More

    ಕರೊನಾ ಭೀತಿ ಹಿನ್ನೆಲೆ 7,8,9ನೇ ತರಗತಿ ಪರೀಕ್ಷೆಗಳ ಮುಂದೂಡಿಕೆ: ಪರಿಸ್ಥಿತಿ ನೋಡಿಕೊಂಡು ಪರಿಷ್ಕೃತ ವೇಳಾಪಟ್ಟಿ ನಿಗದಿ

    ಬೆಂಗಳೂರು: ಮಹಾಮಾರಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 7,8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ಮಾರ್ಚ್​ 31ರವರೆಗೆ ಮೂಂದೂಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್​ ಅವರು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.

    ಮಾರ್ಚ್​ 31ರ ನಂತರ ಕರೊನಾ ವೈರಸ್​ ಪರಿಸ್ಥಿತಿಯನ್ನು ನೋಡಿಕೊಂಡು ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ನಿಗದಿಪಡಿಸಲಾಗುವುದು ಎಂದು ಸಚಿವ ಸುರೇಶ್​ ಕುಮಾರ್​ ಹೇಳಿದ್ದಾರೆ.

    ಕರೊನಾ ಭೀತಿಯಿಂದ ಈಗಾಗಲೇ ಎಲ್​.ಕೆ.ಜಿ ಮತ್ತು 1 ರಿಂದ 6ನೇ ತರಗತಿಯವರೆಗಿನ ಪರೀಕ್ಷೆಗಳನ್ನು ರದ್ದುಗೊಳಿಸಿ ಬೇಸಿಗೆ ರಜೆಯನ್ನು ಘೋಷಿಸಲಾಗಿದೆ. ಆಯಾ ತರಗತಿಗಳಲ್ಲಿ ಮಕ್ಕಳು ತೆಗೆದುಕೊಂಡ ಗ್ರೇಡ್​ಗಳ ಆಧಾರದ ಮೇಲೆ ಮುಂದಿನ ತರಗತಿಗೆ ಉತ್ತೀರ್ಣರನ್ನಾಗಿ ಮಾಡಲು ಶಿಕ್ಷಣ ಇಲಾಖೆ ಆಯಾ ಶಾಲೆಗೆ ಸೂಚಿಸಿದೆ.

    ಇನ್ನೂ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷಾ ಪೂರ್ವ ಸಿದ್ಧತೆ ಹೆಸರಿನಲ್ಲಿ ರಜೆಯನ್ನು ನೀಡಲಾಗಿದೆ. ವಿಧ್ಯಾರ್ಥಿಗಳು ಪರೀಕ್ಷೆಯ ದಿನ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಈ ವೇಳೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗದುಕೊಳ್ಳುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.

    ಕರೊನಾ ಭೀತಿ ಹಿನ್ನೆಲೆ 7,8,9ನೇ ತರಗತಿ ಪರೀಕ್ಷೆಗಳ ಮುಂದೂಡಿಕೆ: ಪರಿಸ್ಥಿತಿ ನೋಡಿಕೊಂಡು ಪರಿಷ್ಕೃತ ವೇಳಾಪಟ್ಟಿ ನಿಗದಿ

    ಕರೊನಾ ಭೀತಿ ಹಿನ್ನೆಲೆ 7,8,9ನೇ ತರಗತಿ ಪರೀಕ್ಷೆಗಳ ಮುಂದೂಡಿಕೆ: ಪರಿಸ್ಥಿತಿ ನೋಡಿಕೊಂಡು ಪರಿಷ್ಕೃತ ವೇಳಾಪಟ್ಟಿ ನಿಗದಿ

    1ರಿಂದ 6ನೇ ತರಗತಿಯವರಿಗೆ ಬೇಸಿಗೆ ರಜೆ ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯ: ಶಿಕ್ಷಣ ಇಲಾಖೆಯ ಹೊಸ ಸುತ್ತೋಲೆ

    1- 6ನೇ ತರಗತಿ ಮಕ್ಕಳಿಗೆ ಮುಂದಿನ ವರ್ಗಕ್ಕೆ ಬಡ್ತಿ ನೀಡಿ ಆದೇಶ ಹೊರಡಿಸಿದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts