More

    ಕ್ಷೇತ್ರ ಆಯ್ಕೆ ಬಗ್ಗೆ ಬಾಯಿಬಿಡದ ಸಿದ್ದರಾಮಯ್ಯ: ಮಾಜಿ ಸಿಎಂ ನಡೆಗೆ ರಾಜಕೀಯ ವಲಯದಲ್ಲೂ ಕುತೂಹಲ

    ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆಂಬ ಕುತೂಹಲ ಸ್ವಪಯರಷ್ಟೇ ಅಲ್ಲದೇ ಇತರೆ ಪಕ್ಷದವರಿಗೂ ಒಂದು ಕುತೂಹಲ ಇದ್ದೇ ಇದೆ.

    ಈ ನಡುವೆ ತಾವು ಯಾವ ಕ್ಷೇತ್ರದಿಂದ ಕಣಕ್ಕಿಳಿಯಬೇಕೆಂಬ ಬಗ್ಗೆ ಸಿದ್ದರಾಮಯ್ಯ ಇನ್ನಷ್ಟು ಸ್ಪಷ್ಟ ಮಾಡಿಕೊಂಡಿಲ್ಲ ಎಂಬ ಸಂಗತಿ ಬಯಲಾಗಿದೆ.

    ಬಾದಾಮಿ ಕ್ಷೇತ್ರ ಬಿಟ್ಟುಕೊಡುವಂತೆ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಮತ್ತು ಅವರ ಬೆಂಬಲಿಗರ ಹೇಳಿಕೆ ನಡುವೆ ಸಿದ್ದರಾಮಯ್ಯರ ಕ್ಷೇತ್ರ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿತ್ತು.

    ಬುಧವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನನಗೆ ಎಲ್ಲ ಕಡೆ ನಿಲ್ಲಿ ಅನ್ನುತ್ತಾರೆ. ಕೋಲಾರ, ಕೊಪ್ಪಳ, ಚಾಮರಾಜನಗರದಲ್ಲೂ ನಿಲ್ಲಿ ಅನ್ನುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲೂ ನಿಲ್ಲಿ ಅಂದಿದ್ದಾರೆ. ನಾನೇ ಬೇಡ ಅಂತ ಸುಮ್ಮನಾಗಿದ್ದೇನೆ. ವರುಣಾದಲ್ಲೂ ನಿಲ್ಲಿ ಅಂತಾರೆ ಎಂದು ತಮ್ಮ ಮುಂದಿರುವ ಆಯ್ಕೆ ಹಾಗೂ ಒತ್ತಾಯದ ಕುರಿತು ವಿವರಣೆ ನೀಡಿದರು.

    ಈಗಲೇ ಕ್ಷೇತ್ರ ನಿಶ್ಚಯ ಮಾಡಿಕೊಂಡರೆ ಎದಯರಾಳಿಗಳಿಗೆ ರಾಜಕೀಯ ಹಣಿಯಲು ಸಮಯ ಕೊಟ್ಟಂತೆ ಎಂಬ ದೂರಾಲೋಚನೆಯೂ ಇರಬಹುದು ಎಂಬ ಮಾತು ಪಕ್ಷದಲ್ಲಿದೆ. 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರೀ ಅಂತರಿಂದ ಸೋತಿದ್ದಲ್ಲದೇ ಬಾದಾಮಿಯಲ್ಲಿ ಕೂದಲೆಳೆ ಅಂತದಲ್ಲಿ ಗೆದ್ದಿದ್ದು, ಈಗಲೂ ಸಹ ತಮ್ಮ ಎದುರಾಳಿಗಳ ಒಗ್ಗಟ್ಟಿನ ಬಗ್ಗೆ ಎಚ್ಚರಿಕೆಯಲ್ಲೇ ಇದ್ದಂತೆ ಕಾಣಿಸಿದೆ.

    ಸರ್ಕಾರದಿಂದ ಅಕ್ಷಮ್ಯ ಅಪರಾಧ
    ನಾರಾಯಣಗುರು ಒಬ್ಬ ದಾರ್ಶನಿಕರು, ಕೇರಳದಲ್ಲಿ ನಂಬೂದರಿಗಳ ದೌರ್ಜನ್ಯ ಹೆಚ್ಚಾಗಿತ್ತು, ಕೆಳಗಿನವರನ್ನು ಅಸ್ಪೃಷ್ಯರ ರೀತಿ ನೋಡುತ್ತಿದ್ದರು. ನಾರಾಯಣ ಗುರುಗಳು ಇದರ ವಿರುದ್ಧ ಚಳುವಳಿ ಆರಂಭಿಸಿದ್ದರು, ನೀವೇ ದೇಗುಲ ಕಟ್ಟಿ ಪೂಜೆ ಮಾಡಿ ಎಂದ ಇದ್ದರು. ಜನರಲ್ಲಿ ಜಾಗೃತಿ ಮೂಡಿಸಿದ್ದವರು. ಅಂತಹ ವ್ಯಕ್ತಿಗೆ ಟ್ಯಾಬ್ಲೋ ಗೆ ತಿರಸ್ಕರಿಸಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

    ಕೇಂದ್ರ ಸರ್ಕಾರ ಅಕ್ಷಮ್ಯ ಅಪರಾಧ ವೆಸಗಿದೆ. ಕೇಂದ್ರ ಕ್ರಮದ ವಿರುದ್ಧ ಜನರಿಗೆ ನೋವಾಗಿದ್ದು, ಇವತ್ತು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.

    ಫೆಬ್ರುವರಿಯಲ್ಲಿ ಶಾಲೆ ಓಪನ್‌ ಆಗತ್ತಾ? ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗದಿಯಂತೆ ನಡೆಯುತ್ತಾ? ಸಚಿವ ನಾಗೇಶ್ ಹೇಳಿದ್ದೇನು ನೋಡಿ…

    VIDEO: ರಾಷ್ಟ್ರಗೀತೆ ಹಾಡುತ್ತಲೇ ಪ್ರಾಣ ತ್ಯಜಿಸಿದ ಹಿರಿಯ ಪತ್ರಕರ್ತ- ಚಿಕ್ಕೋಡಿಯಲ್ಲೊಂದು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts