More

    ಕನ್ನಡದಲ್ಲಿ ಸೈ… ಕೃಷಿಯಲ್ಲಿ ಶಹಭಾಸ್​… ಡಿಸೈನಿಂಗ್​ನಲ್ಲಿ ಭೇಷ್​​… ನಾಲ್ಕು ವರ್ಷದ ‘ಸಾಧನೆ’ ನೋಡಿ…

    ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಎನಿಸಿಕೊಂಡು, ಅಕ್ರಮ ಆಸ್ತಿ ಗಳಿಕೆಯಲ್ಲಿ ಜೈಲುಪಾಲಾಗಿರುವ ಶಶಿಕಲಾ ನಟರಾಜನ್​ ಅವರ ಬಿಡುಗಡೆ ಇನ್ನೇನು ಸನ್ನಿಹಿತವಾಗುತ್ತಿದೆ. ಕೋರ್ಟ್​ ಆದೇಶದ ಮೇರೆಗೆ 10 ಕೋಟಿ ರೂಪಾಯಿ ದಂಡ ಕಟ್ಟಿ ಬರುವ ಜನವರಿಯಲ್ಲಿ ಜೈಲಿನಿಂದ ಹೊರಕ್ಕೆ ಬರಲು ಅಣಿಯಾಗುತ್ತಿದ್ದಾರೆ.

    2017ರ ಫೆಬ್ರುವರಿ 15ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಶಶಿಕಲಾ ಅಲಿಯಾಸ್​ ಚೆನ್ನಮ್ಮಾ, ಈ ನಾಲ್ಕು ವರ್ಷಗಳ ಜೈಲುವಾಸದಲ್ಲಿ ಅವರದ್ದು ಅನೇಕ ಸಾಧನೆಗಳಿವೆ! ಅವುಗಳಲ್ಲಿ ಮುಖ್ಯವಾಗಿ ಕನ್ನಡ ಮಾತನಾಡುವುದನ್ನು ಕಲಿತಿರುವುದು ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು.

    ಅವರು ಚೆನ್ನಾಗಿ ಕನ್ನಡ ಮಾತನಾಡುವುದನ್ನು ಕಲಿತುಕೊಂಡಿದ್ದಾರಂತೆ. ತಮಿಳುನಾಡು ಮೂಲದ ಶಶಿಕಲಾ ಅವರಿಗೆ ಕನ್ನಡದ ಗಂಧಗಾಳಿಯೇ ಇರಲಿಲ್ಲ. ಆದರೆ ಅವರು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇದ್ದುದರಿಂದ ಕನ್ನಡ ಕಲಿಕೆ ಅನಿವಾರ್ಯವಾಗಿತ್ತು. ಇದರಿಂದ ಅವರು ಕನ್ನಡವನ್ನು ಮಾತನಾಡುವುದು ಮಾತ್ರವಲ್ಲದೇ ಬರೆಯುವುದನ್ನೂ ಕಲಿತುಕೊಂಡಿದ್ದಾರಂತೆ. ಈಗ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಹ ಕೈದಿಗಳ ಜತೆ ಅವರು ಕನ್ನಡದಲ್ಲೇ ವ್ಯವಹಾರಿಸುತ್ತಿದ್ದಾರಂತೆ.

    ಇದನ್ನೂ ಓದಿ: ಡ್ರಗ್ಸ್​ ಕೇಸ್​: ತಾರಾ ದಂಪತಿಗೆ ಅಂತೂ ಸಿಕ್ತು ಬೇಲ್​

    ಕೃಷಿಯಲ್ಲಿ ಶಹಭಾಸ್​ಗಿರಿ ಗಿಟ್ಟಿಸಿಕೊಂಡಿದ್ದಾರೆ ಶಶಿಕಲಾ. ಅರ್ಧ ಎಕರೆ ಜಮೀನಿನಲ್ಲಿ ಬೇಸಾಯ ಮಾಡಿದ್ದು, ಒಂದು ಟನ್ ಪಪ್ಪಾಯ ಬೆಳೆದಿದ್ದಾರಂತೆ. ಸ್ವತಃ ಗುದ್ದಲಿ ಹಿಡಿದು ಪಪ್ಪಾಯ ನೆಟ್ಟು ಮಿಶ್ರ ಬೆಳೆ ಪದ್ದತಿಯಲ್ಲಿ ಬೆಳೆ ತೆಗೆದಿದ್ದಾರೆ. ಇವುಗಳ ಜತೆಗೆ ಜೈಲಿನ ತೋಟದಲ್ಲಿಯೇ ತೊಗರಿ, ಬೀನ್ಸ್, ಬದನೆಕಾಯಿ, ನುಗ್ಗೆಕಾಯಿ ಬೆಳೆ ಕೂಡ ಬೆಳೆದಿ ಮಿಶ್ರ ಬೇಸಾಯದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ ಎನ್ನಲಾಗಿದೆ. ಗುಲಾಬಿ ತೋಟವನ್ನೂ ನಳನಳಿಸುವಂತೆ ಮಾಡಿದ್ದಾರಂತೆ.

    ಇಷ್ಟು ಮಾತ್ರವಲ್ಲದೇ ಡಿಸೈನಿಂಗ್​ನಲ್ಲಿಯೂ ಈ ಅವಧಿಯಲ್ಲಿ ನುರಿತಿರುವ ಶಶಿಕಲಾ ಅವರು, ಸೀರೆ ಡಿಸೈನ್​,ಸರ ಡಿಸೈನ್ ಚೆನ್ನಾಗಿ ಮಾಡುತ್ತಿದ್ದಾರಂತೆ.

    ಇವೆಲ್ಲವುಗಳಿಂದ ಜೈಲಾಧಿಕಾರಿಗಳು ಮತ್ತು ಸಿಬ್ಬಂದಿ ಬಳಿ ಶಹಭಾಸ್​ಗಿರಿ ಗಿಟ್ಟಿಸಿಕೊಂಡಿರುವ ಶಶಿಕಲಾ, ಎಲ್ಲರ ಪ್ರಶಂಸೆಗೂ ಪಾತ್ರರಾಗಿದ್ದಾರೆ.

    ಶಶಿಕಲಾ ವಿರುದ್ಧ 1997 ರಲ್ಲಿ ಅಕ್ರಮ ಹಣ ಸಂಪಾದನೆ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಶಶಿಕಲಾ ಅವರನ್ನು 1997 ಹಾಗೂ 2014ರಲ್ಲಿ ಎರಡು ಬಾರಿ ಬಂಧಿಸಲಾಗಿದೆ. ಆ ಬಳಿಕ ಶಶಿಕಲಾಗೆ 4 ವರ್ಷ ಜೈಲು 10 ಕೋಟಿ ದಂಡವನ್ನ ನ್ಯಾಯಾಲಯ ವಿಧಿಸಿತ್ತು.‌

    ತಾಯಿ ಕಿಡ್ನಿ ನೀಡಿದರೂ ಬದುಕುಳಿಯಲಿಲ್ಲ ಕಿರುತೆರೆ ನಟಿ

    ದುಬೈನಲ್ಲೂ ಭಾರತದವನ ಬಿಡದ ಪಾಕ್​ ಕಳ್ಳರು- ಹಲ್ಲೆ ಮಾಡಿ ದರೋಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts