More

    ‘ಮಾಸಪೂಜೆ’ಗಾಗಿ ಐದು ದಿನ ತೆರೆಯಲಿದೆ ಶಬರಿಮಲೆಯ ದೇಗುಲ- ಮಾರ್ಗಸೂಚಿಗಳೇನು? ಇಲ್ಲಿದೆ ಮಾಹಿತಿ…

    ತಿರುವನಂತಪುರ: ಕೋವಿಡ್‌ ಹಿನ್ನೆಲೆಯಲ್ಲಿ ಶಬರಿಮಲೆಯ ಅಯ್ಯಪ್ಪ ದೇವಸ್ಥಾನವನ್ನು ಇಲ್ಲಿಯವರೆಗೆ ಮುಚ್ಚಲಾಗಿತ್ತು. ಇದೀಗ ಮಾಸಪೂಜೆಗಾಗಿ ಐದು ದಿನಗಳವರೆಗೆ ದೇವಾಲಯವನ್ನು ತೆರೆಯಲಾಗುತ್ತಿದ್ದು, ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ.

    ಇದೇ 17ರ ಶನಿವಾರದಿಂದ 21ರ ವರೆಗೆ ತೆರೆಯಲಾಗುತ್ತಿದ್ದು, ಅಯ್ಯಪ್ಪನ ದರ್ಶನ ಪಡೆಯಬಹುದಾಗಿದೆ ಎಂದು ತಿರುವಾಂಕುರ್‌ ದೇವಸ್ವಂ ಮಂಡಳಿ ಮಾಹಿತಿ ನೀಡಿದೆ.

    ಇಲ್ಲಿಗೆ ಹೋಗಬಯಸುವವರಿಗಾಗಿ ಕೆಲವೊಂದು ಮಾರ್ಗಸೂಚಿಗಳಿವೆ. ಅದೇನೆಂದರೆ: ಕರೊನಾ ಲಸಿಕೆ ಪಡೆದ ಪ್ರಮಾಣ ಪತ್ರ ಅಥವಾ 48 ಗಂಟೆಗಳೊಳಗೆ ಕೋವಿಡ್‌ ಟೆಸ್ಟ್ ಮಾಡಿಸಿದ, ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ. ಆನ್‍ಲೈನ್ ಮೂಲಕ ಬುಕಿಂಗ್ ಮಾಡಿಕೊಂಡ ಗರಿಷ್ಠ 5 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

    ಕಳೆದ ವರ್ಷ ಹೊಸ ಆನ್‍ಲೈನ್ ಪೋರ್ಟಲ್ ಅನ್ನು ಕೇರಳ ಪೊಲೀಸರು ಹಾಗೂ ದೇವಸ್ವಂ ಮಂಡಳಿಯು ಶುರು ಮಾಡಿದೆ. ಇದರ ಮೂಲಕವೇ ವರ್ಚುವಲ್‌ ಕ್ಯೂ, ಪ್ರಸಾದ, ಪೂಜೆ, ವಾಸ್ತವ್ಯ, ಕಾಣಿಕೆ ಬುಕ್ ಮಾಡಬೇಕಿದೆ. ಈ ಮೂಲಕ ಯಾವುದೇ ರೀತಿಯ ಗೋಜಲು ಇಲ್ಲದೇ, ಮುಕ್ತ ದರ್ಶನಕ್ಕೆ ದೇವಸ್ಥಾನ ಮಂಡಳಿ ವ್ಯವಸ್ಥೆ ಕಲ್ಪಿಸಿದೆ ಎದು ಮಂಡಳಿ ಹೇಳಿದೆ. ಹಾಗೆಯೇ ನೋಂದಣಿ ಮಾಡಿಸಲು ಮೊಬೈಲ್ ನಂಬರ್, ಇ-ಮೇಲ್ ಐಡಿ ಕಡ್ಡಾಯವಾಗಿದೆ.

    ಜಾತಿ ಬಣ್ಣಕ್ಕೆ ತಿರುಗಿದ ಸುಮಲತಾ, ಎಚ್‌ಡಿಕೆ ವಾಕ್ಸಮರ: ರಾಕ್‌ಲೈನ್ ವಿರುದ್ಧ ಹಳ್ಳಿಕಾರ್ ಸಮುದಾಯದ ಪ್ರತಿಭಟನೆ

    VIDEO: ದಿಢೀರ್‌ ಪತ್ತೆಯಾದ ರಮ್ಯಾ ಹೇಳಿದ್ರು ಗುಟ್ಟಿನ ವಿಷ್ಯ: ಆದರೆ ಅದೊಂದು ಪ್ರಶ್ನೆಗೆ ಮಾತ್ರ ಗಪ್‌ಚುಪ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts