More

    ದ್ವಿತೀಯ ಪಿಯು ಮಕ್ಕಳು ಪ್ರಶ್ನೆ ಪತ್ರಿಕೆ ಮನೆಗೆ ಒಯ್ದು 5 ದಿನಗಳಲ್ಲಿ ಉತ್ತರ ಬರೀಬೋದು- ಇದೆಲ್ಲಿ ಗೊತ್ತಾ?

    ರಾಯಪುರ: ಕರೊನಾದಿಂದಾಗಿ ಶಿಕ್ಷಣ ವ್ಯವಸ್ಥೆಯಂತೂ ಅಲ್ಲೋಲ ಕಲ್ಲೋಲವಾಗಿದೆ. ಮಕ್ಕಳಿಗೆ ಶಾಲೆಯೂ ಇಲ್ಲ, ಪರೀಕ್ಷೆಯೂ ಇಲ್ಲ. ಈಗಂತೂ ಹೆಚ್ಚಿನ ರಾಜ್ಯಗಳಲ್ಲಿ ಲಾಕ್‌ಡೌನ್‌ನಿಂದಾಗಿ ಆನ್‌ಲೈನ್‌ ತರಗತಿಗಳೂ ನಡೆಯುತ್ತಿಲ್ಲ. ಶೈಕ್ಷಣಿಕ ಭವಿಷ್ಯದ ಬಹುಮುಖ್ಯ ಘಟ್ಟ ಎಂದೇ ಬಿಂಬಿಸಲಾಗುವ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಬಗ್ಗೆಯೂ ಸರ್ಕಾರಗಳು ನಿರ್ಧರಿಸಲಾಗದೇ ಸೋತುಹೋಗಿವೆ.

    ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ಛತ್ತೀಸಗಢ ಸರ್ಕಾರ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಇದಾಗಲೇ 10ನೇ ತರಗತಿಯ ಪರೀಕ್ಷೆಯನ್ನು ರದ್ದು ಮಾಡಿ, ಈ ವರ್ಷ ಪಡೆದಿರುವ ಒಟ್ಟಾರೆ ಅಂಕಗಳ ಆಧಾರದ ಮೇಲೆ ಅಂತಿಮ ಅಂಕಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಇದರ ಬೆನ್ನಲ್ಲೇ ಇದೀಗ 12ನೇ ತರಗತಿಯ ಪರೀಕ್ಷೆ ಕುರಿತಂತೆಯೂ ಛತ್ತಿಸಗಢ ಸರ್ಕಾರ ಬಹುದೊಡ್ಡ ತೀರ್ಮಾನ ತೆಗೆದುಕೊಂಡಿದೆ.

    ಅದೇನೆಂದರೆ, 12 ನೇ ತರಗತಿಯ ಪರೀಕ್ಷೆಗಳನ್ನು ಮನೆಯಿಂದಲೇ ನಡೆಸಲು ಈ ಸರ್ಕಾರ ತೀರ್ಮಾನಿಸಿದೆ. ವಿದ್ಯಾರ್ಥಿಗಳು ನಿಗದಿತ ಕೇಂದ್ರಗಳಿಂದ ಪ್ರಶ್ನೆ ಪತ್ರಿಕೆಗಳು ಮತ್ತು ಖಾಲಿ ಉತ್ತರ ಪತ್ರಿಕೆಗಳನ್ನು ತೆಗೆದುಕೊಂಡು ಮನೆಗೆ ಹೋಗಬೇಕು. ಪ್ರಶ್ನೆ ಪತ್ರಕೆಗಳನ್ನು ನೋಡಿ ಐದು ದಿನಗಳಲ್ಲಿ ಉತ್ತರ ಬರೆದು ಕಳುಹಿಸಬೇಕು!

    ಪರೀಕ್ಷೆಗಳು ಜೂನ್ 1 ರಿಂದ ಆರಂಭವಾಗಲಿದ್ದು, 1ರಿಂದ 5 ರವರೆಗೆ ಉತ್ತರ ಬರೆಯಲು ಅವಕಾಶ ನೀಡಲಾಗಿದೆ. ಈ ಕುರಿತು ಛತ್ತಿಸಗಢ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ವಿ.ಕೆ. ಗೋಯಲ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

    ಜೂನ್ 1 ರಿಂದ 5 ನೇ ತಾರೀಖಿನ ನಡುವೆ ಯಾವುದೇ ದಿನದಂದು ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಬಹುದು. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಮತ್ತು ಖಾಲಿ ಉತ್ತರ ಪತ್ರಿಕೆ ಪಡೆದುಕೊಂಡ ದಿನದಿಂದ 5 ದಿನಗಳ ಒಳಗೆ ಆಯಾ ಕೇಂದ್ರಗಳಲ್ಲಿ ಉತ್ತರ ಪ್ರತಿಗಳನ್ನು ಸಲ್ಲಿಸಬೇಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸುಮಾರು 2.86 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದು, ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

    ನಾನು ಶ್ಯೂರಿಟಿ ಹಾಕಿದ ಸಾಲಗಾರ ಹಣ ಪಾವತಿಸದೇ ಮೃತಪಟ್ಟರೆ ಕಾನೂನಿನಡಿ ಏನು ಪರಿಹಾರವಿದೆ?

    ಕೋವಿಡ್‌ಗೆ ಪರಿಣಾಮಕಾರಿಯಾದ ಕೊವ್ಯಾಕ್ಸಿನ್‌ಗೆ ಅನುಮೋದನೆ ಅಡ್ಡಿ! ಆರೋಗ್ಯ ಸಂಸ್ಥೆಗೆ ಕೇಂದ್ರದ ದೌಡು

    ವಯಸ್ಸಾದರೂ ಮದುವೆಯಾಗಿಲ್ಲವೆಂದು ಹೆತ್ತವರಿಂದಲೇ ಸಿನಿಮಾ ನಿರ್ದೇಶಕನ ಬರ್ಬರ ಹತ್ಯೆ- ದೇಹ ಪೀಸ್‌ ಪೀಸ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts