತನ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ ಎಂದಿದ್ದಾರೆ.

    ಇದು ಪುರುಷರ ಮಾತಾದಾರೆ, ಇನ್ನು ಸಾರ್ವಜನಿಕವಾಗಿಯೂ ಈ ವೈರಸ್​ ಸಾಕಷ್ಟು ತೊಂದರೆ ತರುವ ಸಾಧ್ಯತೆ ಇದೆ ಎಂದು ಯುನೈಟೆಡ್ ಸ್ಟೇಟ್ಸ್ ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಸಂಸ್ಥೆ ಹೇಳಿದೆ. ಬ್ರುಸೆಲ್ಲೋಸಿಸ್ಅನ್ನು ಮಾಲ್ಟಾ ಜ್ವರ ಅಥವಾ ಮೆಡಿಟರೇನಿಯನ್ ಜ್ವರ ಎಂದೂ ಕರೆಯಲಾಗುತ್ತದೆ.
    ಇದು ತಲೆನೋವು, ಸ್ನಾಯು ನೋವು, ಜ್ವರ ಮತ್ತು ಆಯಾಸವನ್ನು ಉಂಟುಮಾಡಬಹುದು ಎಂದು ಅದು ಹೇಳಿದೆ. ಜತೆಗೆ, ಸಂಧಿವಾತ ಅಥವಾ ಕೆಲವು ಅಂಗಗಳಲ್ಲಿ ಊತ ಕಾಣಿಸಿಕೊಳ್ಳಲಿದೆ ಎಂದು ಅದು ಹೇಳಿದೆ.

    ನಾಲ್ಕು ತಿಂಗಳಲ್ಲಿ ಕೆಲಸ ಕಳಕೊಂಡವರು 66 ಲಕ್ಷ- ವೈಟ್​ ಕಾಲರ್​ ಜಾಬ್​ನವರೇ ಅಧಿಕ!

    ಮನೆಗೆ ಬರುತ್ತಿದ್ದೇನೆ, ಕ್ವಾರಂಟೈನ್​ಗೆ ರೂಮ್​ ರೆಡಿ ಮಾಡು ಎಂದಿದ್ದ ಯೋಧ ಬಂದದ್ದು ಶವವಾಗಿ!

    ಇನ್ಮುಂದೆ 90 ನಿಮಿಷ ಕಿಮ್​ನ ಗುಣಗಾನ ಕಡ್ಡಾಯ- ಸಹೋದರಿಯಿಂದ ವಿಚಿತ್ರ ಆದೇಶ

    ಚೀನಾ ಕೈಗೊಂಬೆ ನೇಪಾಳದಿಂದ ಇದೆಂಥ ಉದ್ಧಟತನ: ಪಠ್ಯಪುಸ್ತಕ, ನಾಣ್ಯಗಳಲ್ಲಿ ಪ್ರಿಂಟ್​ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts