More

    ರೋಚಕ ಘಟ್ಟ ತಲುಪಿದ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ: ಎರಡು ದಶಕಗಳ ನಂತರವೂ ಬದಲಾಗೋದು ಡೌಟಾ?

    ನವದೆಹಲಿ: ಕಾಂಗ್ರೆಸ್​ ಚುನಾವಣೆಗೆ ಕೆಲವೇ ಎರಡೇ ದಿನಗಳು ಬಾಕಿ ಇವೆ. ಸೋನಿಯಾಗಾಂಧಿ ಹಾಗೂ ರಾಹುಲ್​ ಗಾಂಧಿ ಹೊರತಾಗಿ ಈ ಬಾರಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ಬೇರೆಯವರಿಗೆ ಒಲಿಯಲಿದೆಯೇ ಎಂಬ ಪ್ರಶ್ನೆ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈಗಿನ ಸದ್ಯದ ಸ್ಥಿತಿ ನೋಡಿದರೆ, ಈ ಖುರ್ಚಿ ಗಾಂಧಿಯೇತರರಿಗೆ ಒಲಿಯುವ ಸಾಧ್ಯತೆ ಕಡಿಮೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

    ಇದಾಗಲೇ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಂಸದ ಶಶಿ ತರೂರ್ ಈ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದಾರೆ. ನಿನ್ನೆ ತಾವೂ ಈ ಹುದ್ದೆಯ ಆಕಾಂಕ್ಷಿ ಎಂದು ಸಂಸದ ದಿಗ್ವಿಜಯ ಸಿಂಗ್​ ಕೂಡ ಹೇಳಿಕೊಂಡಿದ್ದರು. ಪಕ್ಷದ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಶಶಿತರೂರ್ ಅವರಿಗೆ ಸೋನಿಯಾ ಗಾಂಧಿ ಶಶಿ ತರೂರ್​ ಅವರಿಗೆ ಇದಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.

    ಆದರೆ ಇವೆಲ್ಲವುಗಳ ನಡುವೆ ಕುತೂಹಲದ ಬೆಳವಣಿಗೆಯಲ್ಲಿ ಈ ಖುರ್ಚಿಯ ಮೇಲೆ ಸೋನಿಯಾ, ರಾಹುಲ್​ ಬಿಟ್ಟು ಮೂರನೆಯವರನ್ನು ಕುಳ್ಳರಿಸಲು ಹಲವು ಕಾಂಗ್ರೆಸ್​ ನಾಯಕರು ಉತ್ಸುಕರಾಗಿಲ್ಲದಂತೆ ತೋರುತ್ತಿದೆ. 2019ರ ಸಾರ್ವತ್ರಿಕ ಚುನಾವಣೆಯ ಸೋಲಿನ ನಂತರ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಪಕ್ಷದ ಸದಸ್ಯರು ಮತ್ತೆ ಅಧ್ಯಕ್ಷರಾಗುವಂತೆ ಒಪ್ಪಿಸಲು ಎಷ್ಟೇ ಪ್ರಯತ್ನಿಸಿದರೂ, ಆ ಎಲ್ಲಾ ಮನವಿಗಳನ್ನು ತಿರಸ್ಕರಿಸಿದ್ದರು ಎಂದೇ ಹೇಳಲಾಗುತ್ತಿದೆ. ಇದರ ಹೊರತಾಗಿಯೂ ಇವರನ್ನು ಬಿಟ್ಟು ಬೇರೆ ನಾಯಕರಿಗೆ ಬೆಂಬಲ ಸೂಚಿಸಲು ಸಾಧ್ಯವೇ ಇಲ್ಲ ಎಂಬ ಕೂಗು ಕೇಳಿಬರುತ್ತಿರುವುದಾಗಿ ವರದಿಯಾಗಿದೆ.

    ಈ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದವರು ಸಂಸದ ಶಶಿ ತರೂರ್‌. ಸೋನಿಯಾ ಗಾಂಧಿಯವರೂ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಇವರೇ ಅಧ್ಯಕ್ಷರಾಗಬಹುದು ಎಂದೇ ಹೇಳಲಾಗುತ್ತಿದೆ. ಆದರೆ ಶಶಿ ತರೂರ್​ ಅವರ ತವರು ಕೇರಳದಲ್ಲಿನ ಕಾಂಗ್ರೆಸ್​ ನಾಯಕರು ಮಾತ್ರ ಇದಕ್ಕೆ ಸುತರಾಂ ಒಪ್ಪುತ್ತಿಲ್ಲ. ಯಾವುದೇ ಕಾರಣಕ್ಕೂ ನಾವು ತರೂರ್​ ಅವರಿಗೆ ಬೆಂಬಲ ಕೊಡುವುದಿಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರೇ ಪುನಃ ಪಕ್ಷದ ಆಡಳಿತವನ್ನು ವಹಿಸಿಕೊಳ್ಳಬೇಕೆಂದು ಎಂಬ ಒತ್ತಾಯ ಮಾಡುತ್ತಿದ್ದಾರೆ.

    ‘ಶಶಿ ತರೂರ್ ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಅಭ್ಯರ್ಥಿಯ ಬಗ್ಗೆ ಎಲ್ಲರಿಗೂ ಒಮ್ಮತ ಇರಬೇಕು. ಆದರೆ ನಾವು ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರಾಗುವಂತೆ ವಿನಂತಿಸುತ್ತಿದ್ದೇವೆ’ ಎಂದು ಕಾಂಗ್ರೆಸ್‍ನ ಸಚೇತಕ ಕೆ ಸುರೇಶ್ ಒತ್ತಾಯಿಸಿದ್ದಾರೆ.

    ಮತ್ತೊಂದೆಡೆ ಸಂಸದ ಬೆನ್ನಿ ಬೆಹನನ್ ಅವರು ಕೂಡ ಶಶಿ ತರೂರ್​ ಅವರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಚುನಾವಣೆಯಲ್ಲಿ ತರೂರ್​ ಸ್ಪರ್ಧಿಸುತ್ತಾರೆ ಎಂದು ಅನಿಸುವುದಿಲ್ಲ. ಅವರು ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಪಾಲಿಸುತ್ತಾರೆ’ ಎಂದು ಅವರು ಹೇಳಿದ್ದಾರೆ! ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಅವರಿಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹಲವು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಸದ್ಯದ ಕುತೂಹಲ. (ಏಜೆನ್ಸೀಸ್​)

    ‘ಭಾರತ್​ ಜೋಡೋ ಯಾತ್ರೆ’ ಬ್ಯಾನರ್​ನಲ್ಲಿ​ ವೀರ್​ ಸಾವರ್ಕರ್​ ಫೋಟೋ! ಕೊನೆಗೂ ಸತ್ಯ ಒಪ್ಪಿಕೊಂಡ್ರಾ ಎಂದ ಅಭಿಮಾನಿಗಳು

    ಆಸ್ಕರ್​ ಅಂಗಳದಲ್ಲಿ ಗುಜರಾತಿ ಸಿನಿಮಾ ‘ಚೆಲ್ಲೋ ಷೋ’: ಚಿತ್ರದಲ್ಲಿ ಕನ್ನಡಿಗನ ಸಾಧನೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts